![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 18, 2022, 7:30 PM IST
ಕಾಸರಗೋಡು: ವಿದ್ಯಾನಗರದ ಫಾರೆಸ್ಟ್ ಗೋದಾಮು ಬೀಗ ಮುರಿದು ಶ್ರೀಗಂಧ ಹಾಗೂ ಆನೆದಂತ ಕಳವುಗೈದ ಆರೋಪಿ ಶಿವಮೊಗ್ಗ ಟಿಪ್ಪು ನಗರ ನಿವಾಸಿ ಮುಹಮ್ಮದ್ ರಫೀಖ್(40)ನನ್ನು 17 ವರ್ಷಗಳ ಬಳಿಕ ಕ್ರೈಂಬ್ರಾಂಚ್ ಡಿವೈಎಸ್‌ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ.
2005 ರಲ್ಲಿ ವಿದ್ಯಾನಗರ ಫಾರೆಸ್ಟ್ ಗೋದಾಮಿನಿಂದ ಬೀಗ ಮುರಿದು 10 ಶ್ರೀಗಂಧ ಮರದ ದಿಮ್ಮಿಗಳನ್ನು ಹಾಗು ಎರಡು ಆನೆ ದಂತವನ್ನು ಕಳವು ಮಾಡಲಾಗಿತ್ತು. ಹತ್ತು ಮಂದಿಯ ತಂಡದ ವಿರುದ್ಧ ಕೇಸು ದಾಖಲಿಸಲಾಗಿತ್ತು. ಇದೀಗ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ತಾಯಿ ಯುವಕನೊಂದಿಗೆ ಬಂಧನ
ಮಂಜೇಶ್ವರ: ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಂಜೇಶ್ವರ ನಿವಾಸಿ ಮಹಿಳೆಯನ್ನು ಮಂಜೇಶ್ವರ ಪೊಲೀಸರು ಕರ್ನಾಟಕದ ಬಿಜಾಪುರದ ಕ್ವಾರ್ಟರ್ಸೊಂದರಿಂದ ಬಂಧಿಸಿದ್ದಾರೆ.
ಯುವತಿಯ ಜೊತೆಗೆ ಉಡುಪಿ ನಿವಾಸಿಯಾದ ಆಶಿಕ್ ಎಂಬಾತನಿದ್ದನು. ಇವರು ರಿಜಿಸ್ಟರ್ಡ್ ವಿವಾಹವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.