Fraud: ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ವೀಸಾ ವಂಚನೆ ದೂರು
Team Udayavani, Sep 14, 2024, 7:46 PM IST
ಕುಂಬಳೆ: ಕುಂಬಳೆ ಮೂಲದ ಟ್ರಾವೆಲ್ ಮಾಲೀಕರ ವಿರುದ್ಧ ಕರ್ನಾಟಕದ ನಿವಾಸಿಗಳು ದೂರು ದಾಖಲಿಸಿದ್ದಾರೆ.
ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಕರ್ನಾಟಕದ 24 ಯುವಕರು ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರಿನ ಹನ್ನೊಂದು ಮಂದಿಯ ತಂಡ ಕುಂಬಳೆ ಪ್ರಸ್ ಫೋರಂನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಂಚನೆಗೊಳಗಾದ ವಿಚಾರವನ್ನು ಸ್ಪಷ್ಟಪಡಿಸಿದರು.
ಕುಂಬಳೆ ಮಾರ್ಕೆಟ್ ರಸ್ತೆಯ ಟ್ರಾವೆಲ್ ಮಾಲಕ ಸಾರ್ವಜನಿಕ ಕಾರ್ಯಕರ್ತ, ಅವರ ಪುತ್ರ ಹಾಗೂ ಕರ್ನಾಟಕ ಬಿ.ಸಿ.ರೋಡ್ ಮೂಲದ ನೌಕರನ ವಿರುದ್ಧ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ವೀಸಾಕ್ಕಾಗಿ ಒಬ್ಬ ವ್ಯಕ್ತಿಯಿಂದ 1,35,000 ರೂ. ನಂತೆ ಟ್ರಾವೆಲ್ ಮಾಲೀಕರು ಪಡೆದಿದ್ದರು. ಮೂರು ಕಂತುಗಳಲ್ಲಿ ಹಣ ಪಾವತಿಸುವ ಕರಾರಿನಂತೆ ಮೊದಲ 55 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿರುವುದಾಗಿ ಯುವಕರು ತಿಳಿಸಿದ್ದಾರೆ. ಆಗಸ್ಟ್ 28ರಂದು ಮಧ್ಯಾಹ್ನ 12.30ಕ್ಕೆ ತಿರುವನಂತಪುರದಿಂದ ಏರ್‌ಏಷ್ಯಾ ವಿಮಾನದಲ್ಲಿ ಹನ್ನೆರಡು ಮಂದಿ ತೆರಳಿದ್ದರು.
ಇದು ಮಲೇಷಿಯಾ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಎಂದು ಹೇಳಲಾಗಿದೆ. ಅಲ್ಲಿಗೆ ತಲುಪಿದಾಗ ವೀಸಾ ಪೂರ್ಣವಾಗಿ ಮೋಸದ ಜಾಲದ್ದು ಎಂದು ಅರಿವಾಯಿತು. ಪ್ರವಾಸಿ ವೀಸಾದಲ್ಲಿ ಮಲೇಷ್ಯಾಕ್ಕೆ ಬಂದ ಯುವಕರು ವಾಪಸಾತಿ ಟಿಕೆಟ್ ಹೊಂದಿಲ್ಲದ ಕಾರಣ ಅವರು ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವಾಗಲಿಲ್ಲ ಮತ್ತು ಮೂರು ದಿನ ಊಟವಿಲ್ಲದೆ ಕಳೆಯ ಬೇಕಾಯಿತು. ಅಂತಿಮವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ವಾಪಸ್ ಕಳುಹಿಸಿದರು ಎಂದು ಅವರು ಹೇಳಿದರು.
ವೀಸಾ ಹಾಗೂ ಉದ್ಯೋಗ ಕೊಡಿಸುವುದಾಗಿ ಹೇಳಿ ಹಲವರಿಂದ 1 ಲಕ್ಷದ ಐವತ್ತು ಸಾವಿರ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಪ್ರಜ್ವಲ್, ಅಶ್ವತ್, ರಾಕೇಶ್, ಮನೋಜ್, ಶ್ರೀನಿವಾಸ್ ಉಪಸ್ಥಿತರಿದ್ದು ವಂಚನಾ ಜಾಲದ ಬಗ್ಗೆ ಕಣ್ಣೀರಿ ನೊಂದಿಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.