ಹದಗೆಟ್ಟ ಹೆದ್ದಾರಿ: ವರ್ಷಗಳೇ ಕಳೆದರೂ ನೀಗದ ಸಮಸ್ಯೆ

ಚಾಲಕರಿಗೆ ಸವಾಲಾಗಿರುವ ಚೆರ್ಕಳ ವೃತ್ತಗಳು

Team Udayavani, Jun 18, 2019, 5:57 AM IST

16VNRIC-P01

ವಿದ್ಯಾನಗರ: ದಟ್ಟಣೆ ನಿವಾರಿಸಿ ಸಂಚಾರವನ್ನು ಸುಗಮವಾಗಿಸಬೇಕಾದ ವೃತ್ತವೇ ಇಂದು ಬಹುದೊಡ್ಡ ಸಮಸ್ಯೆಯಾಗಿ, ಜೀವಕ್ಕೆ ಸವಾಲಾಗಿ ಪರಿಣಮಿಸಿದೆ. ವಾಹನಚಾಲಕರು ಹಾಗೂ ಪಾದಚಾರಿಗಳು ‌ದಾರಿ, ಎತ್ತ ಸಾಗಬೇಕು ಎಂಬ ಗೊಂದಲದೊಂದಿಗೆ ಸುತ್ತಿಬಳಸಿ ಅದು ಹೇಗೋ ಪೇಟೆದಾಟಿ ಹೋಗುವ ಸ್ಥಿತಿ. ಇದು ಚೆರ್ಕಳ ಪೇಟೆಯ ಅವಸ್ಥೆ.

ಇಲ್ಲಿ ವಾಹನಗಳ ಸುತ್ತಾಟಕ್ಕೆ ಕೊನೆಯಿಲ್ಲ. ನಗರ ಅಭಿವೃದ್ಧಿಯ ಹೆಸರಿನಲ್ಲಿ 2 ವರ್ಷಗಳ ಹಿಂದೆ ಚೆರ್ಕಳ ಪೇಟೆಯ ಹೆದ್ದಾರಿ ನವೀಕರಿಸಿದ್ದು, ಪೇಟೆಗೆ ತಲುಪುವ ವಾಹನಗಳು, ಪ್ರಯಾಣಿಕರು ಎರಡು ಸುತ್ತು ಬರಬೇಕಾದ ಸ್ಥಿತಿಯುಂಟಾಗಿದೆ. ಪ್ರಧಾನ ಪ್ರವೇಶ ಸ್ಥಳದಲ್ಲಿ ಒಂದು ವೃತ್ತ ಬೇಕಾದಲ್ಲಿ ಎರಡು ವೃತ್ತಗಳನ್ನು ನಿರ್ಮಿಸಿರುವುದು ಇದಕ್ಕೆ ಕಾರಣ. ಇದರಿಂದ ಹೊರ ರಾಜ್ಯಗಳಿಂದ ಬರುವ ಚಾಲಕರು ಯಾವ ಸರ್ಕಲ್‌ನಲ್ಲಿ ಸುತ್ತುವರಿದರೆ ಉದ್ದೇಶಿತ ರಸ್ತೆಗೆ ತಲುಪಬಹುದು ಎಂಬ ಗೊಂದಲ ಎದುರಿಸುವಂತಾಗಿದೆ. ಅಂಗೆ„ ಅಗಲ ಜಾಗದಲ್ಲಿ ಎರಡು ವೃತ್ತಗಳನ್ನು ನಿರ್ಮಿಸಿದಾಗ ಉಂಟಾದ ಅನಾಹುತ ಕಡಿಮೆಯೇನಲ್ಲ. ಆದುದರಿಂದ ನಾನಾ ಭಾಗಗಳಿಂದ ಬರುವ ವಾಹನ ಚಾಲಕರ ಹಾಗೂ ಊರವರ ಪ್ರತಿಭಟನೆಗೆ ಸ್ಪಂ ದಿಸಿದ ಲೋಕೋಪಯೋಗಿ ಸಚಿವ ಜಿ. ಸುಧಾಕರನ್‌ ಈ ವೃತ್ತವನ್ನು ತೆರವುಗೊಳಿಸಲು ಆದೇಶಿಸಿದ್ದರು. ಅದರಂತೆ ವರ್ಷಗಳ ಹಿಂದೆ ವೃತ್ತವನ್ನು ತೆರವುಗೊಳಿಸಲಾಯಿತು. ಇದು ಇಲ್ಲಿನ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿರುವುದು ವಿಪರ್ಯಾಸ. ಖಾಸಗಿ ವಾಹನಗಳ ಪಾರ್ಕಿಂಗ್‌ ಗ್ರೌಂಡ್‌ ಆಗಿ ಬದಲಾದ ವೃತ್ತದಲ್ಲಿ ರಾತ್ರಿಯಾದರೆ ಹೊರರಾಜ್ಯ ಖಾರ್ಮಿಕರು ಮಲಗಿ ನಿದ್ರಿಸುತ್ತಿದ್ದು ಈ ಮಾರ್ಗವಾಗಿ ಸಂಚರಿಸುವ ಘನವಾಹನಗಳು ಮತ್ತಿತರ ವಾಹನಗಳಿಂದ ಉಂಟಾಗಬಹುದಾದ ಅಪಘಾತ, ಜೀವಹಾನಿ ಸಾಧ್ಯತೆ ಜನರ ಆತಂಕಕ್ಕೆ ಕಾರಣವಾಗಿದೆ.

