ಸಹಕಾರ ಕ್ಷೇತ್ರವೆ,ದರೆ ಪ್ರಜಾಪ್ರಭುತ್ವದ ತೊಟ್ಟಿಲು: ಎಸ್.ಆರ್.ಸತೀಶ್ಚಂದ್ರ
Team Udayavani, Jun 2, 2019, 12:25 PM IST
ವಿದ್ಯಾನಗರ:ದೇಶವನ್ನು ಬಡತನದಿಂದ ಸಿರಿತನದೆಡೆಗೆ ಎತ್ತಿಹಿಡಿದ ಸಹಕಾರ ಕ್ಷೇತ್ರದ ಸಾಧನೆ ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾದುದು. ಸಹಕಾರಿ ಸಂಘಗಳು ಇಂದು ಪ್ರತಿಯೊಬ್ಬನ ಬದುಕಿನ ಭಾಗವಾಗಿದೆ. ದೇಶ ಬಡತನದ ಪರಾಕಾಷ್ಠೆಯಲ್ಲಿದ್ದಾಗ ಅಮೃತ ದೀಪವನ್ನು ಬೆಳಗಿಸಿ ಲಕ್ಷಾಂತರ ಜನರನ್ನು ಕೈಹಿಡಿದು ಮುನ್ನಡೆಸಿದ ಸಹಕಾರ ಕ್ಷೇತ್ರ ಪ್ರಜಾಪ್ರಭುತ್ವದ ತೊಟ್ಟಿಲು ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಅವರು ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆ ನಿರ್ಚಾಲಿನಲ್ಲಿ ನಡೆದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಬ್ಯಾಂಕಿನ ನೂತನ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತದ ಸುವಾಸನೆಯಿರುವ ನೀರ್ಚಾಲಿನ ಮಣ್ಣಿನಲ್ಲಿ ಬ್ಯಾಂಕ್ ಬೆಳೆದು ಬಂದಿರುವುದು ಸಂತಸದ ವಿಷಯ ಎಂದು ಅವರು ತಿಳಿಸಿದರು..ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಧ್ವಜಾರೋಹಣಗೈದು ಸಮಾರಂಭಕ್ಕೆ ಚಾಲನೆ ನೀಡಿದರು.ಬ್ಯಾಂಕಿನ ಅಧ್ಯಕ್ಷ ಜಯದೇವ ಖಂಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಬ್ಯಾಂಕಿನ ಹಿರಿಯ ಸದಸ್ಯ ಕಾನತ್ತಿಲ ಮಹಾಲಿಂಗ ಭಟ್ ದೀಪ ಬೆಳಗಿಸಿದರು.
ಪೆರಡಾಲ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದ ನಬಾರ್ಡ್ ಡಿ.ಡಿ.ಎಂ. ಜ್ಯೋತಿಷ್ ಜಗನ್ನಾದ್ ಮಾತನಾಡಿ ಕೋರ್ ಬ್ಯಾಂಕಿಂಗ್ ಎನ್ನುವುದು ಬ್ಯಾಂಕ್‌ಗಳನ್ನು ಪರಸ್ಪರ ಬೆಸೆಯುವ ಜಾಲಬಂಧವಾಗಿದೆ ಎಂದರು.,
ಇಲ್ಲಿ ಗ್ರಾಹಕರು ತಮ್ಮ ಖಾತೆಯನ್ನು ಪ್ರವೇಶಿಸಲು ಮತ್ತು ಯಾವುದೇ ಮೂಲ ವ್ಯವಹಾರಗಳನ್ನು ಯಾವುದೇ ಸದಸ್ಯ ಶಾಖೆಗಳಿಂದ ಮಾಡಬಹುದು.ಬ್ಯಾಂಕಿನ ಸಾಮಾನ್ಯ ವ್ಯವಹಾರಗಳಿಗೆ ವೇಗ ಹೆಚ್ಚಿಸುವ ಮತ್ತು ಚುರುಕು ಮುಟ್ಟಿಸುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗದ ಮೂಲಕ ನಿರ್ವಹಿಸಲಾಗುತ್ತದೆ ಎಂದರು. ಬ್ಯಾಂಕ್ ಭದ್ರತಾ ಕೋಶವನ್ನು ಜೆ.ಆರ್.ಕಾಸರಗೋಡು ಮಹಮ್ಮದ್ ನೌಶಾದ್, ಸಾಮಾನ್ಯ ಭದ್ರತಾ ಕೋಶವನ್ನು ಕಾಸರಗೋಡು ಎ.ಆರ್.ಜನರಲ್ ಜಯಚಂದ್ರನ್ ಹಾಗೂ ಕ್ಯಾಶ್ ಕೌಂಟರ್‌ನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಕೆ.ಶ್ರೀಕಾಂತ್ ಉದ್ಘಾಟಿಸಿದರು.
