ಅವ್ಯವಸ್ಥೆಗಳ ಆಗರ ಕುಂಬಳೆ ಪೇಟೆ
ಅಸ್ತವ್ಯಸ್ತ ವಾಹನ ಪಾರ್ಕಿಂಗ್, ಶೌಚಾಲಯ, ಮೀನು ಮಾರ್ಕೆಟ್
Team Udayavani, Nov 21, 2019, 4:46 AM IST
ಕುಂಬಳೆ: ಕುಂಬಳೆ ಪೇಟೆಯ ಸಮಸ್ಯೆಗಳು ಬೆಳೆದಂತೆ ವಾಹನಗಳ ಸಂಖ್ಯೆಯೂ ಕುಂಬಳೆಯಲ್ಲಿ ದಿನದಿಂದ ದಿನಕ್ಕೆ ಅಧಿಕವಾಗಿ ಸಮಸ್ಯೆ ಕಾಡುತ್ತಿದೆ.ಕಟ್ಟಡದ ಆಯುಷ್ಯ ಮುಗಿದ ನೆಪದಲ್ಲಿ ಕುಂಬಳೆ ಹೃದಯಭಾಗದಲ್ಲಿದ್ದ ಬಸ್ ನಿಲ್ದಾಣ ಸಂಕೀರ್ಣ ಕಟ್ಟಡವನ್ನು ಗ್ರಾಮ ಪಂಚಾಯತ್ ಆಡಳಿತ ಕೆಡವಿದೆ. ಬಳಿಕ 5 ಕೋಟಿಯ ಹೊಸ ನಿಲ್ದಾಣ ಸಂಕೀರ್ಣ ಕಟ್ಟಡ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಆದರೆ ಇದೀಗ ಹೊಸ ಬಸ್ ನಿಲ್ದಾಣ ನಿರ್ಮಿಸಲು ಉದೇœಶಿಸಿದ ಸ್ಥಳದಲ್ಲಿ ವಾಹನಗಳು ನಿತ್ಯಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕಿಂಗ್‌ಮಾಡುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ನಿಲ್ದಾಣದೊಳಗೆ ಪ್ರವೇಶಿಸಲು ಮತ್ತು ನಿಲ್ದಾಣದಿಂದ ಹೊರ ತೆರಳಲು ಪ್ರಯಾಣಿಕರಿಗೆ ತೊಡಕಾಗಿದೆ.ಸಾಲದುದಕ್ಕೆ ನಿಲ್ದಾಣದ ಸುತ್ತ ಕೆಲವು ಸಂತೆ ವ್ಯಾಪಾರವೂ ಸಕ್ರಿಯವಾಗಿದೆ.
ವಚನ ಪಾಲಿಸದ ಆಡಳಿತ
ಕುಂಬಳೆ ನಿಲ್ದಾಣದ ಸುತ್ತಲೂ ವಾಹನಗಳ ಪಾರ್ಕಿಂಗ್ ಮತ್ತು ಸಂತೆಯ ಸಮಸ್ಯೆಯ ಕುರಿತು ಈ ಹಿಂದೆಯೇ ಉದಯವಾಣಿ ಆಡಳಿತದ ಗಮನ ಸೆಳೆದಿದೆ. ಪೊಲೀಸರಿಗೆ ದೂರು ಸಲ್ಲಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಲಾ ಗುವುದೆಂಬುದಾಗಿ ಗ್ರಾ.ಪಂ. ಅಧ್ಯಕ್ಷರು ಮತ್ತು ಪ್ರತಿಪಕ್ಷದ ವಾರ್ಡ್ ಪ್ರತಿನಿಧಿಯವರು ಭರವಸೆ ನೀಡಿ ತಿಂಗಳೇ ಸಂದರೂ ಇದು ಪಾಲನೆಯಾಗಿಲ್ಲ. ವಾಹನಗಳ ಮತ್ತು ಸಂತೆಯ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗಿ ಸಮಸ್ಯೆಯೂ ಅಧಿಕವಾಗುತ್ತಿದೆ.ಆದರೂ ಗ್ರಾ.ಪಂ.ಆಡಳಿತ ತೆಪ್ಪಗಿದ್ದು ದಿವ್ಯ ಮೌನ ಪಾಲಿಸುತ್ತಿದೆ.
