ಸಿಪಿಎಂ ಕೊಲೆ, ಕಾಂಗ್ರೆಸ್ ಕಪಟ ರಾಜಕಾರಣ: ಬಿಜೆಪಿ
Team Udayavani, Feb 25, 2019, 1:00 AM IST
ಕುಂಬಳೆ: ಸಂಘ ಪರಿವಾರ ರಾಜ್ಯಾದ್ಯಂತ ಆಯೋಜಿಸಿದ ಶಬರಿಮಲೆ ಸಂರಕ್ಷಣಾ ಹೋರಾಟ ಅತ್ಯಂತ ಯಶಸ್ಸು ಕಂಡಿದೆ. ಸಮಾನಮನಸ್ಕ ಸಮುದಾಯ ಹಾಗೂ ಯುವಕರ ತಂಡವು ಶಬರಿಮಲೆ ಆಚಾರ ವಿಚಾರಗಳ ರಕ್ಷಣೆಗೆ ಕಟಿಬದ್ಧವಾಗಿದ್ದು ಧರ್ಮ ರಕ್ಷಣೆಯ ಕಾರ್ಯದಲ್ಲಿ ಕಾರ್ಯ ತತ್ಪರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ ಕೆ. ಶ್ರೀಕಾಂತ್ ಹೇಳಿದರು.
ಸಜಂಕಿಲದ ಆವಳಮಠ ಶ್ರೀ ದುರ್ಗಾಸದನದಲ್ಲಿ ನಡೆದ ಪೈವಳಿಕೆ ಪಂಚಾಯತ್ ಬಿಜೆಪಿ ಕುಟುಂಬ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುಲ್ವಾಮಾ ದಾಳಿಯಲ್ಲಿ ಮಡಿದ ಸೆ„ನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ದೇಶದ ಗಡಿ ರಕ್ಷಣೆಯ ಹೊಣೆಯನ್ನು ಧೀಮಂತ ಸೆ„ನಿಕರು ಹೊತ್ತರೆ, ಧರ್ಮ ಮತ್ತು ಸಮಾಜದ ರಕ್ಷಣೆಯ ಜವಾಬ್ದಾರಿಯನ್ನು ಸಂಘಪರಿವಾರದ ಯುವಕರು ಹೊತ್ತಿದ್ದಾರೆ. ದೇಶ ಮತ್ತು ಧರ್ಮದ ವಿರುದ್ಧವಾಗಿ ನಡೆಯುವವರಿಗೆ ತಕ್ಕ ಶಾಸ್ತಿಯಾಗಬೇಕಿದೆ ಎಂದರು. ಶಬರಿಮಲೆ ಕ್ಷೇತ್ರದ ಆಚರಣೆಯನ್ನು ಉಳಿಸುವ ನಿಟ್ಟಿನಲ್ಲಿ ಜರಗಿದ ನಾಮಜಪ ಯಜ್ಞಗಳು ರಾಜ್ಯ, ದೇಶದ ಗಡಿ ದಾಟಿ ವಿಶ್ವಾದ್ಯಂತ ಹಬ್ಬಿವೆ. ಏಕತೆಯ ಮಂತ್ರ ತಣ್ತೀಮಸಿಯನ್ನು ಬೋಧಿಸುವ ಅಯ್ಯಪ್ಪನ ಸಂದೇಶವು ಎಲ್ಲಡೆ ಪಸರಿದೆ ಎಂದರು.
ಸಿಪಿಎಂ ಕೇವಲ ಕೊಲೆ ರಾಜಕಾರಣ ದಲ್ಲಿ ತೊಡಗಿದೆ. ಪುಲ್ಲೂರು ಪೆರಿಯಾದಲ್ಲಿ ನಡೆದ ಅವಳಿ ಯುವಕರ ಬರ್ಬರ ಕೊಲೆ ಕೃತ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರ ಹತ್ಯೆಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ವಿಪಕ್ಷ ಸಿಪಿಎಂ ಜತೆ ಜಿಲ್ಲೆಯ ಕೆಲ ಗ್ರಾ.ಪಂ. ಗಳಲ್ಲಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ಕಪಟ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಪೈವಳಿಕೆ,ಕಾರಡ್ಕ, ಎಣ್ಮಕಜೆ ಗ್ರಾ.ಪಂಗಳಲ್ಲಿ ಕೋಲಿಬಿ ಸಖ್ಯದಲ್ಲಿದೆ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೇಂದ್ರದಲ್ಲಿ ಮತ್ತೂಮ್ಮೆ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಿ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗಲಿರುವರು. ಇದನ್ನು ನನಸಾ ಗಿಸಲು ಎಲ್ಲ ಕಾರ್ಯಕರ್ತರು ಜತೆಗೂಡಿ ಶ್ರಮಿಸಬೇಕೆಂದರು. ಮೋದಿ ಸರಕಾರದ ವಿಶೇಷ ಸಾಧನೆಗಳನ್ನು ಜನರ ಬಳಿ ತಲುಪಿಸುವ ಜವಾಬ್ದಾರಿಯು ಪ್ರತಿಯೊಬ್ಬ ಕಾರ್ಯಕರ್ತನ ಹೆಗಲ ಮೇಲಿದೆ ಎಂದರು.
ಚುನಾವಣೆಯಲ್ಲಿ ತಕ್ಕ ಶಾಸ್ತಿ
ಸ್ತ್ರೀ ಸ್ವಾತಂತ್ರ್ಯದ ನೆಪದಲ್ಲಿ ಅನ್ಯಮತೀಯ ಯುವತಿಯರನ್ನು ಶಬರಿಮಲೆಗೆ ಒತ್ತಾಯಪೂರ್ವಕವಾಗಿ ಕಳುಹಿಸಿದ ಎಡರಂಗ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಲಿದೆ ಎಂದರು. ರಾಜ್ಯದ ವಿವಿಧೆೆಡೆಗಳಲ್ಲಿ ನಾಮಜಪ ಯಜ್ಞದಲ್ಲಿ ತೊಡಗಿದ್ದ ಸುಮಾರು 6 ಸಾವಿರ ಮಂದಿ ಮಹಿಳೆಯರು ಮತ್ತು 4 ಸಾವಿರ ಮಂದಿ ಯುವಕರ ವಿರುದ್ಧ ವಿನಾಕಾರಣ ಕೇಸುಗಳನ್ನು ದಾಖಲಿಸಿದ ರಾಜ್ಯ ಸರಕಾರದ ಕ್ರಮ ತರವಲ್ಲವೆಂದರು. ಶಬರಿಮಲೆ ಹೋರಾಟವು ಧರ್ಮ ರಕ್ಷಣೆಯ ಭಾಗವಾಗಿ ಯಶಸ್ಸು ಕಂಡಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ ಎಂದರು.
-ಕೆ. ಶ್ರೀಕಾಂತ್ ಬಿಜೆಪಿ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.