ಸಾಂಸ್ಕೃತಿಕ ಶ್ರೀಮಂತಿಕೆ ಸವಾಲು ನಿಭಾಯಿಸಲು ಸಹಕಾರಿ’
Team Udayavani, Feb 10, 2019, 1:20 AM IST
ಮಂಜೇಶ್ವರ: ಗಡಿನಾಡು ಕಾಸರಗೋಡು ಬಹುಸಂಸ್ಕೃತಿಗಳ ತವರು ನೆಲೆಯಾಗಿ ಸಂಗಮ ಕಾಶಿಯಾಗಿ ಗುರುತಿಸಿಕೊಂಡಿದೆ. ಸಾಮಾಜಿಕ, ಸಾಂಸ್ಕೃತಿಕವಾಗಿ ಒಗ್ಗೂಡಿಸುವ, ಸೌಹಾರ್ಧತೆ-ಸಂತಸಗಳ ಸೇತುವಾಗಿ ಜಾನಪದ ಕಲೆ, ಕಲಾವಿದರುಗಳ ಶ್ರಮಗಳು ಅಗಣಿತ ಕೊಡುಗೆಯನ್ನು ಸಾಮಾಜಿಕ ಶ್ರೇಯಸ್ಸಿಗೆ ನೀಡುತ್ತಿದೆ ಎಂದು ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಮಂಜೇಶ್ವರ ಸಿರಿಗನ್ನಡ ಅಭಿಮಾನಿಗಳ ಸಂಘ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಗಡಿನಾಡ ಜನಪದ ಕಲಾ ಉತ್ಸವ’ವನ್ನು ತಮಟೆ ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಕಲೆ ಮತ್ತು ಸಾಂಸ್ಕೃತಿಕ ಇತರ ಪ್ರಕಾರಗಳ ಮೂಲಕ ಸಾಮಾಜಿಕ ಜಾಗೃತಿ ಸಾಧ್ಯವಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಅತಿವೃಷ್ಠಿ ಹಾಗೂ ನೆರೆಯಿಂದ ತೀವ್ರ ತತ್ತರಗೊಂಡಿದ್ದಾಗಲೂ ಸವಾಲನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಇಲ್ಲಿಯ ಜಾಗೃತ ಸಮಾಜ ಕೈ ಜೋಡಿಸಿರುವುದು ಏಕತೆಯ ಮನೋಬಲದಿಂದಾಗಿದೆ. ಇಂದಿನ ಸ್ಥಿತ್ಯಂತರದ ಒಟ್ಟು ವ್ಯವಸ್ಥೆಯ ಮಧ್ಯೆ ಮಾನವೀಯತೆ, ಪ್ರೀತಿ
ತುಂಬಿಸುವ ಸಮರೋಪಾದಿಯ ಚಟುವಟಿಕೆಗಳ ಅಗತ್ಯ ಇದೆ ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಆಯೋಜಿಸಲಾದ ಜನಪದ ಕಲೋತ್ಸವವು ಪರಿಣಾಮಕಾರಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗಿಳಿವಿಂಡಿನ ಕಾರ್ಯದರ್ಶಿ ಕೆ.ಆರ್.ಜಯಾನಂದ ಅವರು ಗೋವಿಂದ ಪೈ ಗಳು ಮಾಡಿದ ಸಾಧನೆ ಗಳನ್ನು ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಬೆಂಗಳೂರು ಜಾನಪದ ಕಲಾ ತಂಡದ ಕೆ.ನಾಗರಾಜು ಸ್ವಾಗತಿಸಿ, ಶಿವಮ್ಮ ವಂದಿಸಿದರು. ಡಿ.ದೇವರಾಜ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಿಂತಾಮಣಿಯ ಗಾಯತ್ರಿ ತಂಡದಿಂದ ಸಮೂಹ ಜಾನಪದ ನೃತ್ಯ, ಹೊಸಕೋಟೆಯ ರಶ್ಮಿ ವಿ. ತಂಡದಿಂದ ಸಮೂಹ ಶಾಸ್ತ್ರೀಯ ನೃತ್ಯ, ಬೆಂಗಳೂರಿನ ಸುಜಾತಾ ತಂಡದಿಂದ ಸುಗಮ ಸಂಗೀತ, ಕೆ.ನಾಗರಾಜ್ ತಂಡದಿಂದ ಅವ್ವ ಸಾಮಾಜಿಕ ನಾಟಕ,ದೇವರಾಜ್ ತಂಡದಿಂದ ರಂಗಗೀತೆಗಳು, ಗೊಂಬೆಯಾಟ ಪ್ರದರ್ಶನ ನಡೆಯಿತು.
ಅಂತರಾಳದ ಪರಿವರ್ತನೆಗೆ
ರಾಷ್ಟ್ರಕವಿ ಗೋವಿಂದ ಪೈಗಳ ತಾತನವರಾದ ದಿ.ಸಾಹುಕಾರ್ ಮಂಜೇಶ್ವರ ನಾರಾಯಣ ಪೈ ಅವರು ಕರಾವಳಿಯಲ್ಲೇ ಮೊತ್ತಮೊದಲ ಬಾರಿಗೆ ಸಹ ಭೋಜನ ಕ್ರಾಂತಿಯನ್ನು 150 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಕ್ರಾಂತಿಯ ಕಾರ್ಯಕ್ರಮವನ್ನು ಗಿಳಿವಿಂಡು ಹಮ್ಮಿಕೊಳ್ಳಲಿದೆ ಅಂತರಾಳದ ಪರಿವರ್ತನೆಗೆ ಕಾರಣವಾಗುವ ಕಲೆಗಳನ್ನು ಪ್ರೋತ್ಸಾಹಿಸುವ, ಉಳಿಸಿ ಬೆಳೆಸುವ ಕರ್ತವ್ಯದಿಂದ ವಿಮುಖರಾಗುವುದು ವ್ಯಾಪಕ ನಾಶಕ್ಕೆ ಕಾರಣವಾಗುವುದು.
-ಕೆ. ಆರ್.ಜಯಾನಂದ ಳಿವಿಂಡಿನ ಕಾರ್ಯದರ್ಶಿ
ಬೆಳವಣಿಗೆಗೆ ಪೂರಕ
ವೈವಿಧ್ಯಮಯ ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಸರಿಸುವಿಕೆಯು ಸಮಗ್ರ ಅಭಿವೃದ್ಧಿಯ ಮೈಲುಗಲ್ಲುಗಳಾಗಿ ಬೆಳವಣಿಗೆಗೆ ಪೂರಕವಾಗುವುದು
-ಉಮೇಶ ಸಾಲ್ಯಾನ್
ಕೇರಳ ತುಳು ಅಕಾಡೆಮಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.