ತ್ಯಾಜ್ಯ ವಿಲೇವಾರಿಗೊಳಿಸಿ ಮಾದರಿಯಾದರು
ಮಣಿ ಮುಂಡ ಬ್ರದರ್ಸ್ ಕಾರ್ಯಕರ್ತರ ಕಾಳಜಿ
Team Udayavani, Jun 25, 2019, 5:04 AM IST
ಉಪ್ಪಳ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಉಪ್ಪಳ ರೈಲ್ವೇ ಸ್ಟೇಶನ್ ಪರಿಸರದ ವಿದ್ಯುತ್ ಸಬ್‌ಸ್ಟೇಶನ್ ಪಕ್ಕದಲ್ಲಿ ಶೇಖರಣೆಯಾದ ತ್ಯಾಜ್ಯವನ್ನು ಉಪ್ಪಳ ಮಣಿಮುಂಡ ಬ್ರದರ್ಸ್‌ನ ಕಾರ್ಯಕರ್ತರು ಪರಿಶ್ರಮದಿಂದ ಶ್ರಮದಾನದ ಮೂಲಕ ವಿಲೇವಾರಿಗೊಳಿಸಿ ಇತರರಿಗೆ ಮಾದರಿಯಾದರು.
ಈ ಪರಿಸರದಲ್ಲಿ ನೀರು ಹರಿದು ಹೋಗಲು ಒಂದು ಚರಂಡಿಯನ್ನು ನಿರ್ಮಿಸಲಾಗಿದ್ದು ಬೇಸಿಗೆ ಕಾಲದಲ್ಲಿ ಈ ಚರಂಡಿಯಲ್ಲಿ ಪರಿಸರವಾಸಿಗಳು ಹಾಗು ದಾರಿ ಹೋಕರು ಮನೆಗಳ ತ್ಯಾಜ್ಯಗಳನ್ನು ಇಲ್ಲಿ ಬಿಸಾಡುವುದು ಮಾಮೂಲಿಯಾಗಿದೆ.
ಇದರಲ್ಲಿ ಮಕ್ಕಳ ಪ್ಯಾಂಪರ್ಸ್ ಅತಿ ಹೆಚ್ಚಿನ ಮಟ್ಟದಲ್ಲಿ ಶೇಖರಣೆಯಾಗಿದ್ದು ಈ ಬಗ್ಗೆ ಸ್ಥಳೀಯರು ಹಲವಾರು ಸಲ ಮಂಗಲ್ಪಾಡಿ ಪಂಚಾಯತ್‌ಅಧಿಕೃತರಲ್ಲಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ತಮ್ಮ ಅಳಲನ್ನು ತೋಡಿಕೊಂಡರೂ ಯಾರು ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ ಊರವರು ಹೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಮನಿಮುಂಡ ಬ್ರದರ್ಸ್‌ನ ನೇತೃತ್ವದಲ್ಲಿ ಈ ಪರಿಸರದ ಶುಚೀಕರಣ ನಡೆದಿದೆ. ಚರಂಡಿಯಲ್ಲಿ ತ್ಯಾಜ್ಯದಿಂದ ಸ್ಥಗಿತ ಗೊಂಡಿದ್ದ ಮಳೆ ನೀರು ಸೂಕ್ತವಾದ ರೀತಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮನಿಮುಂಡ ಬ್ರದರ್ಸ್ ಕಾರ್ಯಕರ್ತರಾದ ಜಫರುಲ್ಲಾ, ಮೊಹಮ್ಮದ್ ತಬ್ರಿಸ್, ಮುದಸ್ಸರ್ ನಜರ್, ಮುಸ್ತಾಕ್ ಮೊದಲಾದವರು ನೇತೃತ್ವವನ್ನು ನೀಡಿದರು.
ಪಂಚಾಯತಿಗೆ ಸವಾಲೊಡ್ಡಿ ಇತರರಿಗೆ ಮಾದರಿಯಾದ ಶ್ರಮದಾನವನ್ನು ವೀಕ್ಷಿಸಲು ಸ್ಥಳೀಯ ವಾರ್ಡ್ ಸದಸ್ಯರಾದ ಜೀನತ್ ಸಕರಿಯಾ ಹಾಗು ಸುಜಾತ ಶೆಟ್ಟಿ ಆಗಮಿಸಿದ್ದು ವಿಶೇಷವಾಗಿತ್ತೆಂದು ಸ್ಥಳೀಯರು ತಿಳಿಸಿದರು.
ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆ
ತ್ಯಾಜ್ಯಗಳು ರಸ್ತೆಗಳ ಮೇಲ್ಭಾಗಕ್ಕೆ ಬಂದು ಅದನ್ನು ಮೆಟ್ಟಿಕೊಂಡೇ ನಡೆದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಮಳೆಗಾಲಕ್ಕೆ ಮುನ್ನವೇ ಎಚ್ಚೆತ್ತುಗೊಳ್ಳಬೇಕಾಗಿದ್ದ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಾಢವಾಗಿ ನಿದ್ರೆಗೆ ಜಾರಿರುವುದು ಇವರ ಅಸಡ್ಡೆಯನ್ನು ಎತ್ತಿ ತೋರಿಸುತ್ತಿರುವುದಾಗಿ ಊರವರು ಆಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.