ಹಗಲು ಮನೆ: ಫೆ. 8ರಂದು ಉದ್ಘಾಟನೆ
Team Udayavani, Jan 31, 2020, 1:51 AM IST
ಕಾಸರಗೋಡು: ವೃದ್ಧರಲ್ಲಿ ವಿಶ್ವಾಸ ಹೆಚ್ಚಿಸಿ, ಸಮಾಜದ ಪ್ರಧಾನ ವಾಹಿ ನಿಗೆ ಕರೆತರುವ ಸೃಜನಾತ್ಮಕ ಚಟುವಟಿಕೆಗಳ ಅಂಗವಾಗಿ ಪರಪ್ಪ ಬ್ಲಾಕ್ ಪಂಚಾಯತ್ ವತಿಯಿಂದ ಹಗಲು ಮನೆಯ ಉದ್ಘಾ ಟನೆ ಫೆ.8 ರಂದು ನಡೆಯಲಿದೆ. ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸುವರು.
ಪರಪ್ಪ ಬ್ಲಾಕ್ ಕಿನಾನೂರು-ಕರಿಂದಳಂ ಕುಂಬಳಪಳ್ಳಿಯಲ್ಲಿ ಖರೀದಿಸಿದ 20 ಸೆಂಟ್ಸ್ ಜಾಗದಲ್ಲಿ 20 ಲಕ್ಷ ವೆಚ್ಚದಲ್ಲಿ ಹಗಲು ಮನೆ ನಿರ್ಮಿಸಲಾಗಿದೆ. ಹಾಲ್, ಅಡುಗೆಮನೆ, ಶೌಚಾಲಯ ಸೇರಿದ ಕಟ್ಟಡವಿದು. ವಿಶಾಲ ಅಂಗಳ, ಸೂಕ್ತ ಆಸನಗಳು, ಮೇಜುಗಳು ಇವೆ. ಆಟವಾಡಲು ಚೆಸ್ ಬೋರ್ಡ್, ಕ್ಯಾರಂಸ್, ವೀಕ್ಷಣೆಗೆ ಟೀವಿ ಇತ್ಯಾದಿಗಳಿವೆ. ಅಡುಗೆ ಮನೆಯಲ್ಲಿ ಅಗತ್ಯದ ಅಡುಗೆ ಅನಿಲ, ಪಾತ್ರೆ ಸಲಕರಣೆಗಳು ಇವೆ. ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್ ಅವರು ಅಧ್ಯಕ್ಷರಾಗಿರುವ ಹಗಲು ಮನೆ ಕಲ್ಯಾಣ ಸಮಿತಿ ಈ ಯೋಜನೆಯ ಹೊಣೆ ಹೊತ್ತಿದೆ. ವಿಶೇಷ ಚೇತನರನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ವಿಶೇಷ ಚೇತನರ ತರಬೇತಿ ಕೇಂದ್ರ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಜಿಲ್ಲಾ ಪಂಚಾಯತ್ ಮತ್ತು ಪರಪ್ಪ ಬ್ಲಾಕ್ ಪಂಚಾಯತ್ ಜಂಟಿ ವತಿಯಿಂದ ಪನತ್ತಡಿಯಲ್ಲಿ ಈ ಕೇಂದ್ರದ ನಿರ್ಮಾಣ ನಡೆಸಲಾಗಿದೆ.
ವಿಶೇಷ ಚೇತನರಿಗೆ ಬಟ್ಟೆ-ಕಾಗದದ ಚೀಲ, ಕಾಗದದ ಪೆನ್ ಇತ್ಯಾದಿ ನಿರ್ಮಾಣದ ತರಬೇತು ನೀಡಲಾಗುವುದು. ಪರಪ್ಪ ಬ್ಲಾಕ್ ಈ ಕೇಂದ್ರದ ಉಸ್ತುವಾರಿ ಹೊಂದಿದೆ. ಮೊದಲ ಹಂತದಲ್ಲಿ 21 ಮಂದಿಗೆ ತರಬೇತಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.