ಬಿಜೆಪಿ ನೇತಾರನ ರಿಕ್ಷಾಕ್ಕೆ ಕಿಚ್ಚಿಟ್ಟು ನಾಶ
Team Udayavani, Aug 1, 2017, 6:45 AM IST
ಮುಳ್ಳೇರಿಯಾ: ಬೆಳ್ಳೂರಿನಲ್ಲಿ ಬಿಜೆಪಿ ನೇತಾರನ ಆಟೋರಿಕ್ಷಾಕ್ಕೆ ಕಿಡಿಗೇಡಿಗಳು ಕಿಚ್ಚಿಟ್ಟು ನಾಶಗೊಳಿಸಿದ ಘಟನೆ ನಡೆದಿದೆ.
ಬೆಳ್ಳೂರು ಪಂಚಾಯತ್ ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ, ಪಳ್ಳಪ್ಪಾಡಿ ಬಳಿಯ ಶಾಂತಿಗುರಿ ನಿವಾಸಿ ಗೋಪಾಲ್ ಅವರ ಆಟೋ ರಿಕ್ಷಾಕ್ಕೆ ಕಿಚ್ಚಿಡಲಾಗಿದೆ. ಸೋಮವಾರ ಮುಂಜಾನೆ 4 ಗಂಟೆ ವೇಳೆ ಈ ಕೃತ್ಯ ನಡೆಸಲಾಗಿದೆ.
ಗೋಪಾಲ್ರ ಮನೆಗೆ ತೆರಳುವ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಮನೆಯಿಂದ ಅಲ್ಪ ದೂರದಲ್ಲಿ ಆದಿತ್ಯವಾರ ರಾತ್ರಿ ಆಟೋ ರಿಕ್ಷಾವನ್ನು ನಿಲ್ಲಿಸಲಾಗಿತ್ತು. ಆ ಸ್ಥಳದಿಂದ ಅಲ್ಪ ದೂರದ ಕಡೆಂಗ ಎಂಬಲ್ಲಿವರೆಗೆ ಆಟೋ ರಿಕ್ಷಾವನ್ನು ದೂಡಿಕೊಂಡು ಹೋದ ದುಷ್ಕರ್ಮಿಗಳು ಅಲ್ಲಿ ಕಿಚ್ಚಿಟ್ಟು ನಾಶಗೊಳಿಸಿದ್ದಾರೆ. ಆಟೋ ರಿಕ್ಷಾ ಉರಿಯುತ್ತಿರುವುದನ್ನು ಕಂಡ ಪರಿಸರ ನಿವಾಸಿಗಳು ಗೋಪಾಲ್ರಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಅಟೋ ಪೂರ್ಣವಾಗಿ ಉರಿದು ನಾಶಗೊಂಡಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದರು. ಈ ಹಿಂದೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಗೋಪಾಲ್ರೊಂದಿಗೆ ವ್ಯಕ್ತಿ ಯೋರ್ವನಿಗೆ ದ್ವೇಷವಿತ್ತೆಂದೂ ಇದರ ಮುಂದುವರಿಕೆಯಾಗಿ ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟಿರಬಹುದೆಂದು ಸಂಶಯಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ಸಹಿತ ಇಬ್ಬರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಮಗ್ರ ತನಿಖೆಗೆ ಒತ್ತಾಯ : ಬಿಜೆಪಿ ನೇತಾರ ಗೋಪಾಲ್ ಅವರ ಆಟೋ ರಿಕ್ಷಾಕ್ಕೆ ಕಿಚ್ಚಿಟ್ಟು ನಾಶಗೈದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಸುಧಾಮ ಗೋಸಾಡ, ಪಂಚಾಯತ್ ಸಮಿತಿ ಕಾರ್ಯದರ್ಶಿ ಶ್ರೀಧರ ಎಂ. ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಶಾಂತಿಯುತವಾಗಿರುವ ಬೆಳ್ಳೂರು ಪ್ರದೇಶದಲ್ಲಿ ಇದೀಗ ಆಟೋ ರಿಕ್ಷಾಕ್ಕೆ ಕಿಚ್ಚಿರಿಸಿ ಆ ಮೂಲಕ ವೈಷಮ್ಯದ ಬೀಜ ಬಿತ್ತಲು ಯತ್ನಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.