ಎಂಡೋಸಲ್ಫಾನ್‌ ಸಂತ್ರಸ್ತರ ವೈದ್ಯಕೀಯ ಶಿಬಿರಕ್ಕೆ ಮೀನಮೇಷ


Team Udayavani, Mar 14, 2017, 3:01 PM IST

endo.jpg

ಕಾಸರಗೋಡು: ದುರಂತ ಮಯ ಜೀವನ ನಡೆಸುತ್ತಿರುವ ಕಾಸರಗೋಡು ಜಿಲ್ಲೆಯ ಎಂಡೋ ಸಲ್ಫಾನ್‌ ಸಂತ್ರಸ್ತರಿಗಾಗಿ ವೈದ್ಯಕೀಯ ಶಿಬಿರವನ್ನು  ಆಯೋಜಿಸ ಲಾಗುವುದು ಎಂಬ ಘೋಷಣೆ ಮಾಡಿ ವರ್ಷಗಳು ಕಳೆದರೂ ಶಿಬಿರ ಮಾತ್ರ ನಡೆಯದೆ ವಿಳಂಬಗೊಳ್ಳುತ್ತಲೇ ಹೋಗುತ್ತಿದೆ.

ಈ ಮಧ್ಯೆ ಎಂಡೋಸಲ್ಫಾನ್‌ ದುರಂತ ಬಾಧಿತರ ಪುನರ್ವಸತಿಗಿರುವ ಎಂಡೋ ಸಲ್ಫಾನ್‌ ಸೆಲ್‌ ಸಭೆಯು ಮಾ.18ರಂದು ಬೆಳಗ್ಗೆ  10 ಗಂಟೆಗೆ ಕಾಸರಗೋಡು ಕಲೆಕ್ಟರೇಟ್‌ನಲ್ಲಿ  ಜರಗಲಿದೆ. ಮಾರ್ಚ್‌ ತಿಂಗಳಿಗಿಂತ ಮೊದಲು ವೈದ್ಯಕೀಯ ಶಿಬಿರ ನಡೆಸಲು ಮರು ಸ್ಥಾಪನೆಗೊಂಡ ಎಂಡೋ ಸೆಲ್‌ನ ಪ್ರಥಮ ಸಭೆಯಲ್ಲಿ  ನಿರ್ಧರಿಸಲಾಗಿತ್ತು.

ಈಗಾಗಲೇ ಅರ್ಜಿ ಸ್ವೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಸೂಕ್ಷ್ಮ ಪರಿಶೀಲನೆ ನಡೆಸಿ ಎಂಡೋ ಬಾಧಿತರ ಪಟ್ಟಿಯಲ್ಲಿರುವವರನ್ನು  ಸೇರಿದಂತೆ ಒಟ್ಟು  ಏಳು ಸಾವಿರಕ್ಕೂ ಅಧಿಕ ಮಂದಿ ವೈದ್ಯಕೀಯ ಶಿಬಿರಕ್ಕಾಗಿ ಕಾಯುತ್ತಿದ್ದಾರೆ. ಮಾತ್ರವಲ್ಲದೆ ಸಂತ್ರಸ್ತರಲ್ಲಿ  ಕೆಲವರಂತೂ ಅಕ್ಷರಶಃ ನರಕಯಾತನೆ ಪಡುತ್ತಿದ್ದಾರೆ. ಆದರೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದಿರುವುದು ಎಂಡೋ ವಲಯವನ್ನು  ಮಾತ್ರವಲ್ಲ  ಸಾರ್ವಜನಿಕರನ್ನೂ ರೊಚ್ಚಿಗೇಳುವಂತೆ ಮಾಡಿದೆ.

