ದಿಲೀಪ್‌ ಪತ್ನಿ ಕಾವ್ಯಾ ಮಾಧವನ್‌ ವಿಚಾರಣೆ


Team Udayavani, Jul 27, 2017, 7:25 AM IST

kavya.jpg

ಕೊಚ್ಚಿ : ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದಿಲೀಪ್‌ ಪತ್ನಿ ಕಾವ್ಯಾ ಮಾಧವನ್‌ ಅವರನ್ನು ಪೊಲೀಸರು ನಿನ್ನೆ ಆಲುವಾದಲ್ಲಿರುವ ಮನೆಯಲ್ಲೇ ವಿಚಾರಣೆ ಗುರಿಪಡಿಸಿದ್ದಾರೆ. ಎಡಿಜಿಪಿ ಬ. ಸಂಧ್ಯಾ ನೇತೃತ್ವದ ತನಿಖಾ ತಂಡ ಸುಮಾರು ಎರಡು ತಾಸು ಕಾವ್ಯಾ ಮಾಧವನ್‌ರನ್ನು ಪ್ರಶ್ನಿಸಿದೆ.ಇದೇ ವೇಳೆ ಕಾವ್ಯಾ ಮಾಧವನ್‌ ತಾಯಿ ಶ್ಯಾಮಲಾ ಅವರನ್ನೂ ಪ್ರಶ್ನಿಸಲಾಗಿದೆ ಎಂಬ ವದಂತಿಯಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. 

ಕಾವ್ಯಾ ಮಾಧವನ್‌ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಅವರನ್ನು ವಿಚಾರಣೆಗೆ ಗುರಿಪಡಿಸುವ ವಿಷಯ ವನ್ನೂ ರಹಸ್ಯವಾಗಿಡಲಾಗಿತ್ತು. ಆಲುವಾ ಪೊಲೀಸ್‌ ಅಧೀಕ್ಷಕ ಎ. ವಿ. ಜಾರ್ಜ್‌ ಪೊಲೀಸರು ನಿನ್ನೆ ಮನೆಯಲ್ಲೇ ವಿಚಾರಣೆ ನಡೆಸಿರುವುದನ್ನು ದೃಢಪಡಿಸಿದ್ದಾರೆ. 

ಕಾವ್ಯಾ ಮಾಧವನ್‌ರನ್ನು ವಿಚಾರಣೆ ಗೊಳಪಡಿಸಲಾಗಿದೆ. ಆದರೆ ಇನ್ನೊಮ್ಮೆ ಅವರನ್ನು ಪ್ರಶ್ನಿಸುವ ಸಾಧ್ಯತೆಯನ್ನು ಈಗಲೇ ಹೇಳಲಿಕ್ಕಾಗದು. ತನಿಖೆ ಮುಂದುವರಿದಂತೆ ಪರಿಸ್ಥಿತಿಗೆ ಹೊಂದಿ ಕೊಂಡು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಾರ್ಜ್‌ ಹೇಳಿದ್ದಾರೆ.

ನಟಿಗೆ ಲೈಂಗಿಕ ಕಿರುಕುಳ ನೀಡಿದ ದೃಶ್ಯವನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್‌ ಫೋನ್‌ ಮತ್ತು ದೃಶ್ಯಗಳಿರುವ ಮೆಮೊರಿ ಕಾರ್ಡನ್ನು ಮುಖ್ಯ ಆರೋಪಿ ಪಲ್ಸರ್‌ ಸುನಿ ನಟ ದಿಲೀಪ್‌ಗೆ ತೀರಾ ಆತ್ಮೀಯರಾಗಿರುವವರಿಗೆ ಹಸ್ತಾಂತರಿಸಿ ದ್ದಾನೆ ಎಂಬ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಪ್ರಶ್ನಿಸಿದ್ದಾರೆ. 

ಕಳೆದ ನವಂಬರ್‌ನಲ್ಲಿ ದಿಲೀಪ್‌ ಮತ್ತು ಕಾವ್ಯಾ ಮಾಧವನ್‌ ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. 

ಜೈಲಿನಿಂದ ದಿಲೀಪ್‌ಗೆ ಬರೆದ ಪತ್ರದಲ್ಲಿ ಸುನಿ ಮೊಬೈಲ್‌ ಫೋನ್‌ ಮತ್ತು ಮೆಮೊರಿ ಕಾರ್ಡ್‌ ಹಸ್ತಾಂತರಿಸಿರುವ ವಿಷಯ ತಿಳಿಸಿದ್ದಾನೆ. ನಿರ್ದಿಷ್ಟವಾಗಿ ಯಾರಿಗೆ ಕೊಟ್ಟಿದ್ದೇನೆ ಎನ್ನುವುದನ್ನು ಬಾಯಿ ಬಿಟ್ಟಿಲ್ಲ. 

ಆದರೆ ಪ್ರತಿ ಸಲ ಮಾಧ್ಯಮದವರು ಎದುರಾದಾಗ ಇನ್ನೂ ಕೆಲವು ಪ್ರಭಾವಿ ವ್ಯಕ್ತಿಗಳು ಬಲೆಗೆ ಬೀಳಲಿದ್ದಾರೆ ಎಂದು ಸುನಿ ಹೇಳುತ್ತಿರುವುದು ಈ ಪ್ರಕರಣ ಇನ್ನಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ದಿಲೀಪ್‌ ಜು. 10ರಂದು ಸೆರೆಯಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. 

ಕೊಚ್ಚಿಯಲ್ಲಿರುವ ಕಾವ್ಯಾ ಮಾಲಕತ್ವದ ಲಕ್ಷ್ಯಾ ಬೂಟಿಕ್‌‌ಗೆ ಪಲ್ಸರ್‌ ಸುನಿ ಭೇಟಿ ನೀಡಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಸಿಕ್ಕಿದೆ. ಲಕ್ಷ್ಯಾದಲ್ಲಿ ಮೆಮೊರಿ ಕಾರ್ಡ್‌ ಹಸ್ತಾಂತರಿಸಿದ್ದೇನೆ ಎಂದು ಸುನಿ ಹೇಳಿದ್ದ. ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಕಾವ್ಯಾ ಮಾಧವನ್‌ರನ್ನು ಪ್ರಶ್ನಿಸಲಾಗಿದೆ ಎನ್ನಲಾಗಿದೆ. 

ಆದರೆ ವಿಚಾರಣೆ ವೇಳೆ ಸುನಿ ಯಾರೆಂದು ನನಗೆ ಗೊತ್ತಿಲ್ಲ ಮತ್ತು ಅವನು ಲಕ್ಷ್ಯಾಕ್ಕೆ ಭೇಟಿ ನೀಡಿರುವ ಸಂಗತಿಯೂ ಗೊತ್ತಿಲ್ಲ ಎಂದು ಕಾವ್ಯಾ ಹೇಳಿದ್ದಾರೆ. 

ನಟಿಯ ಅಪಹರಣದ ಸಂಚು ಹಾಗೂ ಕೊಟೇಶನ್‌ ಇತ್ಯಾದಿ ವಿಷಯ ಗಳೆಲ್ಲ ನನಗೆ ತಿಳಿದಿಲ್ಲ. ಇಡೀ ಪ್ರಕರಣ ದಲ್ಲಿ ನಾನು ಯಾವುದೇ ಪಾತ್ರ ವಹಿಸಿಲ್ಲ ಎಂದು ಕಾವ್ಯಾ ತನಿಖಾ ತಂಡಕ್ಕೆ ಹೇಳಿದ್ದಾರೆ.

ಟಾಪ್ ನ್ಯೂಸ್

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.