ದಿನವೊಂದಕ್ಕೆ 55 ವಾರ್ಡ್‌ಗಳಲ್ಲಿ 4,125 ಮಂದಿಗೆ ಕೋವಿಡ್‌ ತಪಾಸಣೆ


Team Udayavani, Jun 11, 2021, 5:40 AM IST

ದಿನವೊಂದಕ್ಕೆ 55 ವಾರ್ಡ್‌ಗಳಲ್ಲಿ 4,125 ಮಂದಿಗೆ ಕೋವಿಡ್‌ ತಪಾಸಣೆ

ಕಾಸರಗೋಡು: ದಿನವೊಂದಕ್ಕೆ 55 ವಾರ್ಡ್‌ಗಳಲ್ಲಿ 4,125 ಮಂದಿಗೆ ಕೋವಿಡ್‌ ತಪಾಸಣೆ ನಡೆ ಸಲಾಗುವುದು. ಈ ನಿಟ್ಟಿನಲ್ಲಿ ವಾರ್ಡ್‌ ಒಂದರಲ್ಲಿ 75 ಮಂದಿಯ ತಪಾಸಣೆ ನಡೆಯಲಿದೆ. ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ಕಾಸರಗೋಡು ಜಿಲ್ಲಾ ಮಟ್ಟದ ಕೊರೊನಾ ಕೋರ್‌ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಅಧಿಕ ಪ್ರಮಾಣ ದಲ್ಲಿ ಸೋಂಕು ಬಾಧಿತರು ಇರುವ ಪ್ರದೇಶಗಳನ್ನು ಪತ್ತೆಮಾಡಿ ಹೆಚ್ಚುವರಿ ಕಟ್ಟುನಿಟ್ಟುಗಳನ್ನು ಆಯಾ ತಾಣಗಳಲ್ಲೇ ನಿಗದಿ ಪಡಿಸುವ ನಿಟ್ಟಿನಲ್ಲಿ ಸ್ಟ್ರಾಂಗ್‌ ಮಲ್ಟಿ ಸ್ಟೇಜ್‌ ರಾಂಡಂ ಸಾಂಪ್ಲಿಂಗ್‌ ನಡೆಸಲಾಗುವುದು. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಪಾಸಣೆ ಕ್ರಮ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ವ್ಯಾಕ್ಸಿನೇಶನ್‌ ವಿಸ್ತೃತಗೊಳಿಸುವಂತೆ ಸಭೆ ಆದೇಶಿಸಿದೆ. ಜಿಲ್ಲೆಯ ವಯೋ ವೃದ್ಧ ಕೇಂದ್ರಗಳಲ್ಲಿ ಬುಧವಾರ ಪೂರ್ಣ

ಗೊಂಡಿದೆ. ಅಂಗವಿಕಲರು, ಹಾಸಿಗೆ ಹಿಡಿದಿರುವ ರೋಗಿಗಳು, ಶುಶ್ರೂಷೆ ಪಡೆಯುತ್ತಿರುವ ರೋಗಿಗಳು ಮೊದಲಾದ ವರಿಗೆ ಅವರ ಮನೆ ಗಳಿಗೇ ತೆರಳಿ ವ್ಯಾಕ್ಸಿನ್‌ ನೀಡಲು ಉದ್ದೇಶಿಸಲಾಗಿದೆ ಎಂದರು.

ಕೋವಿಡ್‌ 3ನೇ ಅಲೆ ತಡೆಯಲು ಸಿದ್ಧತೆ :

ಕೋವಿಡ್‌ ಮೂರನೇ ಅಲೆಯ ಅವಧಿ ಯಲ್ಲಿ ಮಕ್ಕಳಿಗೆ ಹೆಚ್ಚು ಕಾಡಲಿದೆ ಎಂದು ಆರೋಗ್ಯ ಪರಿಣತರು ಅಭಿಪ್ರಾಯ ಪಟ್ಟಿರುವ ಕಾರಣ ಕಾಂಞಂಗಾಡಿನ ಅಮ್ಮ ಮತ್ತು ಮಗು ಆಸ್ಪತ್ರೆಯಲ್ಲಿ 100 ಆಕ್ಸಿಜನ್‌ ಬೆಡ್‌ ಸಜ್ಜುಗೊಳಿಸಲು ಆದೇಶ ನೀಡಲಾಗಿದೆ. ಶಿಶುರೋಗ ಪರಿಣತರ ಸೇವೆ ಖಚಿತಪಡಿಸಬೇಕಿದೆ. ಜಿಲ್ಲಾ ಆಸ್ಪತ್ರೆ, ಟಾಟಾ ಆಸ್ಪತ್ರೆ, ಕಾಸರಗೊಡು ಸರಕಾರಿ ಮೆಡಿಕಲ್‌ ಕಾಲೇಜು, ಜನರಲ್‌ ಆಸ್ಪತ್ರೆ ಇತ್ಯಾದಿ ಕಡೆ ಅಗತ್ಯ ವ್ಯವಸ್ಥೆ ನಡೆಸಲಾಗುವುದು. ಮಂಗಲ್ಪಾಡಿ ತಾ| ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪೈಪ್‌ಲೈನ್‌ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಕರಾವಳಿ, ಆದಿವಾಸಿ ವಲಯಗಳಲ್ಲಿ, ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್‌ ವ್ಯಾಕ್ಸಿನೇಶನ್‌ ಸ್ಪೆಷ್ಯಲ್‌ ಡ್ರೈವ್‌ ನಡೆಸಲಾಗುವುದು. ಜಿಲ್ಲೆಯ ಕೆಲವು ಕಾಲನಿಗಳಲ್ಲಿ ಕೋವಿಡ್‌ ಹೆಚ್ಚಳಗೊ ಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ನಡೆಸಲು ವಿಶೇಷ ಗಮನಹರಿ ಸಬೇಕು ಎಂದು ಸಭೆ ಆದೇಶಿಸಿದೆ ಎಂದರು.