ಶೌಚಾಲಯ ಸಮಸ್ಯೆ
ಅನೇಕ ವರ್ಷಗಳಿಂದ ಉಳಿದಿರುವ ಕುಂಬಳೆ ಪೇಟೆಯ ಶೌಚಾಲಯ ಸಮಸ್ಯೆ ಇನ್ನೂ ಪರಿಹಾರವಾಗದೆ ಉಳಿದಿದೆ.ಪೇಟೆಯಲ್ಲಿ ಸ್ಥಳ ಸಿಗದ ಕಾರಣ ಪೇಟೆಯಿಂದ ದೂರದ ಐಎಚ್‌ಆರ್‌ಡಿ ಕಾಲೇಜು ಬಳಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಆರಂಭಿಸಲಾಗಿದೆ. ಕೆಲವೊಂದು ಅಡ್ಡಿಯಿಂದ ಅರ್ಧದಲ್ಲಿ ಮೊಟಕುಗೊಂಡು ಇದೀಗ ಕಾಮಗಾರಿ ಮುಂದುವರಿಯುತ್ತಿದೆ. ಕಣಿಪುರ ಕ್ಷೇತ್ರ ಬಳಿಯ ರಸ್ತೆ ಪಕ್ಕದಲ್ಲಿ ನೂತನ ಶೌಚಾಲಯ ನಿರ್ಮಿಸಿದರೂ ಇದರಲ್ಲಿ ಮೂತ್ರಿಸಲು ಮಾತ್ರ ವ್ಯವಸ್ಥೆ ಮಾಡಲಾಗಿದೆ. ಇದರ ವಿದ್ಯುತ್ ಬಿಲ್ಲನ್ನು ಗ್ರಾಮ ಪಂಚಾಯತ್ ಪಾವತಿಸುತ್ತಿದೆ.ಆದರೆ ಪೇಟೆಯಲ್ಲಿ ಮಾತ್ರ ಶೌಚಾಲಯ ನಿರ್ಮಿಸಲು ಗ್ರಾ.ಪಂ.ಆಡಳಿತ ಮುಂದಾಗಿಲ್ಲವೆಂಬ ಆರೋಪ ಬಲವಾಗಿದೆ.ಆದುದರಿಂದ ಪೇಟೆಯಲ್ಲೊಂದು ಇ ಶೌಚಾಲಯವನ್ನಾದರೂ ನಿರ್ಮಿಸಲು ಮುಂದಾಗಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಮಸ್ಯೆಯ ಮೀನು ಮಾರುಕಟ್ಟೆ :
ಕುಂಬಳೆ ಮೀನು ಮಾರುಕಟ್ಟೆ ಅನೇಕ ವರ್ಷಗಳಿಂದ ಸದಾ ವಿವಾದಕ್ಕೆಡೆಯಾಗುತ್ತಿದೆ.ಗ್ರಾಮ ಪಂಚಾಯತ್ ಬೆಸ್ತರಿಗೆ ಮೀನು ಮಾರಲು ನಿರ್ಮಿಸಿದ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂಬುದಾಗಿ ಮೀನು ವ್ಯಾಪಾರ ಮಾರುಕಟ್ಟೆಯಿಂದ ಹೊರಗೆ ನಡೆಯುತ್ತಿದೆ.ಮಧ್ಯಾಹ್ನದ ಬಳಿಕ ಹೊರಗಿನ ರಸ್ತೆಯಲ್ಲೇ ಭರ್ಜರಿ ವ್ಯಾಪಾರ ಕುದುರುವುದು.ಹಲವು ಬಾರಿ ಇದಕ್ಕೆ ಪೊಲೀಸರು ಬೆತ್ತ ಬೀಸುವ ತನಕ ಮುಂದುವರಿದರೂ ಮತ್ತೆ ವ್ಯಾಪಾರ ಇಲ್ಲೇ ನಡೆಯುವುದು.ಮೀನಿನ ಮಲಿನ ನೀರು ರಸ್ತೆಯಲ್ಲಿ ಹರಿದು ಪೇಟೆ ಸೇರುವುದು.ಇದರಿಂದ ಮಾಲಿನ್ಯ ಸಮಸ್ಯೆಗೆ ಕಾರಣವಾಗಿದೆ.ಆರೋಗ್ಯ ಅಧಿಕಾರಿಗಳು ಕಣ್ಣೆತ್ತಿಯೂ ಮಾಲಿನ್ಯದತ್ತ ಲನೋಡುವುದಿಲ್ಲವೆಂಬ ಆರೋಪ ಸಾರ್ವಜನಿಕರದು.
