ಭಕ್ತಿಭಾವದಿಂದ ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆ
Team Udayavani, Mar 14, 2019, 1:00 AM IST
ಕಾಸರಗೋಡು: ನಗರದ ಹೃದಯ ಭಾಗದಲ್ಲಿ ರಾರಾಜಿಸುತ್ತಿರುವ ಇತಿಹಾಸ ಪ್ರಸಿದ್ಧ ನೂತನ ಶಿಲಾಮಯ ದೇಗುಲದಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪರುಷ ಮತ್ತು ಈಶಾನ ಎಂಬ ಪಂಚಮುಖಗಳಿಂದ ಶೋಭಿಸುವ ಸಾಕ್ಷಾತ್ ಪರಮ ಶಿವನಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃಪ್ರತಿಷ್ಠೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಭಕ್ತಿ, ಶ್ರದ್ಧೆ, ಸಡಗರ ಮತ್ತು ಸಂಭ್ರಮದಿಂದ ಬುಧವಾರ ಬೆಳಗ್ಗೆ ನಡೆಯಿತು.
ಕ್ಷೇತ್ರ ತಂತ್ರಿವರ್ಯರಾದ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿಗಳ ದಿವ್ಯ ಸಾನ್ನಿಧ್ಯದಲ್ಲಿ ಮೀನ ಲಗ್ನ ರೋಹಿಣಿ ನಕ್ಷತ್ರ ಶುಭ ಮುಹೂರ್ತದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ ಮೊದಲಾದ ವೈದಿಕ ಕ್ರಮಗಳು ಜರಗಿದವು. ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆಯನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದು, ಸಕಲ ವೈದಿಕ ವಿಧಿವಿಧಾನಗಳನ್ನು ವೀಕ್ಷಿಸಿ ಸಾರ್ಥಕತೆಯ ಮನೋಭಾವವನ್ನು ತುಂಬಿಕೊಂಡರು. ಸುಮಾರು ಎರಡು ವರ್ಷಗಳಿಂದ ಬಾಲಾಲಯದಲ್ಲಿದ್ದ ಬಿಂಬಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಜೆ ನಿತ್ಯ ನೈಮಿತ್ತಿಕೆಗಳ ಪುನರ್ ನಿರ್ಣಯ, ಅನುಷ್ಠಾನ ಪ್ರಾರ್ಥನೆ, ಕವಾಟ ಬಂಧನ, ಮಂಡಲ ಪೂಜೆ, ದೊಡ್ಡ ಬಲಿಕಲ್ಲು ಅಧಿವಾಸ ಮೊದಲಾದವು ನಡೆದವು.
ಇದೇ ಸಂದರ್ಭದಲ್ಲಿ ಬೆಳಗ್ಗೆ ಶ್ರೀ ವರದರಾಜ ವೆಂಕಟರಮಣ ಭಜನ ಸಂಘ ಕಾಸರಗೋಡು, ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡು, ಭಜನ ಸಾಮ್ರಾಟ್ ಕೊಲ್ಯ ಮೊದಲಾದ ತಂಡಗಳಿಂದ ಭಜನೆ ಸಂಕೀರ್ತನೆ, ಕಯ್ನಾರಿನ ಮಹಿಳಾ ಯಕ್ಷಗಾನ ಕೂಟದಿಂದ “ಗಧಾಯುದ್ಧ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಧರ್ಮಸ್ಥಳ ಹನುಮಗಿರಿ ಬಪ್ಪನಾಡು ಮೇಳಗಳ ಸುಪ್ರಸಿದ್ಧ ಕಲಾವಿದರಿಂದ “ಮಹಾಕಲಿ ಮಗಧೇಂದ್ರ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಗರುಡ ದರ್ಶನ: ಭಕ್ತರ ಪುಳಕ
ದೇಗುಲದಲ್ಲಿ ಬುಧವಾರ ಬೆಳಗ್ಗೆ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃಪ್ರತಿಷ್ಠೆಯ ಸಂದರ್ಭದಲ್ಲಿ ಪುನಃಪ್ರತಿಷ್ಠೆ ವೀಕ್ಷಿಸಲೋ ಎಂಬಂತೆ ಗರುಡವೊಂದು ಧ್ವಜಸ್ತಂಭದ ಮೇಲೆ ಕಾಣಿಸಿಕೊಂಡು ಭಕ್ತರಲ್ಲಿ ಪುಳಕ ಸೃಷ್ಟಿಸಿತು. ಗರುಡ ಧ್ವಜಸ್ತಂಭದ ಮೇಲೆ ಕುಳಿತು ಗರುಡ ಭಕ್ತರ ಕಣ್ಣಿಗೆ ಕಾಣಿಸಿಕೊಂಡಾಗ ಭಕ್ತರು ಜಯಕಾರವನ್ನು ಮೊಳಗಿಸಿದರು. ವಿಶೇಷವಾಗಿ ಗರುಡ ಕಾಣಿಸಿಕೊಂಡಾಗ ಭಕ್ತರಲ್ಲಿ ಹೊಸ ಚೈತನ್ಯ ಮೂಡಿದ ಅನುಭವ ಉಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.