ಸಿ.ಪಿ.ಸಿ.ಆರ್.ಐ.ಯಲ್ಲಿ ಕೊಕ್ಕೋ ಅಂತಾರಾಷ್ಟ್ರೀಯ ಕಾರ್ಯಾಗಾರ
Team Udayavani, May 18, 2019, 6:00 AM IST
ಕಾಸರಗೋಡು: ಏಷ್ಯಾ ಮತ್ತು ಪೆಸಿಫಿಕ್ ಖಂಡಗಳ ಕೊಕ್ಕೋ ತಳಿ ಸಂಶೋಧಕರ ಒಂದು ವಾರದ ಕಾರ್ಯಾಗಾರ ಮೇ 20ರಿಂದ 25ರ ತನಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ.ಯಲ್ಲಿ ಜರಗಲಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ|ಎ.ಕೆ.ಸಿಂಗ್ ಮೇ 20ರಂದು ನೆರವೇರಿಸಲಿರುವರು. ಕೊಕ್ಕೋ ತಳಿ ಸಂಶೋಧನೆ, ಕೃಷಿ ವಿಭಾಗ, ಉತ್ಪಾದನೆ, ಸಂಸ್ಕರಣೆ, ಮಾರಾಟ, ರಫ್ತು, ಸಂಬಂಧಿತ ಉದ್ದಿಮೆಗಳ ಪ್ರಮುಖರು ಪಾಲ್ಗೊಳ್ಳುವ ಈ ಕಾರ್ಯಾಗಾರದಲ್ಲಿ ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಶ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಅಮೆರಿಕ, ಬೆಲ್ಜಿಯಂ ದೇಶಗಳಿಂದ 13 ಹಾಗೂ ಭಾರತೀಯ 31 ಗಣ್ಯರು ಭಾಗವಹಿಸುವರು.
ಕಾರ್ಯಕ್ರಮದ ಮುಖ್ಯ ಉದ್ದೇಶಗಳು ಹಾಗೂ ಇವುಗಳ ಸಾಫಲ್ಯಕ್ಕಾಗಿ ಕಾರ್ಯಾಗಾರದ ವಿಷಯಗಳು ಹೀಗಿವೆ. ಭೌಗೋಳಿಕವಾಗಿ ಕೊಕ್ಕೋ ವಲಯದ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಮೌಲ್ಯಮಾಪನಕ್ಕಾಗಿ ವಿವಿಧ ದೇಶಗಳ ಪ್ರಸ್ತುತ ಕಾರ್ಯಕ್ರಮಗಳ ಅವಲೋಕನ. ಕೊಕ್ಕೋಗೆ ಈಗ ಬಾಧಿಸುತ್ತಿರುವ ಕೀಟ – ರೋಗಗಳ ವಿವರಣೆ ಹಾಗೂ ಮುಂಬ ರುವ ಹವಾಮಾನದ ಏರುಪೇರಿನಿಂದ ರೋಗ – ಕೀಟ ಬಾಧೆಯಿಂದ ಸಂರಕ್ಷಣೆಗೆ ರೂಪುರೇಷೆ ತಯಾರಿ.
