ಸವಾಕ್ ಕಲಾವಿದರ ಭಕ್ತಿ ಸಂಗೀತ ಸಿಡಿ ಬಿಡುಗಡೆ
Team Udayavani, Mar 20, 2018, 11:20 AM IST
ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ಸ್ ಆ್ಯಂಡ್ ವರ್ಕರ್ಸ್ ಅಸೋಸಿಯೇಶನ್ (ಸವಾಕ್)ನ ಜಿಲ್ಲಾ ಸಮಿತಿಯ ಸಭೆ ಕಾಸರಗೋಡು ಜಿಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದ ಸಭೆ ಯಲ್ಲಿ ಸಂಘಟನೆಯ ಈವರೆಗಿನ ಕಾರ್ಯಚಟುವಟಿಕೆಗಳ ವಿಸ್ತೃತ ಪುನರವಲೋಕನ ಮತ್ತು ಚರ್ಚೆ ನಡೆಯಿತು.
ಮಾ. 27ರಂದು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಸವಾಕ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂದು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ವಿನೂತನ ಶೈಲಿಯ ಕನ್ನಡ ಹಾಗೂ ಮಲಯಾಳ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗುವುದು. ಸಭೆಯಲ್ಲಿ ಸವಾಕ್ ಸದಸ್ಯ, ಕಲಾವಿದ ಬಾಲ್‌ರಾಜ್ ರಚಿಸಿ ನಿರ್ದೇಶಿಸಿರುವ ಪೆರ್ಲಡ್ಕ ಶ್ರೀಕೃಷ್ಣ ಕ್ಷೇತ್ರದ ಭಕ್ತಿ ಸಂಗೀತ ಸಿಡಿಯನ್ನು ಸವಾಕ್ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಬಿಡುಗಡೆಗೊಳಿಸಿದರು.
ಈ ಭಕ್ತಿ ಸಂಗೀತ ಸಿಡಿಯಲ್ಲಿ ಯದು ಮುರಳೀಧರ, ಸ್ವಾತಿ ವಿಜಯನ್ ಮೊದಲಾದವರು ಹಾಡುಗಾರಿಕೆ ನಡೆಸಿದ್ದಾರೆ.
ಸಭೆಯಲ್ಲಿ ಸವಾಕ್ ಜಿಲ್ಲಾ ಕಾರ್ಯದರ್ಶಿ ವಿ.ಜಿ.ಕಾಸರಗೋಡು, ವಿವಿಧ ವಲಯಗಳ ಮುಖಂಡರಾದ ವಿನು ಬೋವಿಕ್ಕಾನ, ಭಾರತೀ ಬಾಬು, ಜಯಶ್ರೀ ಸುವರ್ಣ, ಸುರೇಶ ಬೇಕಲ್, ಭಾಸ್ಕರ ಮಂಜೇಶ್ವರ, ದಯಾ ಪಿಲಿಕುಂಜೆ, ಶಶಿಧರ ಎದುರ್ತೋಡು, ಕಿರಣ್ ಕಲಾಂಜಲಿ, ಬಾಲರಾಜ್, ಸುಶ್ಮಿತಾ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು. ಸವಾಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಸೀಧರನ್ ಸ್ವಾಗತಿಸಿ, ಉದಯ ಸಾರಂಗ್ ವಂದಿಸಿದರು. ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.