ಪ್ರಧಾನ ಮಂತ್ರಿಯ ಸಮರ್ಥ ಆಡಳಿತದಿಂದ ದೇಶ ಉನ್ನತ ಸ್ಥಾನಕ್ಕೆ
Team Udayavani, Jul 15, 2017, 3:25 AM IST
ಕುಂಬಳೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಆಡಳಿತದಿಂದ ನಮ್ಮ ದೇಶ ಅತ್ಯುನ್ನತ ಸ್ಥಾನಕ್ಕೇರುತ್ತಿದೆ.ಶತ್ರು ರಾಷ್ಟ್ರಗಳು ಕೂಡಾ ಭಾರತದೊಂದಿಗೆ ಮಿತ್ರತ್ವಕ್ಕೆ ಮುಂದಾಗಿವೆ.ಮುಂದಿನ ಲೋಕಸಭೆ ಮತ್ತು ವಿವಿಧ ರಾಜ್ಯಗಳ ಎಲ್ಲಾ ಚುನಾವಣೆಗಳಲ್ಲೂ ವಿರೋಧ ಪಕ್ಷಗಳು ದುರ್ಬಲಗೊಂಡು ಬಿ.ಜೆ.ಪಿ. ಜಯಭೇರಿ ಗಳಿಸಲಿದೆ.ಎಂಬುದಾಗಿ ಬಿ.ಜೆ.ಪಿ.ರಾಜ್ಯ ಮಾಜಿ ಅಧ್ಯಕ್ಷ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಹೇಳಿದರು.
ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಮೂರು ವರ್ಷದ ಕೇಂದ್ರದ ಸಮರ್ಥ ಬಿ.ಜೆ.ಪಿ.ಆಡಳಿತದಲ್ಲಿ ಹಲವಾರು ಜನಪರ ಆಡಳಿತದಿಂದ ದೇಶ ಸುಭಿಕ್ಷೆಯತ್ತ ಸಾಗುತ್ತಿದೆ.ಇನ್ನು ಮುಂದಿನ ಆಡಳಿತ ದಿನದಲ್ಲಿ ಕೇಂದ್ರ ಸರಕಾರ ಇನ್ನಷ್ಟು ಜನಕ್ಷೇಮ ಯೋಜನೆಗಳನ್ನು ಬಡವರಿಗೆ ಕೊಡುಗೆಯಾಗಿ ನೀಡಲಿದೆ. ಮುಂದಿನ ಯುಗ ಬಿಜೆ.ಪಿ. ಯುಗವಾಗಲಿದೆ ಎಂದರು.
ಕೇರಳದಲ್ಲಿ ಮುಂದಿನ ದಿನಗಳಲ್ಲಿ ಎಡಬಲ ಉಭಯ ರಂಗಗಳು ಪರಸಪರ ಕಚ್ಚಾಟದಿಂದ ಛಿದ್ರಗೊಳ್ಳ ಲಿವೆ. ಸಿ.ಪಿ.ಎಂ. ಜನದ್ರೋಹಿ ದುರಾಡಳಿತದಿಂದ ಆ ಪಕ್ಷದೊಳಗೆ ಅಂತಃಕಲಹ ಹೆಚ್ಚುತ್ತಿದೆ.ದೇಶದ ಏಕೈಕ ಸಿಪಿಎಂ ಆಡಳಿತ ಕೂಡ ಕೊನೆಗೊಳ್ಳಲಿದೆ. ಇಲ್ಲಿ ಮುಂದೆ ಬಿ.ಜೆ.ಪಿ. ತಾವರೆ ಅರಳಲಿದೆ ಎಂದರು.
ಬಿ.ಜೆ.ಪಿ. ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ , ಪಿ. ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನ್ಯಾಯವಾದಿ ವಿ. ಶ್ರೀಕಾಂತ್, ಉಪಾಧ್ಯಕ್ಷೆ ಸರೋಜಾ ಆರ್.ಬಲ್ಲಾಳ್, ಕಾರ್ಯದರ್ಶಿ ಪಿ. ರಮೇಶ್, ಪರಿಶಿಷ್ಟ ಕಾಜಿ ವರ್ಗ ಜಿಲ್ಲಾಧ್ಯಕ್ಷ ಎ.ಕೆ. ಕಯ್ನಾರ್, ಮಂಡಲಾಧ್ಯಕ್ಷ ಬಾಬು ಮಾಸ್ಟರ್, ಯುವ ಮೋರ್ಚಾ ನಾಯಕರಾದ ಎಂ. ವಿಜಯ ಕುಮಾರ್ ರೈ, ಸುಮಿತ್ ರಾಜ್ ಪೆರ್ಲ, ಮಹಿಳಾ ಮೋರ್ಚಾ ನಾಯಕಿಯರಾದ ಪುಷ್ಪಾ ಆಮೆಮಕ್ಕಳ, ಪ್ರೇಮಲತಾ ಎಸ್., ಕೆ. ಜಯಲಕ್ಷ್ಮಿ ಭಟ್, ಜಯಂತಿ ಟಿ. ಶೆಟ್ಟಿ,ಆಶಾಲತಾ ಮಲ್ಲಿಕಾ ರೈ ಉಪಸ್ಥಿತರಿದ್ದರು. ಮುರಳೀಧರ ಯಾದವ್ ಸ್ವಾಗತಿಸಿದರು. ಆದರ್ಶ್ ಬಿ.ಎಂ.ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.