ಕೇರಳ-ಕರ್ನಾಟಕ ಗಡಿ ಪ್ರದೇಶ ಗಳಲ್ಲಿ ಮದ್ಯ ಅಕ್ರಮ ಮಾರಾಟ ಅಧಿಕ ಗೊಳ್ಳುತ್ತಿರುವ ವರದಿಗಳಿದ್ದು, ಅಂಥಾ ಪ್ರದೇಶಗಳಿಗೆ ಅಬಕಾರಿ ದಳ ದಾಳಿ ನಡೆಸಬೇಕು. ಉಭಯ ರಾಜ್ಯಗಳ ಅಬಕಾರಿ ದಳಗಳು ಜಂಟಿ ತಪಾಸಣೆ ನಡೆಸಲೂ ಆದೇಶಿಸಲಾಗಿದೆ ಎಂದರು.

ಕಡ್ಡಾಯ ತಪಾಸಣೆ  : 8 ಆರೋಗ್ಯ ಬ್ಲಾಕ್‌ಗಳಲ್ಲಿ 777 ವಾರ್ಡ್‌ಗಳಿವೆ. ದಿನವೊಂದಕ್ಕೆ 55 ವಾರ್ಡ್‌ಗಳಲ್ಲಿ 4,125 ಮಂದಿಯ ತಪಾಸಣೆ ನಡೆಯಲಿದೆ. 14 ದಿನ ಕಳೆದು ಮತ್ತೆ ಕೋವಿಡ್‌ ತಪಾಸಣೆ ನಡೆಸಬೇಕಿದೆ. ಪೊಲೀಸರು, ಆಟೋರಿಕ್ಷಾ ಚಾಲಕರು, ಬಸ್‌ ಸಿಬಂದಿ, ಅಂಗಡಿ ಮಾಲಕರು, ಅಂಗಡಿ, ಕಾರ್ಖಾನೆ, ವ್ಯಾಪಾರ ಸಂಸ್ಥೆಗಳ ನೌಕರರು, ಸರಕಾರಿ ಸಿಬಂದಿ ಸಹಿತ ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಈ ನಿಟ್ಟಿನಲ್ಲಿ ಕಡ್ಡಾಯ ತಪಾಸಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಹಕಾರ ಲಭ್ಯತೆ ನಿಟ್ಟಿನಲ್ಲಿ ಗ್ರಾ.ಪಂ. ಅಧ್ಯಕ್ಷರ, ಕಾರ್ಯಕರ್ತರ ಸಭೆ ತುರ್ತಾಗಿ ನಡೆಸುವಂತೆ ಪಂಚಾಯತ್‌ ಡೆಪ್ಯೂಟಿ ನಿರ್ದೇಶಕರಿಗೆ ಆದೇಶ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.

ಹೆಚ್ಚುವರಿ ದಂಡನಾಧಿಕಾರಿ ಅತುಲ್‌ ಎಸ್‌.ನಾಥ್‌, ಉಪಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ, ಎ.ಎಸ್‌.ಪಿ. ಪ್ರಜೀಷ್‌ ತೋಟತ್ತಿಲ್‌, ಡಾ| ಕೆ.ಆರ್‌.ರಾಜನ್‌, ಡಾ| ಎ.ವಿ. ರಾಮದಾಸ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

k

Kasaragod: ಎಡನೀರು ಶ್ರೀಗಳ ವಾಹನದ ಮೇಲೆ ದಾಳಿ: ಪ್ರತಿಭಟನೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

kalla

Kasaragod: ಆರಾಧನಾಲಯಗಳ ಸರಣಿ ಕಳವಿನ ಹಿಂದೆ ಒಂದೇ ತಂಡ?

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.