ಆಷಾಢ ಮಾಸದ ಖಾದ್ಯ ಮರ ಕೆಸು
Team Udayavani, Jul 9, 2017, 3:15 AM IST
ಮರಕೆಸು ನೆಲದಲ್ಲಿ ಬೆಳೆಯದೆ ಮರದಲ್ಲಿ ಬೆಳೆ ಯುವ ಸಸ್ಯ. ತುಳುವಿನಲ್ಲಿ ಇದನ್ನು ಮರತೇವು ಎಂದರೆ, ಗೌಡ ಸಾರಸ್ವತರಿಗೆ ಇದು ಮರಾಳ್ವಾಪಾನ್. ಕೆಸುವಿನಲ್ಲಿ ಅನೇಕ ಪ್ರಭೇದಗಳಿದ್ದು ಸಾಮಾನ್ಯವಾಗಿ ನಾಲ್ಕು ವಿಭಾಗಗಳನ್ನು ಗುರುತಿಸಬಹುದು.
ಕರಿ ಕೆಸು- ಇದರ ದಂಟು ಕಪ್ಪಗಿದ್ದು, ಎಲೆಯೂ ಹಸುರು ಮಿಶ್ರಿತ ಕಪ್ಪಾಗಿದೆ. ಇನ್ನೊಂದು ಬಿಳಿ ಕೆಸು- ತಿಳಿ ಹಸುರು ಬಣ್ಣದ ಕಾಂಡ ಮತ್ತು ಹಸುರು ಎಲೆ. ಚುಕ್ಕೆ ಕೆಸು- ಇದರ ಎಲೆಗಳಲ್ಲಿ ಕೆಂಪು ಬಣ್ಣದ ಚುಕ್ಕಿಗಳಿವೆ. ಇವು ನೆಲದಲ್ಲೇ ಬೆಳೆಯುವ ಸಸ್ಯವಾಗಿವೆ. ಮರಕೆಸು ಮರದ ಪೊಟರೆಯಲ್ಲಿ ಚಿಗುರಿ ಬೆಳೆಯುವ ಆರ್ಕಿಡ್ ಸಸ್ಯದಂತೆ ಬಳ್ಳಿಯಂತೆ ಹಬ್ಬಿ ಉದ್ದುದ್ದ ಹೃದಾಯಾಕಾರದ ಎಲೆ ಹೊಂದಿರುವ ಬಳ್ಳಿ ಸಸ್ಯ. ಇದರ ಎಲೆಯ ಮೇಲ್ಭಾಗ ಕಡು ಹಸುರು. ಅಡಿಭಾಗ ತಿಳಿ ಕಂದು ಬಣ್ಣವಾಗಿದ್ದು ಎಲೆ ದಪ್ಪಗಿರುತ್ತದೆ.
ಮಳೆಗಾಲ ಆರಂಭವಾದಂತೆ…
ಮರ ಕೆಸು ಮಳೆಗಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ವಿಪರೀತ ಬೆಳೆಯುತ್ತದೆ. ಮರದ ಪೊಟರೆ ಗಳಲ್ಲಿ ಬೇಸಗೆ ಕಾಲದಲ್ಲಿ ಹುದುಗಿದ್ದ ಪುಟ್ಟ ಪುಟ್ಟ ಗೆಡ್ಡೆಗಳು ಮಳೆ ಬೀಳಲಾರಂಭಿಸಿದಂತೆ ಚಿಗುರಲು ಪ್ರಾರಂಭಿಸಿ ನೋಡು ನೋಡುತ್ತಿದ್ದಂತೆ ಮರದ ಮೇಲಕ್ಕೆ ಹಬ್ಬಿ ಎಲೆ ಬಿಡಲು ಪ್ರಾರಂಭಿಸುತ್ತವೆ. ಅಗಲವಾದ ಎಲೆ ಬೆಳೆದಂತೆ ಇದನ್ನು ಕತ್ತರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಒಂದು ಕಟ್ಟದಲ್ಲಿ 5 ರಿಂದ 6 ಎಲೆ ಇರಿಸಿ 30 ರೂಪಾಯಿ ದರ ಪಡೆಯುತ್ತಾರೆ.
ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸಂಪಾಜೆ, ಚಿಕ್ಕಮಗಳೂರು ಜಿಲ್ಲೆಯ ಬಣಕಲ್, ಕೊಟ್ಟಿಗೆ ಹಾರ, ಹಾಸನ ಜಿಲ್ಲೆಯ ಸಕಲೇಶಪುರ, ಮಲೆನಾಡಿನ ಆಗುಂಬೆ ಪರಿಸರದ ಕಾಡುಗಳ ಮರದಲ್ಲಿ ಮರ ಕೆಸು ವಿಪರೀತ ಬೆಳೆಯುತ್ತಿದ್ದು ಇಲ್ಲಿಂದ ಮಂಗಳೂರು, ಉಡುಪಿ, ಕಾಸರಗೋಡು ಭಾಗಕ್ಕೆ ಬರುತ್ತವೆ. ಒಂದು ಬಾರಿಗೆ ಈ ಭಾಗದಿಂದ ಲಕ್ಷದಷ್ಟು ಎಲೆಗಳು ಮಾರಕಟ್ಟೆಗೆ ಬರುತ್ತಿದ್ದು, ದರ ದುಬಾರಿಯಾದರೂ ಸೀಸನ್ ಬೆಳೆಯಾದ ಕಾರಣ ಗಿರಾಕಿಗಳು ನಾ ಮುಂದು ತಾ ಮುಂದು ಎಂದು ಖರೀದಿಸುತ್ತಾರೆ. ಆಷಾಢ ಮಾಸ ಕಳೆದರೆ ಇದರ ಲಭ್ಯತೆ ಕಮ್ಮಿಯಾಗುತ್ತಿದ್ದು ಮತ್ತೆ ಯಥೇತ್ಛ ದೊರೆಯಲು ಮುಂದಿನ ವರ್ಷದ ವರೆಗೆ ಕಾಯಬೇಕಾಗುತ್ತದೆ.
ಮರ ಕೆಸು ಪತ್ರೊಡೆ ಮಾಡಲು ಉಪಯೋಗಿಸುತ್ತಿ ದ್ದರೂ ಗೌಡ ಸಾರಸ್ವತರು ಇದರಿಂದ ಪತ್ರೊಡೆ ಪೋಡಿ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಪತ್ರೊಡೆಯಂತೆ ಇದನ್ನು ಸುರುಳಿ ಸುತ್ತಿ, ಬಳಿಕ ಅಡ್ಡಲಾಗಿ ಚಕ್ರದಂತೆ ತುಂಡು ಮಾಡಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾಯಿತು. ತವಾದಲ್ಲಿ ಹುರಿದು ಇದನ್ನು ಮಾಡು ವುದಿದೆ. ಇತರ ಕೆಸುವಿಗಿಂತ ಪೋಡಿ ಮಾಡಲು ಹೆಚ್ಚು ಸ್ವಾದಿಷ್ಟ ಎಲೆ ಮರ ಕೆಸು. ಇದನ್ನು ಕರಿಯಲು ಧೂಪದ ಎಣ್ಣೆ ಸೂಕ್ತ ಅನ್ನುತ್ತಾರೆ. ಕೆಸು ಉಷ್ಣವಾಗಿದ್ದು ಧೂಪದೆಣ್ಣೆ ತಂಪು ನೀಡುತ್ತದೆ ಅನ್ನುವ ಕಾರಣಕ್ಕೆ ಇದರ ಪ್ರಯೋಗ.
ಮರಗಳ ನಾಶದಿಂದ ಕಣ್ಮರೆ
ಹಿಂದೆ ಕಾಸರಗೋಡಿನ ರಸ್ತೆ ಬದಿಗಳಲ್ಲಿ ಗೋಳಿ ಮರಗಳ ಉದ್ದುದ್ದ ಸಾಲುಗಳಿದ್ದುವು. ಆ ದಿನಗಳಲ್ಲಿ ಈ ಮರದಲ್ಲಿ ಯಥೇತ್ಛ ಮರ ಕೆಸು ಪುಟಿಯುತ್ತಿತ್ತು. ಇಲ್ಲಿಂದಲೇ ಅನೇಕರು ಪುಕ್ಕಟೆಯಾಗಿ ಎಲೆ ಕಿತ್ತು ಮಳೆಗಾಲದ ರುಚಿ ರುಚಿ ಪಲ್ಯ ಮಾಡುತ್ತಿದ್ದರು. ಇದೀಗ ಗೋಳಿ ಮರಗಳು ರಸ್ತೆ ವಿಸ್ತರಣೆಯಿಂದ ನೆಲಕ್ಕುರುಳಿದ್ದು ಮರ ಕೆಸು ಸಂತತಿ ಕಾಲ್ಕಿತ್ತಿದೆ.