ತೆರವುಗೊಳಿಸಿದ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು 70 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು 6 ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ 2018ರ ಡಿಸೆಂಬರ್‌ನಲ್ಲಿ ಚೆರ್ಕಳ-ಕಲ್ಲಡ್ಕ ಹೆದ್ದಾರಿಯ ದುರಸ್ತಿ ಕಾಮಗಾರಿ ಉದ್ಘಾಟನೆಗಾಗಿ ಚೆರ್ಕಳಕ್ಕೆ ತಲುಪಿದ ಸಚಿವರು ಘೋಷಿಸಿದ್ದರು. ಇದರ ಹೊರತು, ಒಂದು ವೃತ್ತ ಸ್ಥಾಪಿಸಿ ಹೆದ್ದಾರಿ ಡಾಮರೀಕರಣ ನಡೆಸಿ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ಆದೇಶಿಸಲಾಗಿತ್ತು. ವೃತ್ತ ಇದ್ದ ಸ್ಥಳದಲ್ಲಿ ಡಾಮರೀಕರಣ ನಡೆಸಿ ಸಂಚಾರ ಸುಗಮಗೊಳಿಸಲಿರುವ ಕ್ರಮಗಳನ್ನು ಅಧಿಕಾರಿಗಳು ಈ ವರೆಗೂ ಕೈಗೊಂಡಿಲ್ಲ. ತೆರವುಗೊಳಿಸಿದ ವೃತ್ತಗಳಲ್ಲಿ ಹಗಲು ವೇಳೆಯಲ್ಲಿ ವಾಹನ ಪಾರ್ಕಿಂಗ್‌, ರಾತ್ರಿ ವೇಳೆ ಹೊರ ರಾಜ್ಯ ಕಾರ್ಮಿಕರು ಮಲಗುತ್ತಿರುವುದು ಚೆರ್ಕಳ ಪೇಟೆಯಲ್ಲಿ ಬಹು ದೊಡ್ಡ ದುರಂತಕ್ಕೆ ಕಾರಣವಾಗಲಿದೆ ಎಂದು ಇಲ್ಲಿನ ವಾಹನ ಚಾಲಕರು ಮತ್ತು ನಾಗರಿಕರು ಹಲವಾರು ಬಾರಿ ಅ ಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಕರ್ನಾಟಕದಿಂದ ಪೆರ್ಲ, ಆದೂರು ಹೆದ್ದಾರಿ ಮೂಲಕ ನೂರಾರು ವಾಹನಗಳು ಚೆರ್ಕಳಕ್ಕೆ ರಾತ್ರಿ ವೇಳೆಗಳಲ್ಲಿ ತಲುಪುತ್ತವೆ. ಸ್ವಲ್ಪ ಎಡವಿದರೂ ಇಲ್ಲಿ ಬಹು ದೊಡ್ಡ ದುರಂತ ಸಂಭವಿಸಲಿದೆ.

