ಜಿಲ್ಲಾಧಿಕಾರಿಗಳ ಇಂಟರ್ನ್ಸ್ ಗಳಿಗೆ ಉಸ್ತುವಾರಿ ಹೊಣೆ
Team Udayavani, Jan 16, 2019, 6:25 AM IST
ಕಾಸರಗೋಡು : ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ನೂತನ ತಂತ್ರಜ್ಞಾನ ಬಳಕೆಯೊಂದಿಗೆ ವಿವಿಧ ಕ್ರಿಯಾ ಯೋಜನೆಗಳ ಜಾರಿಗಾಗಿ ಸಿದ್ಧತೆ ನಡೆಯುತ್ತಿದೆ. ಆಧುನಿಕ ದೃಷ್ಟಿಯೊಂದಿಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ಈ ಸಂಬಂಧ ಇಂಟರ್ನ್ಶಿಪ್ ಪ್ರೋಗ್ರಾಂ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಜಾರಿಗೊಳ್ಳಲಿದೆ. ಸಿವಿಲ್ ಸರ್ವಿಸ್‌ನಲ್ಲಿ ನೇಮಕಾತಿ ಪಡೆಯಲು ಹಂಬಲಿಸುತ್ತಿರುವ ಉದ್ಯೋಗಾರ್ಥಿಗಳಿಂದ ಈ ಸಂಬಂಧ ಅರ್ಜಿ ಕೋರಿ, ಅಭಿರುಚಿ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಇಂಟರ್ನ್ಸ್ಗಳನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಅಕಾಡೆಮಿಕ್ ಅರ್ಹತೆಯುಳ್ಳ ಅವರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುವ, ಜಿಲ್ಲೆಗೆ ಮತ್ತು ಜಿಲ್ಲಾಡಳಿತಕ್ಕೆೆ ಪ್ರಯೋಜನಕಾರಿ ಬಳಕೆ ಈ ಮೂಲಕ ಸಾಧ್ಯವಾಗಿಸುವುದು ಇಲ್ಲಿನ ಗುರಿ.
ಕಾಸರಗೋಡು ನಗರ ಪ್ರವಾಸೋದ್ಯಮ, ಜಿಲ್ಲೆಯ ಹಸುರೀಕರಣ, ಪೆರಿಯ ಏರ್ ಸ್ಟ್ರಿಪ್ ಯೋಜನೆ, ವಾಹನ ಹರಾಜು, ನೀರಿನ ಕೊರತೆ ಪರಿಹಾರ, ಜಿಲ್ಲೆಯ ಕ್ರೀಡಾವಲಯದ ಗುಣಮಟ್ಟ ಹೆಚ್ಚಳ, ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಒದಗಿಸುವ ‘ಮಧುರಂ ಪ್ರಭಾತಂ’ ಯೋಜನೆ ಇತ್ಯಾದಿ ಕಾರ್ಯಕ್ರಮಗಳ ಹೊಣೆಯನ್ನು ಈ ಇಂಟರ್ನ್ಸ್ ಗಳಿಗೆ ನೀಡಲಾಗಿದೆ.
ವಿವಿಧ ಯೋಜನೆಗಳ ಹೊಣೆ : ಆಯಾ ಗ್ರಾಮ ಪಂಚಾಯತ್‌ನ ತಲಾ ಎರಡು ಸರಕಾರಿ ಶಾಲೆಗಳಂತೆ, ಜಿಲ್ಲೆಯ 5 ಗ್ರಾಮ ಪಂಚಾಯತ್‌ಗಳಿಂದ ಹತ್ತು ಸರಕಾರಿ ಶಾಲೆಗಳಲ್ಲಿ ಕಲಿಕೆ ನಡೆಸುವ ಹಿಂದುಳಿದ ಜನಾಂಗದ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಒದಗಿಸಿ ಕೊಡುವ ‘ಮಧುರಂ ಪ್ರಭಾತಂ’ ಯೋಜನೆಯ ಹೊಣೆ ಪಿ. ಶ್ರೀಖಾ ಅವರಿಗೆ ನೀಡಲಾಗಿದೆ.
