ಚುನಾವಣೆ : ಆಹಾರ ಪೂರೈಕೆಯಲ್ಲಿ ಸೈ ಎನಿಸಿಕೊಂಡ ಕುಟುಂಬಶ್ರೀ
ಕಾಸರಗೋಡು ಲೋಕಸಭೆ ಚುನಾವಣೆ: ಮತದಾನದ ಸಂಭ್ರಮ
Team Udayavani, Apr 24, 2019, 6:30 AM IST
ಕಾಸರಗೋಡು: ಲೋಕಸಭೆ ಚುನಾ ವಣೆ ಅಂಗವಾಗಿ ಜಿಲ್ಲೆಯ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬಂದಿಗೆ ಹೊತ್ತು ಹೊತ್ತಿನ ಆಹಾರ ಇತ್ಯಾದಿ ಪೂರೈಕೆ ನಡೆಸಿ ಕುಟುಂಬಶ್ರೀ ಸೈ ಎನಿಸಿಕೊಂಡಿದೆ.
ಕುಡಿಯುವ ನೀರು, ಉಪಾಹಾರ, ಭೋಜನ, ಚಹಾ ಸಹಿತ ಪಾನೀಯಗಳ ವಿತರಣೆ ನಡೆಸುವ ಮೂಲಕ ಕುಟುಂಬಶ್ರೀ ಜಿಲ್ಲಾ ಮಿಷನ್ ಉತ್ತಮ ನಿರ್ವಹಣೆ ಒದಗಿಸಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕೆಲವೆಡೆ ಸಿಬಂದಿಗೆ ಹೊತ್ತುಹೊತ್ತಿನ ಆಹಾರ ವ್ಯವಸ್ಥೆ ಏರುಪೇರಾಗುತ್ತಿದ್ದು, ಕರ್ತವ್ಯಕ್ಕೆ ತೊಡಕಾಗುತ್ತಿತ್ತು. ಇದನ್ನು ಗಮನಿಸಿ ಜಿಲ್ಲಾಧಿ ಕಾರಿ ಡಾ| ಡಿ. ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ, ಅವರ ಆದೇಶದಂತೆ ಕುಟುಂಬಶ್ರೀ ಯೂನಿಟ್‌ಗಳ ಮೂಲಕ ಆಹಾರ ಪೂರೈಕೆ ವ್ಯವಸ್ಥಿತವಾಗಿ ನಡೆದಿದೆ.
ಈ ನಿಟ್ಟಿನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ 200 ರೂ.ನ ಕೂಪನ್ ನೀಡಲಾಗಿತ್ತು. ಬೆಳಗ್ಗೆ 5.30ಕ್ಕೆ ಬೆಡ್ ಕಾಫಿ, 8.30ಕ್ಕೆ ಬೆಳಗ್ಗಿನ ಉಪಾಹಾರ, 11 ಗಂಟೆಗೆ ಚಹಾ ಮತ್ತು ಲಘು ಉಪಾಹಾರ, ಮಧ್ಯಾಹ್ನ ಒಂದು ಗಂಟೆಗೆ ಭೋಜನ, ಮಧ್ಯಾಹ್ನ 3.30ಕ್ಕೆ ಚಹಾ ಹೀಗೆ ಸಿಬಂದಿಗೆ ವಿತರಣೆ ನಡೆಸಲಾಗಿತ್ತು. ಇವರೊಂದಿಗೆ ಮತಗಟ್ಟೆಗಳಿಗೆ ಅಗತ್ಯದ ಸಾಮಗ್ರಿಗಳನ್ನು ತಲಪಿಸುವ ಸಿಬಂದಿಗೂ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಕೆ ನಡೆದಿದೆ.
ಮತಗಟ್ಟೆಗಳಲ್ಲಿ ಚುನಾವಣೆ ಪ್ರಕ್ರಿಯೆ ಗಳು ಪೂರ್ಣಗೊಂಡ ಅನಂತರ ಮತಗಟ್ಟೆ ಮತ್ತು ಆಸುಪಾಸಿನ ಪ್ರದೇಶಗಳನ್ನು ಹರಿತ ಕ್ರಿಯಾ ಸೇನೆ ಸದಸ್ಯರ ನೇತೃತ್ವದಲ್ಲಿ ಶುಚೀಕರಣ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.