ನೆಚ್ಚಿನ ಕನ್ನಡವ ಕಂಡೆ: ಡಾ| ತುಪ್ಪಿಲ್‌


Team Udayavani, Sep 30, 2019, 5:54 AM IST

29VNR01A

ವಿದ್ಯಾನಗರ: ಜಗತ್ತಿನಾದ್ಯಂತ ಎಷ್ಟು ಧರ್ಮಗಳಿದ್ದರೂ, ಮನುಜ ಧರ್ಮ ವಷ್ಟೇ ಶ್ರೇಷ್ಠವಾದುದು. ಮಾನವ ಕುಲಕೋಟಿ ಇಂದು ಈ ಮಟ್ಟಕ್ಕೆ ತಲಪು ವಲ್ಲಿ ತಲೆತಲಾಂತರಿಂದ ನಡೆದುಬಂದ ಜಾನಪದ ಸಂಸ್ಕೃತಿ ಭದ್ರ ತಳಹದಿ ಯೊದಗಿಸಿದ್ದು, ವಿಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಜಾನಪದಕ್ಕೆ ಇದೆ ಎಂದು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿ , ಭಾರತ ಸರ್ಕಾರದ ಇನ್ಸ್‌ಲಾರ್‌ ಅಧ್ಯಕ್ಷ ಡಾ| ವೆಂಕಟೇಶ ತುಪ್ಪಿಲ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಸುಬ್ಬಯ್ಯಕಟ್ಟೆ ಕನ್ನಡ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಆದಿತ್ಯ ಫ್ರೆಂಡ್ಸ್‌ ಕ್ಲಬ್‌ ನಾರಾಯಣಮಂಗಲಗಳ ಸಂಯುಕ್ತ ಆಶ್ರಯದಲ್ಲಿ ನಾರಾಯಣಮಂಗಲ ಅನುದಾನಿತ ಶಾಲಾ ವಠಾರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಓಣಂ-ದಸರಾ ಜಾನಪದ ಉತ್ಸವ ಸಮಾರಂಭವನ್ನು ತುಳು ನಾಡಿನ ಸಾಂಪ್ರದಾಯಿಕ ಚೆಂಡೆ ನುಡಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು-ನುಡಿಯ ಸಮƒದ್ದ ಬೆಳವಣಿಗೆಯ ಹಿಂದೆ ಇಲ್ಲಿಯ ಮಣ್ಣಿನ ಕಣಕಣದೊಳಗಿನ ಜಾನಪದೀಯ ಚೌಕಟ್ಟಿನ ಸಾಂಸ್ಕೃತಿಕ ಹಿನ್ನೆಲೆ ಅಧಮ್ಯ ಚೇತನವನ್ನು ನೀಡಿ ಬೆಂಬಲಿಸಿದೆ. ಹುಟ್ಟು ಮತ್ತು ಸಾವುಗಳ ಮಧ್ಯೆ ಆಟ, ಕಲಿಕೆ, ಸಂಪಾದನೆಗಳಲ್ಲಿ ವ್ಯಸ್ಥ ರಾಗಿ ನಿಸ್ವಾರ್ಥತೆಯ ಸಾಮಾಜಿಕ ಕೊಡುಗೆಗಳನ್ನು ಮರೆಯುತ್ತಿದ್ದೇವೆ. ಆದರೆ ಯೋಗ್ಯರಿಗೆ ನಮ್ಮಲ್ಲಿರುವ ಅರಿ ವನ್ನು ಧಾರೆಯೆರೆಯುವಲ್ಲಿ ಬದುಕಿನ ಸಾರ್ಥಕತೆ ಅಡಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಜಾನಪದ ಪರಿ ಷತ್ತು ಕೇರಳ ಗಡಿನಾಡ ಘಟಕದ ಸುಧೀರ್ಘ‌ ಅವಧಿಯ ನಾಡು- ನುಡಿಯ ಸೇವೆ ಇತರೆಡೆಗಳಿಗೆ ಸದಾ ಮಾತƒಕೆಯಾಗಿದ್ದು, ಬಹುಸಂಸ್ಕೃತಿಯ ಗಡಿನಾಡಿನ ಶ್ರೀಮಂತ ಪರಂಪರೆಯ ಸಂಕೇತವಾಗಿ ಜನಮಾನಸದಲ್ಲಿ ನೆಲೆಗೊಳ್ಳಲಿದೆ ಎಂದು ಅವರು ಶ್ಲಾಘಿಸಿದರು.