ಗರಿಗರಿ ಪತ್ರೊಡೆ ಪೋಡಿ
ಬದರಿನಾಥ ಯಾತ್ರೆಗೆ ಹೊಸ ದಿಲ್ಲಿಯಿಂದ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ರುದ್ರ ಪ್ರಯಾಗ – ಗಡ್ವಾಲ್ ದಾಟುವ ಸಮಯ ನಮ್ಮ ಜತೆ ಬಸ್ಸಿನಲ್ಲಿದ್ದ ಬಾಣಸಿಗರ ಕಣ್ಣಿಗೆ ಮರಗಳಲ್ಲಿ ಬೆಳೆದ ಮರ ಕೆಸು ಕಂಡು ಬಂತು. ಬಸ್ಸು ನಿಲ್ಲಿಸಿ ಮರ ಹತ್ತಿ ಮರ ಕೆಸು ಎಲೆಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ತಂದು ರಾತ್ರಿ ಊಟಕ್ಕೆ ಗರಿಗರಿ ಪತ್ರೊಡೆ ಪೋಡಿ ಮಾಡಿ ಬಡಿಸಿದ್ದರು. ಹಿಮಾಲಯದಲ್ಲಿ ಕಾಡುಗಳಲ್ಲೂ ಈ ಬೆಳೆ ಬೆಳೆಯುತ್ತಿದೆ ಎಂದು ಆಗಲೇ ತಿಳಿದದ್ದು.
ಮರ ಕೆಸುವಿನ ಔಷಧೀಯ ಗುಣ
ಮರ ಕೆಸು ಆಷಾಢ ಮಾಸದಲ್ಲೆ ಬೆಳೆಯುತ್ತಿದ್ದು ಈ ಕಾರಣಕ್ಕೆ ಔಷಧೀಯ ಗುಣ ಹೊಂದಿವೆ ಎಂದು ನಾಟೀ ವೈದ್ಯ ಪದ್ಧತಿ ತಿಳಿಸುತ್ತಿದೆ. ಹೊಟ್ಟೆಯಲ್ಲಿ ಸೇರಿರುವ ನಂಜು, ವಿಷಕಾರಕ ಅಂಶ ಇದರ ಸೇವನೆಯಿಂದ ಗುಣವಾಗುವುದಂತೆ. ಕಾಲಿಗೆ ಮುಳ್ಳು ಚುಚ್ಚಿದರೆ ಮರ ಕೆಸುವಿನ ಪುಟ್ಟ ಗೆಡ್ಡೆಯನ್ನು ಸೀಳಿ ತುಂಡನ್ನು ಆ ಭಾಗದಲ್ಲಿ ಕಟ್ಟಿ ಬಿಟ್ಟರೆ ಮರುದಿನ ಮುಳ್ಳು ಗಡ್ಡೆಯೊಂದಿಗೆ ಹೊರ ಬರುತ್ತದೆ. ಹಿಂದೆ ನಾಟಿ ವೈದ್ಯರು ಇದನ್ನೇ ಪ್ರಯೋಗಿ ಸುತ್ತಿದ್ದರೆಂದು ಹಿರಿಯರು ತಿಳಿಸುತ್ತಾರೆ. ದುಬಾರಿ ಬೆಲೆಯ ಮರ ಕೆಸು ಮಾರುಕಟ್ಟೆಗೆ ಬಂದರೆ ಚಪಲದ ನಾಲಗೆಗೆ ಸುಗ್ಗಿಯೋ ಸುಗ್ಗಿ !
– ರಾಮದಾಸ್ ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.