ಈ ಮಧ್ಯೆ ಪರೀûಾ ಸಮಯ ವಾದ್ದರಿಂದ ಶಾಲೆಗಳನ್ನು ಶಿಬಿರಕ್ಕಾಗಿ ಬಿಟ್ಟುಕೊಡುವುದಿಲ್ಲ  ಎಂಬ ನೆಪ ಒಡ್ಡಲಾಗಿದೆ. ಈ ಬಗ್ಗೆ  ಶಿಬಿರದ ದಿನಾಂಕ ನಿಗದಿಪಡಿಸುವಾಗ ಯೋಚಿಸಿ ರಲಿಲ್ಲ  ಎಂದು ಸಚಿವರು ಮತ್ತು  ಸಂಬಂಧಪಟ್ಟ ಅಧಿಕಾರಿಗಳು ಸಮಜಾ ಯಿಷಿ ನೀಡಿದ್ದಾರೆ. 

ಮಾ.18ರಂದು ಸಭೆ ನಡೆಯುವುದಕ್ಕಿಂತ ಮೊದಲು ವೈದ್ಯಕೀಯ ಶಿಬಿರದ ದಿನಾಂಕ ಹಾಗೂ ಸ್ಥಳ ಘೋಷಿಸಲು ಶಾಲೆಗಳನ್ನು  ಸಂದರ್ಶಿಸಿ ಅಧಿಕಾರಿಗಳು ಚರ್ಚಿಸುತ್ತಿ ದ್ದಾರೆ. ಈ ನಿಮಿತ್ತ  ಜಿಲ್ಲೆಯಲ್ಲಿ  ಅನುಕೂಲತೆಗಳಿರುವ ಐದು ಶಾಲೆಗಳನ್ನು  ಆಯ್ಕೆ ಮಾಡಿ ಅರ್ಹ ದಿನಾಂಕಗಳಲ್ಲಿ  ಶಿಬಿರ ನಡೆಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

2013ರ ಆಗಸ್ಟ್‌  20ರಿಂದ 25ರ ವರೆಗೆ ಕೊನೆಯದಾಗಿ ಎಂಡೋಸಲ್ಫಾನ್‌ ಪೀಡಿತರ ವೈದ್ಯಕೀಯ ಶಿಬಿರ ನಡೆದಿತ್ತು. ಸಂತ್ರಸ್ತರನ್ನು  ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರವನ್ನು  ನಡೆಸಬೇಕು ಎಂದು ಎಂಡೋ ವಿರುದ್ಧ  ಹೋರಾಟ ನಡೆಸುವ ಕ್ರಿಯಾ ಸಮಿತಿಗೆ 2014ರಲ್ಲಿ  ಅಂದಿನ ಮುಖ್ಯಮಂತ್ರಿ ಊಮ್ಮನ್‌ ಚಾಂಡಿ ಲಿಖೀತ ರೂಪದಲ್ಲಿ  ಭರವಸೆ ನೀಡಿದ್ದರು. ಆದರೆ ಈ ಭರವಸೆ ಕೂಡ ಮಣ್ಣು  ಪಾಲಾಗಿರುವುದು ಸುಳ್ಳಲ್ಲ.

2016ರ ಫೆಬ್ರವರಿ ತಿಂಗಳಾಂತ್ಯದಲ್ಲಿ  ಶಿಬಿರ ನಡೆಸಲಾಗುವುದು ಎಂದು ಸತ್ಯಾಗ್ರಹ ನಿರತರಾಗಿದ್ದ  ಹೋರಾಟ ಸಮಿತಿ ಮುಖಂಡರಿಗೆ ಮತ್ತೆ  ಭರವಸೆ ಕೊಡಲಾಗಿತ್ತಾದರೂ ಅದನ್ನೂ  ಪಾಲಿಸ ಲಿಲ್ಲ.  ಶಿಬಿರದಲ್ಲಿ  ಭಾಗವಹಿಸಿದ ಎಂಡೋಸಲ್ಫಾನ್‌ ಸಂತ್ರಸ್ತರ ಪಟ್ಟಿಯಲ್ಲಿ  ಹೆಸರಿಲ್ಲದಿರುವುದರಿಂದ ಹಲವು ಮಂದಿ ಸಂತ್ರಸ್ತರಿಗೆ ಚಿಕಿತ್ಸಾ  ಸಹಾಯ ನಿರಾಕರಿಸಲಾಗುತ್ತಿರುವುದು ನೋವಿನ ಸಂಗತಿಯಾಗಿದೆ.

