ಮಂಗಲ್ಪಾಡಿ ಕುಕ್ಕಾರು ಸೇತುವೆ ಬಿರುಕು: ಅಪಾಯಕ್ಕೆ ಆಹ್ವಾನ !
Team Udayavani, May 24, 2018, 6:00 AM IST
ಕುಂಬಳೆ: ಮಂಗಳೂರು ಕಾಸರಗೋಡು ಹೆದ್ದಾರಿಯ ಮಂಗಲ್ಪಾಡಿಯ ಕುಕ್ಕಾರು ಸೇತುವೆ ಬಿರುಕು ಬಿಟ್ಟು ಶಿಥಿಲಗೊಂಡಿದೆ. ಸ್ವರ್ಣಗಿರಿ ತೋಡಿಗೆ ನಿರ್ಮಿಸಿದ ಈ ಸೇತುವೆಗೆ ಸುವರ್ಣ ವರ್ಷ ಸಂದಿದೆ. ಕಳಪೆ ಸೇತುವೆಗೆ ಕೆಲವು ಬಾರಿ ಲೋಕೋಪಯೋಗಿ ಇಲಾಖೆ ಯಿಂದ ಕಾಯಕಲ್ಪ ಮಾಡಲಾಗಿದೆ.ಇದೀಗ ಸೇತುವೆ ಮತ್ತು ರಸ್ತೆ ಕೂಡುವ ಭಾಗ ಒಡೆದಿದೆ. ಅಗಲ ಕಿರಿದಾದ ಈ ಸೇತುವೆಯಲ್ಲಿ ಹಲವಾರು ವರ್ಷಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ಲಾರಿಯೊಂದು ಸೇತುವೆಯ ತಡೆಗೋಡೆಗೆ ಬಡಿದು ತಡೆಗೋಡೆ ಆಂಶಿಕವಾಗಿ ಕುಸಿದಿದೆ.ಮೇಲೋ°ಟಕ್ಕೆ ಸೇತುವೆ ರಸ್ತೆಯ ಮೇಲೆ ಡಾಮರೀಕಣವಾಗಿದ್ದು ಅಡಿಭಾಗ ಕೆಲವೆಡೆ ಒಡೆದಿದೆ.
ಸೇತುವೆ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ
ಆದರೆ ಬಿರುಕು ಬಿಟ್ಟ ಶಿಥಿಲ ಸೇತುವೆಯ ಸಮಸ್ಯೆಗೆ ಮಾತ್ರ ಪರಿಹಾರ ವಾಗಿಲ್ಲ. ದಿನದಿಂದ ದಿನಕ್ಕೆ ಸೇತುವೆ ಕುಸಿಯುವ ಹಂತದಲ್ಲಿದೆ.ಹೆದ್ದಾರಿ ಚತುಷ್ಪಥ ಯೋಜನೆ ಇನ್ನೂ ರಾಜ್ಯದಲ್ಲಿ ಆರಂಭಗೊಂಡಿಲ್ಲ. ನಿಧಾನವೇ ಪ್ರಧಾನ ವಾಗಿ ನಡೆಯುವ ರಾಜ್ಯದ ಯೋಜನೆ ಪ್ರಕ್ರಿಯೆಯಲ್ಲಿ ಕುಕ್ಕಾರು, ಉಪ್ಪಳ, ಮೊಗ್ರಾಲ್ ಮುಂತಾದ ಸೇತುವೆ ಗಳು ಶಿಥಿಲಗೊಳ್ಳುತ್ತಿವೆ. ಆದರೆ ಗುತ್ತಿಗೆದಾರ ರಿಗಾಗಿ ರಸ್ತೆ ಪಕ್ಕದಲ್ಲಿ ಎತ್ತರ ಪ್ರದೇಶವಲ್ಲದ ಸ್ಥಳದಲ್ಲಿ ಕಬ್ಬಿಣ ತಡೆಬೇಲಿ, ಕಾಂಕ್ರಿಟ್ ತಡೆಗೋಡೆ,ನೀರು ಹರಿಯದಲ್ಲಿ ಕಾಂಕ್ರಿಟ್ ತೋಡು ನಿರ್ಮಾಣ ಮುಂತಾದ ಅನಗತ್ಯ ಕಾಮಗಾರಿಗಳು ಹೇರಳ ನಿಧಿ ದುರ್ವಿವಿನಿಯೋಗದ ಮೂಲಕ ನಡೆಯುತ್ತಲೇ ಇದೆ. ಆದರೆ ಅಗತ್ಯದ ಕಾಮಗಾರಿ ಮಾತ್ರ ನಡೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರದು. ಕುಸಿಯಲು ಮುಂದಾದ ಕುಕ್ಕಾರು ಸೇತುವೆಗೆ ತುರ್ತು ಕಾಯಕಲ್ಪ ಮಾಡದಿದ್ದಲ್ಲಿ ಮುಂದೊಂದು ದಿನ ದುರಂತ ಸಂಭವಿಸಲಿದೆ. ಸಂಭಾವ್ಯ ದುರಂತ ಘಟಿಸುವ ಮುನ್ನ ಲೋಕೋಪಯೋಗಿ ಇಲಾಖೆ ಶಿಥಿಲ ಸೇತುವೆಯತ್ತ ಕಣ್ಣು ಹಾಯಿಸಬೇಕಾಗಿದೆ.
ಅಪಘಾತವೂ .. ಪರಿಹಾರವೂ..
ಕುಕ್ಕಾರು ಸೇತುವೆ ಪರಿಸರ ಪ್ರದೇಶದ ರಸ್ತೆಯಲ್ಲಿ ಅನೇಕ ವರ್ಷಗಳಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಕೆಲವು ಸಾವು-ನೋವುಗಳೂ ಸಂಭವಿಸಿವೆ. ಯಾವುದೋ ಅಗೋಚರ ಶಕ್ತಿಯಿಂದಾಗಿ ಈ ರೀತಿಯಾಗು ವುದಾಗಿ ಸ್ಥಳೀಯರ ಅಭಿಪ್ರಾಯ. ಇದರಂತೆ ಸ್ಥಳೀಯ ಮನೆಯವ ರೋರ್ವರು ಪರಿಹಾರ ಕ್ರಿಯಾದಿ ಯನ್ನೂ ಮಾಡಿಸಿದ್ದಾರಂತೆ. ಆ ಬಳಿಕ ಈ ಪ್ರದೇಶದಲ್ಲಿ ಅಪಘಾತ ನಡೆದಿಲ್ಲವಂತೆ.
– ಅಚ್ಯುತ ಚೇವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.