ಪ್ರತಿ ಮತವೂ ಮಹತ್ವದ್ದು: ಗಣೇಶ್
Team Udayavani, Apr 10, 2019, 6:30 AM IST
ಕುಂಬಳೆ: ಪ್ರಜಾಪ್ರಭುತ್ವ ನೀತಿಯಲ್ಲಿ ಪ್ರತಿಯೊಂದು ಮತವೂ ಮಹತ್ವದ್ದು ಎಂದು ಲೋಕಸಭಾ ಕ್ಷೇತ್ರ ಚುನಾವಣೆಯ ಜಿಲ್ಲಾ ಮಟ್ಟದ ನಿರೀಕ್ಷಕ ಎಸ್. ಗಣೇಶ್ ಹೇಳಿದರು.
ಸ್ವೀಪ್ ವತಿಯಿಂದ ಮತದಾನ ಜಾಗೃತಿ ಸಂಬಂಧ ಪರ್ಯಟನೆ ನಡೆಸುತ್ತಿರುವ “ನನ್ನ ಮತದಾನ, ನನ್ನ ಹಕ್ಕು’ ಎಂಬ ಕನ್ನಡ ಬೀದಿನಾಟಕ ಉದ್ಘಾಟನೆ ಸಂಬಂಧ ಕುಂಬಳೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶವನ್ನು ಯಾರು ಮುನ್ನಡೆಸಬೇಕು ಎಂದು ತೀರ್ಮಾನಿಸುವ ಹಕ್ಕು ಜನತೆಯನ್ನು. ಪ್ರತಿ ಪೌರನೂ ಸಂವಿಧಾನ ಪ್ರಕಾರದ ಕರ್ತವ್ಯವನ್ನು ಪಾಲಿಸಬೇಕೆಂದರು.
ಬೀದಿ ನಾಟಕ ಪರ್ಯಟನೆಯನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರು ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಯಾರ ಮತದಾನವೂ ಚಲಾವಣೆಯಾಗದೇ ಇರಕೂಡದು ಎಂಬ ನಿಟ್ಟಿನಲ್ಲಿ ಸಮಾಜ ಮುಂಜಾಗರೂಕತೆ ವಹಿಸಬೇಕು ಎಂದರು.
ಮಂಜೇಶ್ವರ, ಕಾಸರಗೋಡು ವಿಧಾನಸಭೆ ಕ್ಷೇತ್ರಗಳಲ್ಲಿ ಉಳಿದೆಡೆಗೆ ಹೋಲಿಸಿದರೆ ಮತಚಲಾವಣೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಜಾಗƒತಿ ಮೂಡಿಸಿ ಎಲ್ಲ ಮತದಾತರೂ ಮತಚಲಾವಣೆ ನಡೆಸುವಂತೆ ಸಮಾಜ ಯತ್ನಿಸಬೇಕೆಂದು ಜಿಲ್ಲಾಧಿಕಾರಿಯವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.