ಕಾಸರಗೋಡು ಜಿಲ್ಲೆಯ ಯಾವುದೇ ರೋಗಿ ಎಂಡೋಸಲ್ಫಾನ್‌ ಬಾಧಿತ ರಾಗಿದ್ದರೆ ಉಚಿತ ಚಿಕಿತ್ಸೆ  ಒದಗಿಸಬೇಕು ಎಂಬ ನಿಯಮವಿದೆ. ಆದರೂ ವೈದ್ಯರು ಅದಕ್ಕೆ ಸಿದ್ಧರಾಗುತ್ತಿಲ್ಲ  ಎಂಬ ದೂರುಗಳು ಕೇಳಿಬರುತ್ತಿವೆ. 

2013ರ ವೈದ್ಯಕೀಯ ಶಿಬಿರದ ಮಾನದಂಡಗಳಿಗೆ ಅನುಸಾರವಾಗಿ ನೂತನ ಶಿಬಿರದಿಂದ ರೋಗಿಗಳನ್ನು ಎಂಡೋಸಲ್ಫಾನ್‌ ಪೀಡಿತರ ಪಟ್ಟಿಗೆ ಸೇರಿಸಲಾಗುವುದು ಎಂದು ಅಧಿಕಾರಿ ಗಳು ಹೇಳುತ್ತಿದ್ದಾರೆ. 

ಇದೀಗ 5,848 ಮಂದಿ ಎಂಡೋಸಲ್ಫಾನ್‌ ಸಂತ್ರಸ್ತರು ಪಟ್ಟಿಯಲ್ಲಿದ್ದಾರೆ ಎಂದು ಎಂಡೋ ಬಾಧಿತರ ಕಲ್ಯಾಣ ಚಟುವಟಿಕೆಗಳ ಉಸ್ತುವಾರಿ ಹೊಂದಿರುವ ಸಹಾಯಕ ಜಿಲ್ಲಾಧಿಕಾರಿ ಕೆ.ಆರ್‌. ರವೀಂದ್ರನ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭರವಸೆ ನೀಡಿದರೂ ಪಾಲನೆಯಾಗಿಲ್ಲ  
2013ರ ಆಗಸ್ಟ್‌ 20ರಿಂದ 25ರ ತನಕ ಕೊನೆಯದಾಗಿ ಎಂಡೋ ಸಲ್ಫಾನ್‌ ಬಾಧಿತರ ವೈದ್ಯಕೀಯ ಶಿಬಿರವನ್ನು  ನಡೆಸಲಾಗಿತ್ತು. ಕಾಸರಗೋಡು ಜಿಲ್ಲೆಯಲ್ಲಿ ಸಂತ್ರಸ್ತರನ್ನು ಗುರುತಿಸಲು ಪ್ರತಿ ವರ್ಷ ವೈದ್ಯಕೀಯ ಶಿಬಿರ ನಡೆಸಲಾಗುವುದು ಎಂದು ಎಂಡೋಸಲ್ಫಾನ್‌ ವಿರೋಧಿ ಹೋರಾಟ ಕ್ರಿಯಾ ಸಮಿತಿಗೆ 2014ರಲ್ಲಿ ಅಂದಿನ ಮುಖ್ಯಮಂತ್ರಿ ಊಮ್ಮನ್‌ ಚಾಂಡಿ ಭರವಸೆ ನೀಡಿದ್ದರು. 2016ರ ಫೆಬ್ರವರಿ ತಿಂಗಳಲ್ಲಿ ಶಿಬಿರ ಏರ್ಪಡಿಸಲಾಗುವುದು ಎಂದು ನಿರಶನ ನಿರತರಾಗಿದ್ದ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಕೇರಳ ಸರಕಾರದ ಕಡೆಯಿಂದ ಮತ್ತೆ  ಭರವಸೆ ನೀಡಲಾಗಿತ್ತಾದರೂ ಅದನ್ನು ಇಲ್ಲಿಯವರೆಗೆ ಈಡೇರಿಸಿಲ್ಲ ಎಂಬುದು ಬಹುದೊಡ್ಡ ದುರಂತ.

ಟಾಪ್ ನ್ಯೂಸ್

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.