ಬ್ಯಾಂಕ್ ಹೊರತಂದ ರೂಪೇಕಾರ್ಡ್ ಕೆ.ಡಿ.ಸಿ.ಬ್ಯಾಂಕ್ ಜನರಲ್ ಮೇನೇಜರ್ ಅನಿಲ್ಕುಮಾರ್.ಎ ಬಿಡುಗಡೆಗೊಳಿಸಿದರು.
ಕನ್ನಡದೋಜ ದಿ| ಪೆರಡಾಲ ಕೃಷ್ಣಯ್ಯ ಅವರ ಭಾವಚಿತ್ರವನ್ನು ಬದಿಯಡ್ಕ ಪಂಚಾಯತು ಅಧ್ಯಕ್ಷ ಕೆ,ಎನ್.ಕೃಷ್ಣ ಭಟ್, ದಿ| ಈಶ್ವರ ಭಟ್ ಖಂಡಿಗೆ ಅವರ ಭಾವಚಿತ್ರವನ್ನು ವಿ.ಶ್ರೀಕೃಷ್ಣ ಭಟ್, ದಿ| ಮಹಾಲಿಂಗ ಭಟ್ ಅವರ ಭಾವಚಿತ್ರವನ್ನು ಪಡಿಯಡ್ಪು ಶಂಕರ ಭಟ್, ದಿ| ಖಂಡಿಗೆ ನಾರಾಯಣ ಭಟ್ ಕೇರ ಅವರ ಭಾವಚಿತ್ರವನ್ನು ಐತ್ತಪ್ಪ ಶೆಟ್ಟಿ ಕಡಾರು, ದಿ| ಶ್ಯಾಮ ಭಟ್ ಖಂಡಿಗೆ ಭಾವಚಿತ್ರವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಕೋರಿಕ್ಕಾರು ವಿಷ್ಣು ಭಟ್, ದಿ| ಖಂಡಿಗೆ ಕೃಷ್ಣ ಭಟ್ ಕೇರ ಅವರ ಭಾವಚಿತ್ರವನ್ನು ಶ್ರೀಧರ ಪೈ ಬಳ್ಳಂಬೆಟ್ಟು ಅನಾವರಣಗೊಳಿಸಿದರು.
ಕಾಸರಗೋಡು ಬ್ಲೋಕ್ ಪಂಚಾಯತು ಸದಸ್ಯ ಅವಿನಾಶ್ ವಿ ರೈ, ಬದಿಯಡ್ಕ ಬ್ಯಾಂಕಿನ ನಿರ್ದೇಶಕಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಾ ಕುಮಾರಿ ಶುಭಾಶಂಸನೆಗೈದರು. ಬ್ಯಾಂಕಿನ ಕಾರ್ಯದರ್ಶಿ ಅಜಿತಕುಮಾರಿ ವರದಿ ಮಂಡಿಸಿದರು.
ಸ್ವರ್ಣಲತಾ ಮತ್ತು ಬಳಗ ಪ್ರಾರ್ಥನೆ ಗೀತೆ ಹಾಡಿದರು. ಉಪಾಧ್ಯಕ್ಷ ದಿನೇಶ ಪ್ರಭು ಕರಿಂಬಿಲ ಸ್ವಾಗತಿಸಿ ಬ್ಯಾಂಕ್ ನಿರ್ದೇಶಕ ರಾಮಪ್ಪ ಮಂಜೇಶ್ವರ ಧನ್ಯವಾದ ಸಮರ್ಪಿಸಿದರು. ಶತಮನೋತ್ಸವ ಸಂದರ್ಭದಲ್ಲಿ ಹೊರತರಲಾದ ಸ್ಮರಣ ಸಂಚಿಕೆ ಶತ ಸಹಕಾರ ಪಥವನ್ನು ಕೆ.ಎನ್.ಕೃಷ್ಣ ಭಟ್ ಬಿಡುಗಡೆಗೊಳಿಸಿದರು.
ಶಾಲಾ ಪರಿಸರವನ್ನು ವರ್ಣ ರಂಜಿತವಾಗಿ ಅಲಂಕರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.