ಅಬ್ಬರದ ಪ್ರಚಾರ ಭರಾಟೆ ಅಂತ್ಯ: ಇಂದು ಮತದಾನ
Team Udayavani, Apr 23, 2019, 6:30 AM IST
ಕುಂಬಳೆ: ಹದಿನೇಳನೆಯ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಭರಾಟೆ ರವಿವಾರ ಸಂಜೆ ಅಂತ್ಯ ಗೊಂಡಿತು.
ಚುನಾವಣೆ ಘೋಷಣೆಯಾದ ಬಳಿಕ ಹಳ್ಳಿ, ಗಲ್ಲಿ ಕೇರಿಗಳಲ್ಲಿ ವಾಹನಗಳಿಗೆ ಮೈಕ್ ಕಟ್ಟಿ ಪಕ್ಷದ ಅಭ್ಯರ್ಥಿಗೆ ಮತಯಾಚಿಸುವ ಪ್ರಚಾರ ನಿರಂತರವಾಗಿ ನಡೆಯುತ್ತಿತ್ತು.ಬಹಿರಂಗ ಸಭೆ, ಕಾರ್ನರ್ ಮೀಟಿಂಗ್‌ಗಳು ಕ್ಷೇತ್ರದಾದ್ಯಂತ ನಡೆಯುತ್ತಿತ್ತು.
ಕುಂಬಳೆ, ಉಪ್ಪಳ ಮಂಜೇಶ್ವರ ಹೊಸಂಗಡಿಗಳಲ್ಲಿ ಎಡರಂಗ,ಐಕ್ಯರಂಗ, ಎನ್‌ಡಿ.ಎ ಪಕ್ಷಗಳ ಕಾರ್ಯಕರ್ತರು ಬಹಿರಂಗ ಪ್ರಚಾರದ ಕೊನೆಯ ದಿನದಂದು ಬ್ಯಾಂಡ್ ವಾದ್ಯಮೇಳದೊಂದಿಗೆ ಅಮಿತೋತ್ಸಾಹದಿಂದ ಪಾಲ್ಗೊಂಡರು. ಯುವಕರೇ ಹೆಚ್ಚಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಪಕ್ಷದ ಯೂನಿಫಾರಂ ಮತ್ತು ಟೊಪ್ಪಿ ಧರಿಸಿ, ಪಕ್ಷದ ಧ್ವಜವನ್ನು ಮುಂಡಾಸು ಕಟ್ಟಿ ಸಂಭ್ರಮಿಸಿದರು.ವಾಹನಗಳ ಮೇಲೇರಿ ಭಾರೀಗಾತ್ರದ ಧ್ವಜ ಹಿಡಿದು ಅದನ್ನು ಸಾರ್ವಜನಿಕರತ್ತ ಬೀಸಿ ಜೈಕಾರ ಮೊಳಗಿಸಿ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ಬಹಿರಂಗ ಪ್ರಚಾರದ ಬಳಿಕ ಚುನಾವಣೆ ನಡೆಯುವ ಎ. 23ರಂದು ಬೆಳಗ್ಗಿನ ತನಕ ಮತ ಯಾಚಿಸಲು ಕಾನೂನಿನ ಅಡ್ಡಿ ಇಲ್ಲ.ಈ ದಿನದಲ್ಲಿ ಕಾರ್ಯಕರ್ತರು ಹಗಲು ಹೊತ್ತಿನಲ್ಲಿ ಮತಕ್ಕಾಗಿ ಪ್ರಚಾರ ನಡೆಸಿದರೆ ಇನ್ನು ಕೆಲವರು ಕೆಲವೊಂದು ಕಡೆಗಳಿಗೆ ರಾತ್ರಿ ಕಾಲದಲ್ಲಿ ಕೆಲವು ಕಾಲನಿಗಳಲ್ಲಿ ಮತದಾರರನ್ನು ಗುಪ್ತವಾಗಿ ಭೇಟಿ ನೀಡಿದರು. ತಮ್ಮ ಪಕ್ಷಕ್ಕೆ ಖಂಡಿತಾ ಮತ ದೊರೆಯದೆಂಬವರನ್ನು ಅತ್ತಿ¤ತ್ತ ವಾಲುತ್ತಿರುವ ಕೆಲವರನ್ನು ಕಂಡು ಕೊಂಡು ಇವರಿಗೆ ಕೈಬಿಸಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತಗಳನ್ನು ಗಟ್ಟಿ ಮಾಡಿಸಿಕೊಂಡ ಗುಪ್ತ ಸಂಪರ್ಕವೂ ನಡೆದಿದೆ.
ಒಟ್ಟಿನಲ್ಲಿ ಬಿಸಿಲ ತಾಪಮಾನವನ್ನೂ ಲೆಕ್ಕಿಸದೆ ಕೊನೆಯ ದಿನಗಳಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಕಾಸರಗೋಡು ಲೋಕಸಭಾ ಕೇÒತ್ರದ 683 ಕೇಂದ್ರಗಳಲ್ಲಿ ಒಟ್ಟು 1,317 ಮತಕಟ್ಟೆಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.
ಪ್ರಚಾರ ತಂದ ಕಿರಿಕಿರಿ
ಆದರೆ ಇವರ ಸಂಭ್ರಮಾ ಚರಣೆ ಸಾರ್ವಜನಿಕರಿಗೆ ಕಿರಿಕಿರಿಯಾಯಿತು. ರಾಜ್ಯದ ಕೆಲಕಡೆಗಳಲ್ಲಿ ಪರಸ್ಪರ ಹಲ್ಲೆ ನಡೆದಿದೆ. ವಾಹನಗಳ ಸಂಚಾರಕ್ಕೆ ರಸ್ತೆ ತಡೆ ಉಂಟಾ ಯಿತು. ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಜನರ ಸ್ವಾತಂತ್ರÂಕ್ಕೆ ತಡೆ ಉಂಟು ಮಾಡುವ ಈ ಪ್ರಚಾರ ಕಾರ್ಯಕ್ರಮವನ್ನು ನಿಬìಂಧಿಸಬೇಕೆಂಬ ಅಭಿಪ್ರಾಯ ಹೆಚ್ಚಿನವರಿಂದ ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.