“ಬಾಲಗೋಕುಲದಿಂದ ರಾಷ್ಟ್ರ ಭಕ್ತರನಿರ್ಮಾಣ ಸಾಧ್ಯ’
Team Udayavani, Apr 9, 2019, 6:30 AM IST
ಬಾಯಾರು: ಭಾರತೀಯ ಸಂಸ್ಕೃತಿಯ ಹಾಗೂ ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟಭಕ್ತರನ್ನಾಗಿ ಮಾಡಲಾಗುತ್ತದೆ ಎಂಬುದಾಗಿ ರಾಷ್ಟಿÅàಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸೇವಾ ಪ್ರಮುಖ್ ವೆಂಕಟರಮಣ ಹೊಳ್ಳ ಹೇಳಿದರು.
ಅವರು ಬಾಯಾರಿನ ಆವಳ ಮಠದ ಶ್ರೀ ದುರ್ಗಾಸದನ ಸಭಾಭವನದಲ್ಲಿ ನಡೆದ ಮಂಜೇಶ್ವರ ತಾಲೂಕಿನ ಬಾಲಗೋಕುಲಗಳ ಗೋಕುಲೋತ್ಸವದ ಸಮಾರೋಪ ಸಭೆಯಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿಯ ಕುರಿತಾಗಿ ತಿಳಿಸುವ ಕೆಲಸ ಆಗುತ್ತಿಲ್ಲ. ಇಂದಿಗೂ ಬ್ರಿಟಿಷರು ಅಳವಡಿಸಿದ ಮೆಕಾಲೆ ಶಿಕ್ಷಣ ಪದ್ಧತಿ ಚಾಲನೆಯಲ್ಲಿದೆ.ಅದರಲ್ಲಿ ಭಾರತದ ನಿಜವಾದ ಭವ್ಯ ಇತಿಹಾಸವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ನಿಜವಾಗಿ ಭಾರತ ಗೆಲುವಿನ ಇತಿಹಾಸ ಹೊಂದಿದ್ದು ಹಿಂದಿನಿಂದಲೇ ಆಯರ್ವೇದ, ವಿಜ್ಞಾನ, ಯೋಗ, ಗಣಿತ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ ಶ್ರೇಷ್ಠ ಇತಿಹಾಸ ಹೊಂದಿದೆ ಎಂದು ಅವರು ಹೇಳಿದರು. ನಮ್ಮ ಗತಕಾಲದ ನೈಜ ಹಾಗೂ ಭವ್ಯ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸವು ಬಾಲಗೋಕುಲಗಳ ಮೂಲಕ ಆಗಬೇಕಿದ್ದು ತನ್ಮೂಲಕ ನಮ್ಮ ಮಕ್ಕಳನ್ನು ರಾಷ್ಟÅಭಕ್ತರನ್ನಾಗಿ ಮಾಡೋಣ ಎಂದು ಹೇಳಿದರು.
ಗೋಕುಲೋತ್ಸವದ ಆರಂಭದಲ್ಲಿ ಬಾಲಗೋಕುಲದ ಮಕ್ಕಳ ಆಕರ್ಷಕ ಶೋಭಾಯಾತ್ರೆ ಸರ್ಕುತ್ತಿಯಿಂದ ಆವಳ ಮಠದವರೆಗೆ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ರಮಣ್ಯ ಭಟ್ ಅವರು ವಹಿಸಿದ್ದರು. ಅತಿಥಿಗಳಾಗಿ ಎನ್‌ಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಪಿ. ಹಾಗೂ ಕೃಷ್ಣ ಗುರುಸ್ವಾಮಿ ಕುರುಡಪದವು ಅವರು ವಹಿಸಿದ್ದರು. ಮಂಜೇಶ್ವರ ತಾಲೂಕಿನ ಪೈವಳಿಕೆ, ಮೀಂಜ, ವರ್ಕಾಡಿ ಹಾಗೂ ಮಂಜೇಶ್ವರ ಪಂಚಾಯತ್‌ಗೆ ಒಳಪಟ್ಟ ಬಾಲಗೋಕುಲಗಳ ಸುಮಾರು 230 ಮಂದಿ ಮಕ್ಕಳು ಈ ಗೋಕುಲೋತ್ಸವದಲ್ಲಿ ಭಾಗವಹಿಸಿದ್ದರು
ಮಕ್ಕಳಿಂದ ಪ್ರತಿಭಾ ಪ್ರದರ್ಶನ
ಅನಂತರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಸಂತ ಪಂಡಿತ್ ಗುಂಪೆ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಗಣಪತಿ ಭಟ್ ಆವಳ ಮಠ ಅವರು ನಡೆಸಿದರು. ಪ್ರಸ್ತಾವನೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ್ ವಿಶ್ವನಾಥ ನಡೆಸಿದರು. ನಂತರ ವಿವಿಧ ಬಾಲಗೋಕುಲದ ಮಕ್ಕಳದ ಸಾಮೂಹಿಕ ಬೌದ್ಧಿಕ, ಶಾರೀರಿಕ ಕಾರ್ಯಕ್ರಮಗಳು ನಡೆದವು. ಭೋಜನದ ನಂತರ ಬಾಲಗೋಕುಲ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.