ಸಾಮಾಜಿಕ, ಆರ್ಥಿಕ ಸವಲತ್ತು ಗಳು, ಉತ್ಪಾದನೆ, ಸಂಸ್ಕರಣೆ, ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆಯ ಸ್ತರದಲ್ಲಿ ಕಾರ್ಯವೈಖರಿ, ಸಂಶೋಧನ ಒಡಂಬಡಿಕೆ ಸಾಧ್ಯತೆಗಳು ಹಾಗೂ ಭಾರತ ದಲ್ಲಿ ಹೆಚ್ಚುವರಿ ಪರಿಶೀಲನೆಗಳ ಪ್ರಾರಂಭ ಇವುಗಳ ಕುರಿತಾದ ಚರ್ಚೆ ನಡೆಯಲಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವವ ರಿಗಾಗಿ ವಿಟ್ಲ ಸಿ.ಪಿ.ಸಿ.ಆರ್.ಐ.ಯ ಸಂಶೋಧನಾ ಕ್ಷೇತ್ರ, ಕಿದು ಸಿ.ಪಿ.ಸಿ.ಆರ್.ಐ.ಯ ಕೃಷಿ ಕ್ಷೇತ್ರ ಹಾಗೂ ಕ್ಯಾಂಪ್ಕೋ ಸಂಸ್ಕರಣಾ ಕ್ಷೇತ್ರಗಳಿಗೆ ಭೇಟಿ ಕೂಡ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಪ್ರಸ್ತುತವಾಗಿ ಕೊಕ್ಕೋ ಬೇಡಿಕೆ 40,000 ಟನ್ ಇದ್ದು ವಾರ್ಷಿಕ ಬೇಡಿಕೆ ಶೇ. 10 ವೃದ್ಧಿಯಾಗುತ್ತಿದೆ. ಆದರೆ ಸ್ಥಳೀಯ ಉತ್ಪಾದನೆ ಈಗ ಕೇವಲ 18,000 ಟನ್ ಇದೆ. ಇದರ ಸೂಚನೆ ಯೆಂದರೆ ಕೊಕ್ಕೋ ಅಭಿವೃದ್ಧಿಗೆ ಬಹಳಷ್ಟು ಸಾಧ್ಯತೆ ಗಳಿವೆ ಮತ್ತು ಈ ಉದ್ದಿಮೆ ಲಾಭದಾಯಕ ವಾಗುವುದರಲ್ಲಿ ಸಂಶಯವಿಲ್ಲ.
ಸಂಪನ್ಮೂಲ ಅಭಿವೃದ್ಧಿ
ವಿಟ್ಲದ ಸಿ.ಪಿ.ಸಿ.ಆರ್.ಐ.ಯಲ್ಲಿ 1969ರಲ್ಲಿ ಕೊಕ್ಕೋ ಸಂಶೋಧನೆ ಆರಂಭ ವಾಗಿ ಈ 50 ವರ್ಷಗಳಲ್ಲಿ ಎಂಟು ತಳಿಗಳ ಅಭಿವೃದ್ಧಿ ನಡೆಸಲಾಗಿದೆ. ಕೊಚ್ಚಿಯ ಗೇರು ಹಾಗೂ ಕೊಕ್ಕೋ ಅಭಿವೃದ್ಧಿ ಮಂಡಳಿ ಬೆಳೆ ವ್ಯಾಪನಕ್ಕಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಹಕಾರೀ ಸಂಸ್ಥೆಯಾದ ಕ್ಯಾಂಪ್ಕೋ ಮಾರುಕಟ್ಟೆ ಹಾಗೂ ಸಂಸ್ಕರಣೆಗೆ ಬೆನ್ನೆಲುಬಾಗಿ ನಿಂತಿದೆ. ಖಾಸಗಿ ವಲಯದಲ್ಲಿ ಮೋಂಡೆಲೆಜ್ ಪ್ರವರ್ತಿಸುತ್ತಿರುವುದೂ ಕೊಕ್ಕೋ ವಲಯದ ಸ್ಥಿರತೆಗೆ ಕಾರಣ. ಕೊಕ್ಕೋ ಗ್ರಾಫ್ಟ್ ಗಿಡಗಳ ಅಭಿವೃದ್ಧಿಗಾಗಿ ತಳಿ ಸಂಪನ್ಮೂಲದ ಅಭಿವೃದ್ಧಿ ಕೂಡ ಮಹತ್ವ ಪೂರ್ಣವಾಗಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರ ಮಹತ್ವ ಪೂರ್ಣವಾಗಿದ್ದು ಮುಂಬರುವ ಕಾರ್ಯಾಚರಣೆಗಾಗಿ ರೂಪುರೇಷೆಗಳತ್ತ ಬೆಳಕು ಚೆಲ್ಲಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.