‌ಕ್ತಿಹೊಂದಿದ ಸತ್‌ ಸಂಪ್ರದಾಯವಾಗಿ ಬೆಳೆದುಬಂದಿದೆ ಎಂದು ತಿಳಿಸಿದರು. ಬಾಲವಿಕಾಸಪರಿಷತ್ತು ಕರ್ನಾಟಕದ ನಾಲ್ಕು ಗಡಿನಾಡ ವ್ಯಾಪ್ತಿಯಲ್ಲಿ ಗಡಿನಾಡ ಘಟಕದ ರೂಪೀಕರಣಕ್ಕೆ ಚಿಂತನೆ ನಡೆಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ‌ಅವರು, ಪ್ರಸ್ತುತ ಸಾಲಿನ ರಾಜ್ಯಮಟ್ಟದ ಮಕ್ಕಳ ಹಬ್ಬವನ್ನು ಕಾಸರಗೋಡಿನಲ್ಲಿ ಆಯೋಜಿಸ ಲಾಗುವುದೆಂದು ಘೋಶಿಸಿದರು.

ಮಾನವ ಕುಲದ ಉದ್ದಾರ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ಪೋಲೀಸ್‌ ಮಹಾನಿರ್ದೇಶಕ ಕೆ.ವಿ.ಆರ್‌.ಠಾಗೋರ್‌ ಅವರು ಮಾತನಾಡಿ, ಹƒದಯ ವೈಶಾಲ್ಯತೆ, ಹಸುನ್ಮುಖದ ನಗು ಮನುಷ್ಯನನ್ನು ಬಹಳಷ್ಟು ಎತ್ತರಕ್ಕೆ ಒಯ್ಯುತ್ತದೆ. ಪ್ರತಿದಿನದ ಶುಭಸೂರ್ಯೋದವು ಮನುಷ್ಯ ಬದುಕಿನ ಅವಕಾಶಗಳಿಗೆ ತೆರೆದುಕೊಳ್ಳುವುದರೊಂದಿಗೆ ಆರಂಭಗೊಳ್ಳುತ್ತಿದ್ದು, ಸದುಪಯೋಗಪಡಿಸುವ ನೈಪುಣ್ಯತೆ ನಮ್ಮನ್ನು ಬೆಳೆಸುತ್ತದೆ. ಪರಂಪರೆಯ ಅರಿವಿನೊಂದಿಗೆ ನಮ್ಮ ಬದುಕು ಮುನ್ನಡೆದಾಗ ಸುಂದರ ಬದುಕು ನಿರ್ಮಾಣವಾಗುತ್ತದೆ. ಪಾರಂಪರಿಕ ಜಾನಪದ ಚಿಂತನೆಯ ಮೂಲ ಉದ್ದೇಶ ಮಾನವ ಕುಲದ ಉದ್ಧಾರವೇ ಆಗಿದೆ ಎಂದು ತಿಳಿಸಿದರು.

ಕನ್ನಡವನ್ನು ಗಡಿನಾಡಿನ ಕನ್ನಡಿ ಗರು ಪೋಷಿಸಿ ಸಾಧನೆ ಮಾಡುತ್ತಿದ್ದಾರೆ. 26 ಭಾಷೆಗಳನ್ನೂ ಪೋಷಿ ಸುವ ಹೃದಯ ವೈಶಾಲ್ಯತೆ ಕಾಸರ ಗೋಡಿನ ಕನ್ನಡಿಗರದ್ದು. ಸ್ಪೂರ್ತಿಯಾ ಗುವ ವಿಶೇಷ ಗುಣ, ಅವಕಾಶಗಳನ್ನು ಸದಾವಕಾಶಗಳನ್ನಾಗಿ ಮಾಡುವ ಚಾಣಾಕ್ಷತೆ, ನಿಸ್ವಾರ್ಥ ಮನೋಭಾವ ಇಲ್ಲಿನ ಕನ್ನಡಿಗರನ್ನು ಶ್ರೀಮಂತವಾಗಿಸಿದೆ. ಎಡರು ತೊಡರುಗಳಿಂದ ಕೂಡಿದ ಕ್ಷಿಷ್ಟವಾದ ಹಾದಿಯಲಿ ನಡೆದರೇನೇ ತƒಪ್ತಿಯ ಕಡಲನು ಸೇರಬಹುದು.
– ಡಾ| ವೆಂಕಟೇಶ ತುಪ್ಪಿಲ್‌

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.