“ಡಾ| ಅಂಬೇಡ್ಕರ್ ಚಿಂತನೆ ಒಂದು ಸಮುದಾಯಕ್ಕೆ ಸೀಮಿತವಲ್ಲ ‘
Team Udayavani, May 19, 2019, 6:06 AM IST
ಮಡಿಕೇರಿ :ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ಏಳಿಗೆಗಾಗಿ ಶ್ರಮಿಸದೆ ಪ್ರತಿಯೊಬ್ಬರ ಪ್ರಗತಿಗಾಗಿ ಚಿಂತನೆ ನಡೆಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಇಂದು ದೇಶದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಪ್ರತಿಯೊಬ್ಬರು ಹೊಂದಿದ್ದಾರೆ ಎಂದು ಮೈಸೂರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ|ಬಿ.ಪಿ.ಮಹೇಶ್‌ಚಂದ್ರಗುರು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ, ಪ.ಪಂ ನೌಕರರ ಸಂಘದ ಪುತ್ತೂರು ವಿಭಾಗ, ಮಡಿಕೇರಿ ಘಟಕದ ವತಿಯಿಂದ ನಗರದ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆದ ಡಾ|ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾ ಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ|ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ವರ್ಗಗಳ ಉದ್ಧಾರಕ್ಕಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಮಹಿಳೆಯರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಮಿಸಲಾತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಿದರು. ಅವರು ರಚಿಸಿದ ಸಂವಿಧಾನದ ಬಲದಿಂದಲೇ ಅನೇಕರು ರಾಜಕೀಯವಾಗಿ ಯಶಸ್ಸನ್ನು ಗಳಿಸಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದು ಅಡ್ಜಸ್ಟ್‌ಮೆಂಟ್ ರಾಜಕಾರಣ ನಡೆಯುತ್ತಿದೆ, ಆದರೆ ಡಾ|ಅಂಬೇಡ್ಕರ್ ಅವರು ಶಕ್ತಿ ರಾಜಕಾರಣ ಮಾಡದೆ, ಮುಕ್ತಿ ರಾಜಕಾರಣದ ಮೂಲಕ ಗಮನ ಸೆಳೆದರು ಎಂದು ಡಾ|ಬಿ.ಪಿ.ಮಹೇಶ್‌ಚಂದ್ರಗುರು ಹೇಳಿದರು.
ಮೈಸೂರಿನ ಗಾಂಧಿನಗರದ ಉರಿ ಲಿಂಗ ಪೆದ್ದಿಮಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಡಾ|ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾಜಿಕ ಹಕ್ಕನ್ನು ನೀಡುವ ಮೂಲಕ ಮಹಿಳೆಯರು ಪುರುಷರಂತೆ ಸಮಾ ನರು, ಅವರಿಗೂ ಬದುಕುವ ಹಕ್ಕಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಜಾತಿಯನ್ನು ನಾಶಮಾಡಬೇಕು, ಸರ್ವ ಸಮಾನ ದೇಶವನ್ನು ನೋಡಬೇಕು ಎನ್ನುವ ಗುರಿ ಹೊಂದಿದ್ದರು ಎಂದರು.
ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ದೇವದಾಸ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೇವಾಲಯಗಳ ನಿರ್ಮಾ ಣಕ್ಕಿಂತ ಶಾಲೆಗಳ ನಿರ್ಮಾಣ ಹೆಚ್ಚಾದಾಗ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬಹುದಾಗಿದೆ ಎಂದರು.
ಕ.ರಾ.ರ.ಸಾ ನಿಗಮ, ಪ.ಜಾ, ಪ.ಪಂ. ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ವೆಂಕರವಣಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜೀವನದ ಕುರಿತು ಮಾಹಿತಿ ನೀಡಿದರು. ಅಲ್ಲದೇ ನೌಕರರ ಸಂಘ ಬೆಳೆದು ಬಂದ ರೀತಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಮಟ್ಟದಲ್ಲಿ ಬೆಳ್ಳಿಪದಕ ಪಡೆದ ಪುತ್ತೂರು ಘಟಕದ ಸೀತಾರಾಮ, ಅಪ್ಪು ನಾಯ್ಕ, ಹೆನ್ರಿ ಗಲಾºವೊ, ಡೊಂಬಯ್ಯ, ಸುಳ್ಯ ಘಟಕದ ಸೀನ ನಾಯ್ಕ, ಬಿ.ಸಿ. ರಸ್ತೆ ಘಟಕದ ಶ್ರೀರಾಮ, ಮಡಿಕೇರಿ ಘಟಕದ ಯು.ಸಿ. ಕಾರ್ಯಪ್ಪ, ಮಾರ್ಷಲ್ ರಾಡ್ರಿಗಸ್, ಕೆ.ಪಿ. ದಿನೇಶ, ಸಂತೋಷ್ ಹಾವಿನಾಳ, ಬಾಪೂ ಶಿವಾಯಿಗೋಳ, ಧರ್ಮಸ್ಥಳ ಘಟಕದ ಎಸ್.ವಿ. ಬಸವರಾಜು, ಕಲ್ಲಪ್ಪ ಕಾಂಬ್ಲೆ, ಕೆ.ಆನಂದ, ನಾರಾಯಣ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಪುತ್ತೂರು, ಕ.ರಾ.ರಸಾನಿ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ದೀಪಕ್ ಕುಮಾರ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ರೇವಣ್ಣ, ರಾಜ್ಯ ಉಪಾಧ್ಯಕ್ಷರಾದ ಅಶೋಕ ರಾ. ಭಜಂತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ವೇಣುಗೋಪಾಲ, ಕ.ರಾ.ರ.ಸಾ. ನಿಗಮ, ಪ.ಜಾ, ಪ.ಪಂ. ನೌಕರರ ಸಂಘದ ವಲಯ ಅಧ್ಯಕ್ಷರಾದ ಎಂ. ಸಿದ್ದಪ್ಪ ನೇಗಲಾಲ, ರಾಜ್ಯ ಖಜಾಂಚಿ ಎಂ. ಶಾರದಯ್ಯ, ವಲಯ ಪ್ರಧಾನ ಕಾರ್ಯದರ್ಶಿ ಎಂ.ರವಿಪ್ರಕಾಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಹಾಲೂರು ವೈದ್ಯಧಿಕಾರಿ ಡಾ|ಎಚ್.ಟಿ. ತಿಮ್ಮಯ್ಯ, ಮಡಿಕೇರಿ ತೋಟಗಾರಿಕೆ ಸಹಾಯಕ ನಿರ್ದೇಶಕರು ರಾಮದಾಸ್, ಕರ್ನಾಟಕ ದಲಿತ ಪರಿವರ್ತನ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.