ಸಹಕಾರಿ ಸಪ್ತಾಹ: ಕಾಸರಗೋಡಿನಲ್ಲಿ ವರ್ಣಚಿತ್ರ ವೈಭವ


Team Udayavani, Nov 21, 2018, 3:55 AM IST

varna-21-11.jpg

ಕಾಸರಗೋಡು: 65 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕೇರಳ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ವರ್ಣಚಿತ್ರ ವೈಭವ ಗಮನ ಸೆಳೆಯಿತು. ಕಾಸರಗೋಡು ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಪ್ರಕೃತಿ ರಮಣೀಯ ದೃಶ್ಯ ಸಾನ್ನಿಧ್ಯದಲ್ಲಿ ಜಲವರ್ಣ ಮಾಂತ್ರಿಕ ಪಿ.ಎಸ್‌.ಪುಣಿಂಚಿತ್ತಾಯ ಅವರು ಚಿತ್ರ ಬಿಡಿಸಿ ಪ್ರಾತ್ಯಕ್ಷಿಕೆ ನೀಡಿ ವರ್ಣಚಿತ್ರ ವೈಭವವನ್ನು ಉದ್ಘಾಟಿಸಿದರು. ಕೇರಳದಾದ್ಯಂತ ವಿವಿಧ ಜಿಲ್ಲೆಗಳಿಂದ ತಲುಪಿದ ಸಹಕಾರಿ ಧುರೀಣರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

ಕಾಸರಗೋಡು ಜಿಲ್ಲೆಯ ಇಪ್ಪತ್ತು ಚಿತ್ರ ಕಲಾವಿದರು ಸಮಕಾಲೀನ ಸಂದರ್ಭಗಳನ್ನು ಕುಂಚದಲ್ಲಿ ನಿರೂಪಿಸಿದರು. ವರ್ತಮಾನದ ಅವ್ಯವಸ್ಥೆ, ತವಕ, ತಲ್ಲಣಗಳು, ಪ್ರಗತಿಪರ ಆಶಯಗಳು, ರಾಜಕೀಯ ಸಾಮಾಜಿಕ ವಿದ್ಯಮಾನಗಳು, ಜಾತಿ, ಮತ, ಧರ್ಮದ ಗೋಡೆಗಳನ್ನು ಕೆಡಹಿ ಐಕ್ಯತೆಯ ಸಂದೇಶ ಸಾರುವ ಭಾವ-ಅನುಭಾವದ ವರ್ಣಚಿತ್ರಗಳು ಕ ಕಲಾಕುಂಚದಲ್ಲಿ ಮೂಡಿ ಬಂದುವು.


ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್‌.ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ನಡೆದ ಈ ಚಿತ್ರ ರಚನಾ ಪ್ರದರ್ಶನದಲ್ಲಿ ಅವರ ಪುತ್ರ ಪ್ರವೀಣ್‌ ಪುಣಿಂಚಿತ್ತಾಯ, ಜಯಪ್ರಕಾಶ್‌ ಶೆಟ್ಟಿ ಬೇಳ, ಇ.ವಿ. ಭಟ್‌ ಕಾಂಞಂಗಾಡ್‌, ಎಸ್‌.ಬಿ.ಕೋಳಾರಿ ಪೆರ್ಣೆ, ನೇಶನಲ್‌ ಅಬ್ದುಲ್ಲ, ಸುರೇಶ್‌ ಎಂ. ಮಹಾಲಸಾ, ಸತೀಶ್‌ ಪೆರ್ಲ, ರವಿ ಪಿಲಿಕೋಡ್‌, ಇ.ವಿ. ಅಶೋಕನ್‌, ರಘು ಮಲ್ಲ, ಪ್ರಭಾ ನೀಲೇಶ್ವರ, ಕೆ.ಎಚ್‌. ಮೊಹಮ್ಮದ್‌, ದಿನಕರ ಲಾಲ್‌ ಕೆ.ವಿ., ಕೆ.ವಿ. ರಾಜೇಶ್‌ ಪಿಲಿಕೋಡ್‌, ಪ್ರಿಯಾ ಕರುಣನ್‌, ಶೀಬಾ ಎಯ್ನಾಕೋಟ್‌, ಅರ್ಜುನ್‌ ಅರವಿಂದ್‌ ಮೊದಲಾದವರು ಬಹುವರ್ಣ ವೈವಿಧ್ಯದ ಚಿತ್ರ ರಚಿಸಿದರು. ಮಾರಾಟವಾದ  ಚಿತ್ರಗಳಿಗೆ ಬಂದ ಮೊತ್ತವನ್ನು ಮುಖ್ಯ ಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಯಿತು.

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.