ವೈದ್ಯ ಡಾ| ಕೃಷ್ಣಮೂರ್ತಿ ಕೇಸ್: ಆರೋಪಿಗಳಿಗೆ ರಾಜಕೀಯ ಆಶ್ರಯ; ಪ್ರಕರಣವನ್ನೇ ತಿರುಚುವ ಯತ್ನ?
Team Udayavani, Nov 18, 2022, 8:00 AM IST
ಕುಂಬಳೆ: ಬದಿಯಡ್ಕ ದಂತ ವೈದ್ಯ ಡಾ| ಕೃಷ್ಣಮೂರ್ತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರಾದರೂ ಆರೋಪಿಗಳಿಗೆ ರಾಜಕೀಯ ಬೆಂಬಲ ಇದ್ದು, ಪ್ರಕರಣವನ್ನೇ ಬದಲಾಯಿಸುವ ತಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಶಂಕೆ ಸ್ಥಳೀಯರಲ್ಲಿ ಬಲವಾಗಿ ಮೂಡಿದೆ.
ಪ್ರಸಿದ್ಧ ಮನೆತನದ ವೈದ್ಯರು ಅಜಾತ ಶತ್ರುವಾಗಿದ್ದು ಅವರ ಸಾವು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅನಿಸಿಕೆ. ಮಹಿಳೆಯನ್ನು ಮುಂದಿಟ್ಟುಕೊಂಡು ಲ್ಯಾಂಡ್ ಮಾಫಿಯಾ ತಂಡವು ವೈದ್ಯರನ್ನು ಬ್ಲ್ಯಾಕ್‌ವೆುàಲ್ ಮಾಡಿ ಬೆದರಿಸಿದ ಕಾರಣ ಭಯದಿಂದ ಆತ್ಮಹತ್ಯೆಗೆ ಶರಣಾದರೇ ಅಥವಾ ಬಾಡಿಗೆ ಹಂತಕರಿಂದ ಕೊಲೆ ಗೀಡಾಗಿರುವರೇ ಎಂಬ ಶಂಕೆ ಅವರದು.
ಇಂದು ಪ್ರತಿಭಟನೆ :
ನ. 18ರಂದು ಬೆಳಗ್ಗೆ 10 ಗಂಟೆಗೆ ವಿಶ್ವಹಿಂದೂ ಪರಿಷತ್, ಬಜರಂಗ ದಳ, ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಪೈವಳಿಕೆ ಖಂಡ ಸಮಿತಿ ವತಿಯಿಂದ ಪೈವಳಿಕೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸಂಘಪರಿವಾರದ ನಾಯಕರು ಭಾಗವಹಿಸಲಿದ್ದಾರೆ.
ಇಂದು ಮೌನ ಮೆರವಣಿಗೆ:
ಮಂಗಳೂರು: ಬದಿಯಡ್ಕದ ಹಿರಿಯ ದಂತವೈದ್ಯ ಡಾ| ಕೃಷ್ಣಮೂರ್ತಿ ಅವರ ಅನುಮಾನಾಸ್ಪದ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ಮಂಗಳೂರು ಹವ್ಯಕ ಸಭಾ, ದಕ್ಷಿಣ ಕನ್ನಡ-ಕಾಸರಗೋಡು ಹವ್ಯಕ ಮಹಾಸಭಾ ಮತ್ತು ಮಂಗಳೂರು ಹವ್ಯಕ ಮಂಡಲದ ವತಿಯಿಂದ ನ. 18ರಂದು ಸಂಜೆ 6 ಗಂಟೆಗೆ ನಗರದ ಸರ್ಕೀಟ್ ಹೌಸ್ ಮುಂಭಾಗ ಮೌನ ಮೆರವಣಿಗೆ ಮತ್ತು ಹಣತೆ ಬೆಳಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹವ್ಯಕ ಸಭಾದ ಸುಮಾರು 250 ಮಂದಿ ಸದಸ್ಯರು ಭಾಗವಹಿಸಲಿದ್ದು, ಇದೊಂದು ಶಾಂತಿಯುತ ಮೆರವಣಿಗೆ. ಸಾವಿನ ರಹಸ್ಯದ ಹಿಂದೆ ಇರುವ ಹುನ್ನಾರವನ್ನು ಬಯಲಿಗೆ ತರಲು ಮತ್ತು ದುಷ್ಕರ್ಮಿಗಳಿಗೆ ಕಠಿನ ಶಿಕ್ಷೆ ವಿಧಿಸಲು ಹಕ್ಕೊತ್ತಾಯ ಮಂಡಿಸಲು ಮೆರವಣಿಗೆ ಆಯೋಜಿಸಲಾಗಿದೆ ಎಂದು ಹವ್ಯಕಸಭಾ ಮಂಗಳೂರು ಅಧ್ಯಕ್ಷ ಡಾ| ರಾಜೇಂದ್ರ ಪ್ರಸಾದ್, ಹವ್ಯಕ ಮಂಡಲದ ಅಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ದ.ಕ. ಹಾಗೂ ಕಾಸರಗೋಡು ಹವ್ಯಕ ಮಹಾಸಭಾ ಅಧ್ಯಕ್ಷ ನಿಡುಗಳ ಕೃಷ್ಣ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.