ಡಿಜಿ ಲಾಕರ್‌ನತ್ತ ಶೈಕ್ಷಣಿಕ ರಂಗ : ಕೇರಳದಲ್ಲಿ ಪ್ರಥಮ ಪ್ರಯೋಗ
Team Udayavani, May 21, 2019, 6:10 AM IST
ವಿದ್ಯಾನಗರ: ಇದು ಡಿಜಿಟಲ್ ಯುಗ. ಪ್ರತಿಯೊಂದು ಕ್ಷೇತ್ರದಲ್ಲೂ ಡಿಜಿಟಲ್ ಸೇವೆ ಲಭ್ಯ. ಡಿಜಿಟಲೀಕರಣದ ಕದಂಬ ಬಾಹು ಎಲ್ಲವನ್ನೂ ಬಾಚಿಕೊಂಡು ಯಾಂತ್ರಿಕ ಯುಗದ ಮಾಯೆಯೊಳಗೆ ದೆ„ನಂದಿನ ಚಟುವಟಿಕೆಗಳು, ಅಗತ್ಯಗಳು ನಡೆಯುವಂತೆ ಮಾಡುತ್ತದೆ. ಅಂತೆಯೇ ಡಿಜಿ ಲಾಕರ್ ವ್ಯವಸ್ಥೆಯೂ ದಿನದಿಂದ ದಿನಕ್ಕೆ ತನ್ನ ಪ್ರಾಧಾನ್ಯವನ್ನು ಹೆಚ್ಚಿಸುತ್ತಾ ಬೆಳೆದುಬರುತ್ತಿದೆ. ಇದಕ್ಕೆ ಪೂರಕವಾಗಿ ಕೇರಳದಲ್ಲಿ ಇನ್ನು ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಡಿಜಿ ಲಾಕರ್‌ನಲ್ಲಿ ಲಭ್ಯವಾಗಲಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆಯ ಪ್ರಮಾಣಪತ್ರ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು ಜುಲೆ„ 15ರಿಂದ ಪ್ರಮಾಣಪತ್ರಗಳು ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ.
ಆಧಾರ್, ಪಾನ್ ಕಾರ್ಡ್ ಸಹಿತ ಅಗತ್ಯದ ದಾಖಲೆಗಳನ್ನು ಸುರಕ್ಷಿತವಾಗಿ ಇ-ದಾಖಲೆಯಾಗಿ ಸಂರಕ್ಷಿಸುವ ಆನ್‌ಲೆ„ನ್ ವ್ಯವಸ್ಥೆಯೇ ಡಿಜಿಟಲ್ ಲಾಕರ್. ಇನ್ನು ಮುಂದೆ ಬೇರೆ ಬೇರೆ ಅಗತ್ಯಗಳಿಗಾಗಿ ಅಧಿಕೃತ ದಾಖಲೆಯಾಗಿ ಡಿಜಿಟಲ್ ಲಾಕರ್‌ನಲ್ಲಿ ಎಸೆಸೆಲ್ಸಿ ಪ್ರಮಾಣಪತ್ರಗಳನ್ನು ಬಳಸಬಹುದು.
ಕಳೆದ ಶೆ„ಕ್ಷಣಿಕ ವರ್ಷದ ಸರ್ಟಿಫಿಕೇಟ್‌ಗಳ ಅಪ್‌ಲೋಡ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಸಿಬಿಎಸ್‌ಇ ಪ್ರಮಾಣ ಪತ್ರಗಳೂ ಡಿಜಿ ಲಾಕರ್‌ನಲ್ಲಿ ಲಭ್ಯವಿವೆ.
ಡಿಜಿಲಾಕರ್ ಖಾತೆ ತೆರೆಯಲು< https://digitallocker.gov.in>ವೆಬ್‌ಸೆ„ಟ್‌ನ ಸೆ„ನ್ ಆಪ್ ಲಿಂಕ್‌ನಲ್ಲಿ ಕ್ಲಿಕ್ ಮಾಡಿ ಮೊಬೆ„ಲ್ ನಂಬರ್ ನೀಡಬೇಕು. ಇದಾದ ಕೂಡಲೇ ಡಿಜಿಲಾಕರ್‌ನಿಂದ ಒನ್ ಟೆ„ಂ ಪಾಸ್‌ವರ್ಡ್ ನಂಬರ್ ಮೊಬೆ„ಲ್‌ಗೆ ಸಂದೇಶ ಲಭಿಸುತ್ತದೆ. ಅದನ್ನು ನೀಡಿದ ಬಳಿಕ ಆದಾರ್ ನಂಬರ್ ನೀಡಬೇಕು. ಎಸೆಸ್ಸೆಲ್ಸಿ ಪ್ರಮಾಣಪತ್ರಕ್ಕಾಗಿ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಬಳಸಿ ಲಾಗ್‌ಇನ್ ಮಾಡಬೇಕು. ಗೆಟ್ ಮೋರ್ ನೌ ಎಂಬ ಬಟನ್ ಕ್ಲಿಕ್ ಮಾಡಿ ಎಜುಕೇಶನ್/ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನ್ ಕೇರಳ/ಕ್ಲಾಸ್ 10 ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್/ರಿಜಿಸ್ಟ್ರಾರ್ ನಂಬರ್/ವರ್ಷದ ಸರಿಯಾದ ಮಾಹಿತಿ ನೀಡಿ ಪ್ರಮಾಣಪತ್ರ ನೋಡಬಹುದು.
