ಡಿಸೆಂಬರ್ 8, 10, 14: ಕೇರಳ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ
Team Udayavani, Nov 6, 2020, 10:57 PM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಕೇರಳ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ದಿನಾಂಕಗಳನ್ನು ರಾಜ್ಯ ಚುನಾವಣಾ ಆಯೋಗವು ಶುಕ್ರವಾರ ಪ್ರಕಟಿಸಿದೆ. ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತ ಡಿ. 8ರಂದು, ಎರಡನೇ ಹಂತದ ಚುನಾವಣೆ ಡಿ. 10ರಂದು, ಮೂರನೇ ಹಂತ ಡಿ. 14ರಂದು ನಡೆಯಲಿದೆ. ಮತ ಎಣಿಕೆ ಡಿ. 16ರಂದು ನಡೆಯಲಿದೆ ಎಂದು ಆಯೋಗವು ತಿಳಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ 3ನೇ ಹಂತದಲ್ಲಿ ಡಿ. 14ರಂದು ಚುನಾವಣೆ ನಡೆಯುವುದು. ಮಟ್ಟನ್ನೂರು ಪುರಸಭೆ ಹೊರತುಪಡಿಸಿ 1,199 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. 941 ಗ್ರಾ.ಪಂ.ಗಳು, 152 ಬ್ಲಾಕ್ ಪಂಚಾಯತ್‌ಗಳು, 14 ಜಿ.ಪಂ.ಗಳು, 86 ನಗರಸಭೆೆಗಳು ಮತ್ತು 6 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಕೊರೊನಾ ಪಾಸಿಟಿವ್ ಮತ್ತು ಸಂಪರ್ಕ ತಡೆಯನ್ನು ಹೊಂದಿರುವವರಿಗೆ ಅಂಚೆ ಮತದಾನಕ್ಕೆ ಅನುಕೂಲ ಕಲ್ಪಿಸಲಾಗಿದೆ.
ತಿರುವನಂತಪುರದಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತದಾನದ ದಿನಾಂಕಗಳನ್ನು ಘೋಷಿಸಲಾಯಿತು. ಚುನಾವಣಾ ಆಯುಕ್ತರು ಗುರುವಾರ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಡಿಜಿಪಿಯನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಸಮಗ್ರ ಸಮಾಲೋಚನೆ ನಡೆಸಿದ್ದರು. ಈ ವೇಳೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಆಯೋಗವು ಸ್ಪಷ್ಟಪಡಿಸಿತ್ತು. ಇದೇ ಮೊದಲ ಬಾರಿಗೆ ಕೇರಳದಲ್ಲಿ ಮೂರು ಹಂತಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.