ಮಂಜೇಶ್ವರ, ಉದುಮದಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ರಹಸ್ಯ ಒಪ್ಪಂದ : ಕೆ.ಸುರೇಂದ್ರನ್
ಕಾಂಞಂಗಾಡ್ ನಿವಾಸಿಯನ್ನು ಎಡರಂಗದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ
Team Udayavani, Mar 31, 2021, 4:08 PM IST
ಕಾಸರಗೋಡು: ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸುವ ಉದ್ದೇಶದಿಂದ ಮಂಜೇಶ್ವರ ಮತ್ತು ಉದುಮದಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.
ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಪಿಎಂ-ಮುಸ್ಲಿಂ ಲೀಗ್ ಹಾಲು-ಸಕ್ಕರೆಯಂತೆ ಸಂಬಂಧವನ್ನು ಹೊಂದಿದೆ. ಉದುಮದಲ್ಲಿ ಸಿಪಿಎಂ ಅಭ್ಯರ್ಥಿಗೆ ಮುಸ್ಲಿಂ ಲೀಗ್, ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಗೆ ಸಿಪಿಎಂ ಪರಸ್ಪರ ನೆರವಾಗುವಂತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಈ ಕಾರಣದಿಂದಲೇ ಮಂಜೇಶ್ವರದಲ್ಲಿ ಸಮರ್ಥರೂ, ಸ್ಥಳೀಯರೂ ಆದ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದರೂ ಕೊನೆಯ ಹಂತದಲ್ಲಿ ಅವರನ್ನು ಬದಲಾಯಿಸಿ ಕಾಂಞಂಗಾಡ್ ನಿವಾಸಿಯನ್ನು ಎಡರಂಗದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಮಂಜೇಶ್ವರ ಹಾಗು ಕಾಸರಗೋಡಿನಲ್ಲಿ 3000 ಅವಳಿ ಮತಗಳಿವೆಯೆಂದು ಸುರೇಂದ್ರನ್ ಆರೋಪಿಸಿದ್ದಾರೆ. ಮಂಜೇಶ್ವರದ ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಕೇಂದ್ರ ಸೇನೆಯನ್ನು ನೇಮಿಸಬೇಕು, ಆ ಮೂಲಕ ಸ್ವತಂತ್ರ ಹಾಗು ನಿಷ್ಪಕ್ಷ ಚುನಾವಣೆ ನಡೆಸಬೇಕೆಂದೂ ಅವರು ಆಗ್ರಹಿಸಿದರು.
ಚಿನ್ನ, ಡಾಲರ್ ಸಾಗಾಟ ಪ್ರಕರಣದಲ್ಲೂ, ಆಳ ಸಮುದ್ರ ಮೀನುಗಾರಿಕೆ, ಸ್ಪಿಂಕ್ಲರ್ ವಿವಾದ, ಶಬರಿಮಲೆ ವಿಯಷದಲ್ಲೂ ಮುಖ್ಯಮಂತ್ರಿ, ಸಚಿವರು, ವಿಧಾನಸಭಾ ಸ್ಪೀಕರ್ ಶಾಮೀಲಾಗಿರುವುದಾಗಿ ಸಾಬೀತುಗೊಳ್ಳುತಿದೆ. ರಾಜ್ಯ ಸರಕಾರ ಭ್ರಷ್ಟಾಚಾರಿಗಳ, ದೇಶದ್ರೋಹಿಗಳ ಕಾವಲುಗಾರನಾಗಿ ಬದಲಾಗಿದೆಯೆಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಧಾಮ ಗೋಸಾಡ, ಹತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.