ಡಿಜಿಲಾಕರ್ ಮೂಲಕ ಸರ್ಟಿಫಿಕೇಟ್ ಪಡೆಯಲು ಅಸಾಧ್ಯವಾದಲ್ಲಿ ರಾಜ್ಯ ಐಟಿ ಮಿಷನ್‌ನ ಸಿಟಿಜನ್ ಕಾಲ್‌ಸೆಂಟರ್ ನಂಬರ್ 180042511800 (0471), 2115054211509 ಎಂಬೀ ಹೆಲ್ಪ್ ಲೆ„ನ್‌ನ್ನು ಸಂಪರ್ಕಿಸಬಹುದು. ಈ ರೀತಿ ಹತ್ತನೇ ತರಗತಿ ಪರೀಕ್ಷೆಯ ಪ್ರಮಾಣಪತ್ರ ಡಿಜಿಲಾಕರ್‌ನಲ್ಲಿ ಲಭ್ಯಯವಾಗಿಸುವ ಮೊದಲ ರಾಜ್ಯ ಕೇರಳ.
ಸುತ್ತಾಟ ತಪ್ಪಿತು
ಹಿಂದೆ ಎಸೆಸೆಲ್ಸಿ ಪ್ರಮಾಣ ಪತ್ರ ಪಡೆಯಲು ತಿಂಗಳು ಗಟ್ಟಲೆ ಕಾಯಬೇಕಾಗುತ್ತಿತ್ತು. ಮಾತ್ರ ವಲ್ಲದೆ ಅತ್ಯಂತ ಜಾಗ್ರತೆಯಿಂದ ಎಲ್ಲಾ ಅಗತ್ಯಗಳಿಗೂ ಉಪಯೋಗಿಸು ತ್ತಿದ್ದೆವು. ನಕಲು ತೆಗೆಸಿ ಗೆಜೆಟೆಡ್ ಆಫಿಸರ್ ಸಹಿ ಪಡೆದು ಬೇಕಾದಲ್ಲಿ ನೀಡಬೇಕಾಗಿತ್ತು. ಆದುದರಿಂದ ಸುತ್ತಾಟದಿಂದ ಸಮಯ ನಷ್ಟವಾಗುತ್ತಿತ್ತು. ಇಂದು ಆಗುತ್ತಿರುವ ತಾಂತ್ರಿಕ ಅಭಿವೃದ್ಧಿ ಈ ಕಷ್ಟಗಳಿಂದ ಇಂದಿನ ಜನಾಂಗವನ್ನು ರಕ್ಷಿಸುತ್ತಿದೆ.
– ಭಾಸ್ಕರ ನಿವೃತ್ತ ಸರಕಾರಿ ಉದ್ಯೋಗಿ
ಮಹತ್ತರ ಬದಲಾವಣೆ
ಡಿಜಿಟಲ್ ಸರ್ಟಿಫಿಕೇಟ್ ಅತ್ಯಂತ ಉಪಯುಕ್ತ. ಎಲ್ಲ ಕಡೆಗಳಿಗೂ ಕೈಯಲ್ಲಿ ಕಾಗದ ಅಥವಾ ವಿವಿಧ ಕಾರ್ಡ್ ಹಿಡಿದು ಹೋಗಬೇಕಾಗಿಲ್ಲ. ಮೊಬೆ„ಲ್‌ನಲ್ಲಿ ಡಿಜಿಲಾಕ್ ಆ್ಯಪ್ ಇದ್ದರಷ್ಟೇ ಸಾಕು. ಇದೊಂದು ಮಹತ್ತರವಾದ ಸ್ವಾಗತಾರ್ಹ ಬದಲಾವಣೆ.
-ರಿತುಲ್ ಎಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.