ಬದಿಯಡ್ಕ, ಮುಳ್ಳೇರಿಯ ಭಾಗಗಳಿಂದ ಬರುವ ವಾಹನಗಳು ದಿಕ್ಕು ಬದಲಾಯಿಸಿ ಚಲಾಯಿಸುವ ಕಾರಣ ಚೆರ್ಕಳದಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಮೆಕ್‌ಡಾಂ ಡಾಮರೀಕರಣ ನಡೆಸಿದ ಹೆದ್ದಾರಿ ಹಾನಿಗೀಡಾಗಿ ಹಲವು ಭಾಗಗಳಲ್ಲಿ ಹೊಂಡಗಳು ಸೃಷ್ಟಿಯಾಗಿವೆ. ಹೆದ್ದಾರಿಯ ಈ ಹೊಂಡಗಳು ಕೂಡ ಅಪಾಯವನ್ನು ಆಹ್ವಾನಿಸುವಂತೆ ಭಾಸವಾಗುತ್ತಿದೆ. ಜನರ ಅಗತ್ಯಕ್ಕೆ ಸ್ಪಂದಿಸದೆ ದಿವ್ಯ ಮೌನವಹಿಸಿರುವ ಅಧಿಕಾರಿಗಳು ಸಕಾಲದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿ ವೃತ್ತ ನಿರ್ಮಿಸಿ ಚೆರ್ಕಳ ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿರೀಕ್ಷೆ ಎಂದು ನಿಜವಾಗುವುದೋ?

ಗೊಂದಲಮಯ ಪ್ರದೇಶ
ಪೇಟೆ ಪ್ರವೇಶಿಸುತ್ತಿದ್ದಂತೆ ಗೊಂದಲ ವಾಗುತ್ತದೆ. ಯಾವ ರಸ್ತೆಯಲ್ಲಿ ಸಂಚರಿ ಸಬೇಕು ಎಂದೇ ತಿಳಿಯುವುದಿಲ್ಲ. ವಾಹನ ಮತ್ತು ಜನದಟ್ಟಣೆ ಹೆಚ್ಚಿರುವುದರಿಂದ ಎಷ್ಟೇ ಜಾಗ್ರತೆ ವಹಿಸಿದರೂ ಸಾಲದು. ವೃತ್ತದ ಕೆಲಸ ಪೂರ್ತಿಗೊಳಿಸಿ, ರಸ್ತೆಯನ್ನು ವಿಸ್ತಾರ ಗೊಳಿಸಿ ನಿರಾತಂಕ ಸಂಚಾರಕ್ಕೆ ಅನುಕೂಲ ಮಾಡುವ ಅಗತ್ಯವಿದೆ. ಚೆರ್ಕಳ ಪೇಟೆಯಲ್ಲಿ ವಾಹನ ಚಲಾಯಿಸುವುದು ಸವಾಲೇ ಸರಿ.
-ಪ್ರಭಾಕರ
ಕೆ.ಕೆ. ಪುರಂ, ಬಸ್‌ ಚಾಲಕ.

ಸಂಸದರಿಗೆ ಮನವಿಗೆ ತೀರ್ಮಾನ
ಟೂರಿಸ್ಟ್‌ ಗಾಡಿಗಳು, ಶಬರಿಮಲೆಗೆ ಹೋಗುವ ಭಕ್ತರ ಸಾವಿರಾರು ವಾಹನಗಳು ಎಲ್ಲೆಂದರಲ್ಲಿ ಸಂಚರಿಸುತ್ತಿದ್ದು ಪರದಾಡುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಚಾಲಕರಿಗೂ ಪಾದಚಾರಿಗಳಿಗೂ ಸವಾ ಲಾಗಿರುವ ಇಲ್ಲಿನ ಸಮಸ್ಯೆಗೆ ಶೀಘ್ರ ಪರಿಹಾರ ಕೋರಿ ನೂತನ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
-ಆನಂದ ಮಣಿಯಾಣಿ,
ಚೇನಕ್ಕೋಡು.

-ವಿದ್ಯಾಗಣೇಶ್‌ ಅಣಂಗೂರು

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.