ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ಪರಿಹಾರ ಕ್ರಮ: ಡಾ| ಸಜಿತ್‌ಬಾಬ
Team Udayavani, Mar 14, 2019, 1:00 AM IST
ಕುಂಬಳೆ : ಕಾಸರಗೋಡು ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಕ್ಷಾಮ ತಲೆದೋರಿದ್ದು ಇದರ ಪರಿಹಾರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ಅವರು ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.
ಇದರಂತೆ ಮಂಜೇಶ್ವರ ಮತ್ತು ಕಾಸರಗೋಡು ಬ್ಲಾಕ್‌ಗಳಲ್ಲಿ ಹರಿಯುವ ಹೊಳೆಗಳಾದ ಉಪ್ಪಳ, ಶಿರಿಯ,ಮೊಗ್ರಾಲ್‌ಪುತ್ತೂರು ಮೊದಲಾದೆಡೆಗಳಲ್ಲಿ ಕುಡಿಯುವ ನೀರಿಗೆ ಪಂಪ್ ನಡೆಸುವ ಸ್ಥಳದ 500 ಮೀ.ಪ್ರದೇಶದ ಕೆಳಗೆ ಮತ್ತು ಮೇಲಿನ ಭಾಗದಲ್ಲಿರುವ ಕೃಷಿ ನೀರಾವರಿ ಪಂಪ್‌ಗ್ಳ ವಿದ್ಯುತ್ ಸಂಪರ್ಕವನ್ನು ತತ್‌ಕ್ಷಣ ಬೇರ್ಪಡಿಸಲು ಸಲು ಜಿಲ್ಲಾಧಿಕಾರಿಯವರು ಆಯಾ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿರುವರು.
ಉಚಿತ ವಿದ್ಯುತ್ ದುರುಪಯೋಗ
ರಾಜ್ಯ ಸರಕಾರ ಕೃಷಿಗೆ ನೀಡಿದ ಉಚಿತ ವಿದ್ಯುತ್ ಯೋಜನೆಯಂತೆ ಹೆಚ್ಚಿನ ಕೃಷಿಕರು ಲಂಗುಲಗಾಮಿಲ್ಲದೆ ಇದರ ದುರುಪಯೋಗ ನಡೆಸುತ್ತಿರುವುದಾಗಿ ಜಿಲ್ಲಾಧಿಕಾರಿ ಆರೋಪಿಸಿದ್ದಾರೆ.ಹೊಳೆಗಳಲ್ಲಿ ಕಂದಾಯ ಇಲಾಖೆಯ ಪರವಾನಿಗೆ ಪಡೆಯದೆ ಬಾವಿ ತೋಡಿ ಇದರೊಳಗೆ ಕಾಂಕೀÅಟ್ ರಿಂಗ್ ಹಾಕಿ ಕಾಣದಂತೆ ಮುಚ್ಚಿ ತೋಟಗಳಿಗೆ ಅನಿಯಂತ್ರಿತವಾಗಿ ನೀರು ಬಳಸುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ನೀರಿನ ಕ್ಷಾಮ ತಲೆದೋರುತ್ತಿದೆ.
.ಒಂದು ಕಂಗಿಗೆ ಕೇವಲ 80 ಲೀಟರ್ ನೀರು ಮೂರು ದಿನಗಳ ತನಕ ಸಾಕಾಗುತ್ತಿದ್ದು ಕೆಲವು ಕೃಷಿಕರು ಹೊಳೆಯ ನೀರನ್ನು ನಿತ್ಯ ರಾತ್ರಿ ಹಗಲೆನ್ನದೆ ತೋಟಕ್ಕೆ ಹರಿಯಬಿಟ್ಟು ನೀರಿನ ಕ್ಷಾಮಕ್ಕೆ ಕಾರಣವಾಗುತ್ತಿದೆ.
ನೀರಿನ ಬರಕ್ಕೆ ಕಾರಣವಾಗಿದೆ.ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕ್ಷಾಮ ತೀವ್ರವಾಗಲಿದ್ದು ಅನಗತ್ಯ ನೀರು ಹರಿಸಿ ಪೋಲು ಮಾಡುವವರ ವಿರದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವೆಂಬುದಾಗಿ ಜಿಲ್ಲಾಧಿಕಾರಿ ಯವರು ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿಯವರು ಉಪ್ಪಳ,ಶಿರಿಯ,ಮೊಗ್ರಾಲ್ ಹೊಳೆಗಳಿಗೆ ಭೇಟಿ ನೀಡಿ ಅನಧಿಕೃತ ನೀರಾವರಿ ಪಂಪ್ ಶೆಡ್ಡ್ಗಳನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.