ಸರಕಾರಕ್ಕೆ ಪ್ರಸ್ತಾವನೆ
ಗ್ರಾಮ ಪಂಚಾಯತಿನ 50ಲಕ್ಷ ನಿಧಿ ಸೇರಿಸಿ ಒಟ್ಟು 5 ಕೋಟಿ ನಿಧಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ .ವಾಣಿಜ್ಯ ಸಂಕೀರ್ಣ ಕಟ್ಟಡ ಮತ್ತು ಶೌಚಾಲಯವನ್ನು ಹೊಂದಿದ ಬಸ್ ನಿಲ್ದಾಣ ಮುಂದೆ ನಿರ್ಮಾಣವಾಗಲಿದೆ.ಈ ಮಧ್ಯೆ ಪೇಟೆಯಲ್ಲಿ 2 ಫೈಬರ್ ಶೌಚಾಲಯವನ್ನು ಸ್ಥಾಪಿಸಲಾಗುವುದು.ನಿಲ್ದಾಣ ಸುತ್ತ ನಾಹನ ಪಾರ್ಕಿಂಗ್ ಮತ್ತು ಸಂತೆ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು.
ಮೀನು ಮಾರಲು ನಿರ್ಮಿಸಿದ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂಬುದಾಗಿ ಮೀನು ವ್ಯಾಪಾರ ಮಾರುಕಟ್ಟೆಯಿಂದ ಹೊರಗೆ ನಡೆಯುತ್ತಿದೆ
-ಕೆ. ಎಲ್. ಪುಂಡರಿಕಾಕ್ಷ , ಅಧ್ಯಕ್ಷರು ಕುಂಬಳೆ ಗ್ರಾ.ಪಂಚಾಯತ್
ಆಡಳಿತ ಮುಂದಾಗಿಲ್ಲ
ಪೇಟೆಯ ಪಾರ್ಕಿಂಗ್.ಶೌಚಾ ಲಯ,ಮಾಲಿನ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ತ್ತಾಯಿಸಿದರೂ ಇದಕ್ಕೆ ಆಡಳಿತ ಮುಂದಾಗಿಲ್ಲ.ನಮ್ಮ ಮೇಲೆ ಗೂಬೆ ಕೂರಿಸಲು ಆಡಳಿತ ಶ್ರಮಿಸುತ್ತಿದೆ.
-ಸುಧಾಕರ ಕಾಮತ್, ಬಿಜೆಪಿ ಗ್ರಾ.ಪಂ.ಸದಸ್ಯ
ನಿರ್ಣಯ ಕೈಗೊಳ್ಳಲಾಗಿದೆ
ನಿಲ್ದಾಣ ಸುತ್ತ ವಾಹನ ಪಾರ್ಕಿಂಗ್ ಮತ್ತು ಪೇಟೆಯಲ್ಲಿ ಅಕ್ರಮ ಗೂಡಂಗಡಿ ಸ್ಥಾಪನೆಯನ್ನು ತೆರವುಗೊಳಿಸುವಂತೆ ಕಳೆದ 4 ತಿಂಗಳ ಹಿಂದೆಯೇ ಗ್ರಾಮಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
-ಕೆ.ರಮೇಶ ಭಟ್ , ವಾರ್ಡ್ ಸದಸ್ಯ
ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.