ಕಾಸರಗೋಡು ನಗರ ಮತ್ತು ಆಸುಪಾಸಿನ ಪ್ರದೇಶಗಳ ಅಳವಡಿಕೆಯೊಂದಿಗೆ ಪ್ರವಾಸೋದ್ಯಮ ಸರ್ಕ್ನೂಟ್ ಅಭಿವೃದ್ಧಿ, ನಗರದ ರಸ್ತೆಗಳ ಅಭಿವೃದ್ಧಿ ಇತ್ಯಾದಿಗಳ ಹೊಣೆಯನ್ನು ಬಿ. ಅಮೃತಾ ಅವರಿಗೆ ನೀಡಲಾಗಿದೆ.
ಬೇಕಲ ಪ್ರವಾಸೋದ್ಯಮ ಯೋಜನೆಯಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿ, ವಸತಿ ಸೌಲಭ್ಯ ವಿಸ್ತಾರಗೊಳಿಸುವಿಕೆ, ನೂತನ ಪ್ರವಾಸೋದ್ಯಮ ವಲಯಗಳ ಶೋಧನೆ ಇತ್ಯಾದಿ ಹೊಣೆಯನ್ನು ಕೆ. ಮನೀಷಾ ಅವರಿಗೆ ಒದಗಿಸಲಾಗಿದೆ.
ಮಂಜೇಶ್ವರ ತಾಲೂಕಿನಲ್ಲಿ 15 ಸಾವಿರ ಬಿದಿರು ಸಸಿ ನೆಡುವ, ನೀರು ಸಂರಕ್ಷಣೆ ಯೋಜನೆಗಳು, ಮಣ್ಣು ಸಂರಕ್ಷಣೆ ಯೋಜನೆಗಳು, ಬಿದಿರು ಕೇಂದ್ರಿತ ಉದ್ಯಮ ಸ್ಥಾಪನೆ ಇತ್ಯಾದಿಗಳ ಹೊಣೆ ಕೆ. ಭಾಗ್ಯಾ ಅವರಿಗೆ ನೀಡಲಾಗಿದೆ.
ಪೆರಿಯ ಏರ್‌ಸ್ಟ್ರಿಪ್ ಯೋಜನೆಯ ಹೊಣೆ ಪಿ. ಅರ್ಜುನನ್ ಅವರಿಗೆ, ಜಿಲ್ಲೆಯ ಕ್ರೀಡಾ ವಲಯದ ಅಭಿವೃದ್ಧಿಗೆ ಅವಕಾಶ ಸೃಷ್ಟಿಯ ಹೊಣೆ ಆತಿಷ್ ಎಂ. ನಾಯರ್ ಅವರಿಗೆ ನೀಡಲಾಗಿದೆ.
ರಾಜ್ಯದ ಕ್ರೀಡಾ ವಲಯದ ಅಭಿವೃದ್ಧಿ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಸೂಕ್ತ ತರಬೇತಿ ಒದಗಿಸಿ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಮಾಡುವ, ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳನ್ನು ಕ್ರೀಡಾ ವಲಯದಲ್ಲಿ ಹೆಚ್ಚುವರಿ ತೊಡಗಿಸಿಕೊಂಡು ಗುಣಮಟ್ಟ ಹೆಚ್ಚಿಸುವ ಯೋಜನೆ ಈ ಮೂಲಕ ಜಾರಿಗೆ ಬರಲಿದೆ.
ಯೋಜನೆಗೆ ನಿಯೋಜನೆ
ಆಯ್ಕೆಗೊಂಡಿರುವ ಇಂಟರ್ನ್ಸ್ ಗಳಿಗೆ ವಿವಿಧ ಯೋಜನೆಗಳ ಉಸ್ತುವಾರಿ ಹೊಣೆ ವಹಿಸಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಪಿ. ಅರ್ಜುನನ್, ಬಿ. ಅಮೃತಾ , ಬಿ.ಎ. ಮನಶಾÏಸ್ತ್ರ ಪದವೀಧರ ಆತಿಷ್ ಎಂ. ನಾಯರ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ಪದವೀಧರೆ ಕೆ. ಭಾಗ್ಯಾ, ಎಂ.ಎಸ್.ಸಿ. ಸ್ಟಾಟಿಸ್ಟಿಕ್ಸ್ ಪದವೀಧರೆ ಕೆ.ಎಂ. ಮನಿಷಾ, ಎಂ.ಬಿ.ಎ. ಪದವೀಧರೆ ಪಿ. ಶ್ರೀಖಾ ಜಿಲ್ಲಾಧಿಕಾರಿಗಳ ಇಂಟರ್ನ್ಸ್ ಯೋಜನೆಯಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.