ಕಾಸರಗೋಡಿನ ವ್ಯಕ್ತಿಯಲ್ಲಿ ಕೋವಿಡ್-19 ಪತ್ತೆ ಹಿನ್ನೆಲೆ
51 ಸಹಪ್ರಯಾಣಿಕರ ವಿಳಾಸ ಪತ್ತೆ; 14 ದಿನ ನಿಗಾ
Team Udayavani, Mar 19, 2020, 6:52 AM IST
ಮಂಗಳೂರು: ದುಬಾೖಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾಸರಗೋಡಿಗೆ ತೆರಳಿದ ವ್ಯಕ್ತಿಯಲ್ಲಿ ಕೋವಿಡ್-19 ಪತ್ತೆಯಾದ ಹಿನ್ನೆಲೆಯಲ್ಲಿ ಆತನೊಂದಿಗೆ ಸಹ ಪ್ರಯಾಣಿಕರಾಗಿದ್ದ 51 ಮಂದಿ ದಕ್ಷಿಣ ಕನ್ನಡಿಗರ ವಿಳಾಸ ಪತ್ತೆಹಚ್ಚಲಾಗಿದ್ದು, ಎಲ್ಲರ ಮನೆಗೆ ತೆರಳಿ 14 ದಿನಗಳ ನಿಗಾದಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಮಾ. 14ರಂದು ದುಬಾೖಯಿಂದ ಬಂದಿಳಿದ ಕಾಸರಗೋಡು ಮೂಲದ ವ್ಯಕ್ತಿಯಲ್ಲಿ ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಕೋವಿಡ್-19 ವೈರಸ್ ಪತ್ತೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆತನೊಂದಿಗೆ ವಿಮಾನದಲ್ಲಿ ಸಹ ಪ್ರಯಾಣಿಕರಾಗಿ ಬಂದವರನ್ನು ಪತ್ತೆಹಚ್ಚಿ ನಿಗಾದಲ್ಲಿಡುವ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆಗಳು ಮಾಡಿದ್ದವು.
632 ಮಂದಿಯ ತಪಾಸಣೆ
ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಒಟ್ಟು 632 ಮಂದಿಯನ್ನು ಬುಧವಾರ ತಪಾಸಣೆಗೊಳಪಡಿಸಲಾಗಿದೆ. ಈವರೆಗೆ 689 ಮಂದಿ ಮನೆಯಲ್ಲೇ ನಿಗಾದಲ್ಲಿದ್ದಾರೆ. 8 ಮಂದಿ ನಿಗಾ ಅವಧಿಯನ್ನು ಪೂರ್ಣಗೊಳಿಸಿ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಮೂರು ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 14 ಮಂದಿಯ ವರದಿ ಈಗಾಗಲೇ ಆರೋಗ್ಯ ಇಲಾಖೆ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಆಗಿವೆ.
ಆಸ್ಪತ್ರೆಗಳಲ್ಲಿ ನಿಗಾ ಘಟಕ: ಭಯ ಬೇಡ
ಕೊರೊನಾ ಸಂಬಂಧಿ ಲಕ್ಷಣಗಳು ಪತ್ತೆಯಾದಲ್ಲಿ ತಪಾಸಣೆ-ಚಿಕಿತ್ಸೆ ನೀಡುವ ಸಲುವಾಗಿ ವೆನ್ಲಾಕ್ ಆಸ್ಪತ್ರೆ ಮಾತ್ರವಲ್ಲದೆ ನಗರದ ಇತರ ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಗಾ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಈ ವಾರ್ಡ್‌ಗೆ ಯಾರಿಗೂ ಭೇಟಿಗೆ ಅವಕಾಶ ನೀಡುವುದಿಲ್ಲ. ಆದರೆ ವಾರ್ಡ್ ಕಡೆ ತೆರಳಲು ಅವಕಾಶ ನೀಡದಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಕೊರೊನಾ ಪೀಡಿತರು ಆಸ್ಪತ್ರೆಯಲ್ಲಿರುವುದರಿಂದ ವಾರ್ಡ್ ಕಡೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ವದಂತಿಗಳು ಹಬ್ಬುತ್ತಿವೆ. ಈ ಬಗ್ಗೆ ಜನರು ಹೆದರಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
2,12,639 ಮಂದಿಗೆ ಜಾಗೃತಿ
ಆಶಾ ಕಾರ್ಯಕರ್ತೆಯರು ನಿರಂತರ ಮನೆ ಭೇಟಿ ಮಾಡುತ್ತಿದ್ದು, ಈವರೆಗೆ 55,241 ಮನೆ ಭೇಟಿ ಮಾಡಿ 2,12,639 ಮಂದಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಹೊರತುಪಡಿಸಿ ಇತರ ಮಾರ್ಗಗಳಿಂದ ವಿದೇಶದಿಂದ ಬಂದವರನ್ನೂ ಮನೆಯಲ್ಲೇ ವಾಸ್ತವ್ಯ ಇರುವಂತೆ ಸೂಚಿಸಲಾಗಿದೆ. ತಲಪಾಡಿ, ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ಎನ್‌ಆರ್‌ಐಗಳು ಮನೆಯಲ್ಲಿ ಇರಿ!
ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವಾಗ ಕೋವಿಡ್-19 ಸೋಂಕಿನ ಪತ್ತೆಯಾಗದೆ ಇದ್ದರೂ 14 ದಿನಗಳ ಬಳಿಕ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅಂಥವರು 20 ದಿನಗಳ ಕಾಲ ಮನೆಯೊಳಗೇ ಇರುವುದು ಉತ್ತಮ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಔಷಧ ಸಿಂಪಡಣೆ ವದಂತಿ
ಮಂಗಳೂರು: ಕೋವಿಡ್-19 ವೈರಸ್ ಹರಡದಂತೆ ಬುಧವಾರ ರಾತ್ರಿ ಔಷಧ ಸಿಂಪಡಣೆ ಮಾಡುವುದರಿಂದ ಮಂಗಳೂರಿಗರು ಮನೆಯಿಂದ ಹೊರಬರಬಾರದು ಎಂಬ ವದಂತಿಯೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಪ್ರಸಂಗ ಬುಧವಾರ ನಡೆಯಿತು.
ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಈ ಔಷಧ ಸಿಂಪಡಣೆ ನಡೆಯುತ್ತದೆ. ಈ ಹೊತ್ತಿನಲ್ಲಿ ಯಾರೂ ಮನೆಯಿಂದ ಹೊರ ಬರಬಾರದು. ಈ ವಿಚಾರವನ್ನು ಆದಷ್ಟು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ ಎಂದು ಬರೆದು ಕೆಲವರು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಇದನ್ನು ನಂಬಿದ ಬಹುತೇಕ ಮಂದಿ ವಿಷಯವನ್ನು ಶೇರ್ ಮಾಡಿದ್ದಲ್ಲದೆ, ಈ ಬಗ್ಗೆ ಅವರಿವರಲ್ಲಿ ಮಾಹಿತಿ ಪಡೆದುಕೊಳ್ಳುವ ಯತ್ನ ನಡೆಸಿದ್ದಾರೆ. ಇದು ಕೇವಲ ವದಂತಿಯಷ್ಟೇ ಎಂದು ಗೊತ್ತಾದ ಬಳಿಕವೂ ಶೇರ್ ಆಗುವುದು ನಿಂತಿಲ್ಲ.
ವದಂತಿ ವಿರುದ್ಧ ಕ್ರಮ
“ಜಿಲ್ಲೆಯಲ್ಲಿ ಇಂತಹ ಯಾವುದೇ ಕ್ರಮಕ್ಕೆ ನಿರ್ಧರಿಸಿಲ್ಲ; ಕೋವಿಡ್-19 ಬಗ್ಗೆ ಯಾವುದೇ ವದಂತಿ ಹರಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡುವ ತಪ್ಪು ಮಾಹಿತಿ ಪ್ರಕಟಿಸಿದ ಕೆಲವು ವೆಬ್‌ಸೈಟ್‌ಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೂ ವ್ಯಾಪಾರ ಕುಸಿತ
ಧಾರ್ಮಿಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಸರಕಾರ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹೂವಿನ ವ್ಯಾಪಾರ ಕುಸಿದಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.