ಮತಯಂತ್ರಗಳ ವಿತರಣೆ: ಚುನಾವಣ ಸಾಮಗ್ರಿ ಮತಗಟ್ಟೆಗೆ
Team Udayavani, Apr 23, 2019, 6:00 AM IST
ಕಾಸರಗೋಡು: ದೀರ್ಘ ಚುನಾವಣ ಪ್ರಚಾರಕ್ಕೆ ಎ.21 ರಂದು ಸಂಜೆ 6 ಗಂಟೆಗೆ ವೈವಿಧ್ಯಮಯ ಅಬ್ಬರದ ತೆರೆ ಬಿದ್ದಿದ್ದು, ಎ.23 ರಂದು ಮಂಗಳವಾರ ನಡೆಯುವ ಮತದಾನಕ್ಕೆ ಚುನಾವಣ ಸಾಮಗ್ರಿಗಳನ್ನು ಆಯಾಯ ಮತಗಟ್ಟೆಗೆ ಸಾಗಿಸಲಾಯಿತು.
ಕಾಸರಗೋಡು ಸರಕಾರಿ ಕಾಲೇಜು ಮತ್ತು ಪಡನ್ನಕ್ಕಾಡ್ ನೆಹರೂ ಕಲಾ ವಿಜ್ಞಾನ ಕಾಲೇಜುಗಳಲ್ಲಿ ಸಾಮಗ್ರಿಗಳ ವಿತರಣೆ ನಡೆಯಿತು. ಬೆಳಗ್ಗೆ 8 ರಿಂದ ಚುನಾವಣ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕೇಂದ್ರಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸಜ್ಜುಗೊಳಿಸಿದ್ದ ಕೌಂಟರ್‌ಗಳ ಮೂಲಕ ಆಯಾಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ ವಿತರಣೆ ಆರಂಭಿಸಲಾಗಿತ್ತು. ಆಯಾಯ ಮತಗಟ್ಟೆಗಳಿಗೆ ನೀಡುವ ಸಿಂಗಲ್ ಪೋಸ್ಟ್ ಇಲೆಕ್ಟ್ರಾನಿಕ್‌ಮತಯಂತ್ರಗಳನ್ನು ಕಾಸರಗೋಡು ಸರಕಾರಿ ಕಾಲೇಜು ಮತ್ತು ಪಡನ್ನಕ್ಕಾಡ್‌ನ ನೆಹರೂ ಆರ್ಟ್ಸ್ ಆ್ಯಂಡ್ ಸಯನ್ಸ್ ಕಾಲೇಜಿನ ಭದ್ರ ಕೊಠಡಿ ಯಿಂದ ಸಂಬಂಧಿತ ಮತಗಟ್ಟೆಯ ಕರ್ತವ್ಯದಲ್ಲಿರುವ ಸಿಬಂದಿಪಡೆದುಕೊಂಡರು. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಅಧಿಕ ಮತಯಂತ್ರಗಳನ್ನು ನೀಡಲಾಗಿದೆ. ಅಗತ್ಯ ಬಂದಲ್ಲಿ ಇವುಗಳನ್ನು ಬಳಸಲಾಗುವುದು. ಚುನಾವಣಾ ಸಾಮಗ್ರಿಗಳನ್ನು ಕೊಂಡೊಯ್ಯಲು ಹಾಗೂ ಅಧಿಕಾರಿಗಳ ಸಹಿತ ಸಿಬಂದಿಗಳನ್ನು ಆಯಾಯ ಮತಗಟ್ಟೆಗಳಿಗೆ ತಲುಪಿಸಲು ಬಸ್ ಮೊದಲಾದ ವಾಹನಗಳನ್ನು ಬಳಸಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರವೀಶ ತಂತ್ರಿ ಕುಂಟಾರು, ಸಿಪಿಎಂನ ಕೆ.ಪಿ. ಸತೀಶ್ಚಂದ್ರನ್, ಕಾಂಗ್ರೆಸ್‌ನ ರಾಜ್‌ಮೋಹನ್ ಉಣ್ಣಿತ್ತಾನ್, ಬಿಎಸ್‌ಪಿಯ ನ್ಯಾಯವಾದಿ ಬಶೀರ್ ಆಲಡಿ, ಸ್ವತಂತ್ರ ಅಭ್ಯರ್ಥಿಗಳಾಗಿ ಗೋವಿಂದನ್ ಬಿ. ಆಲಿನ್‌ತಾಳೆ, ಕೆ. ನರೇಂದ್ರನ್, ಆರ್.ಕೆ. ರಣದಿವಾನ್, ರವೀಶ್ ಬಂದಡ್ಕ, ಸಜಿ ಸ್ಪರ್ಧಾ ಕಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.