ಎಂಡೋಪಟ್ಟಿಯಲ್ಲಿರುವ ಎಲ್ಲರಿಗೂ ನಷ್ಟ ಪರಿಹಾರ ಅಸಾಧ್ಯ
Team Udayavani, Jan 13, 2018, 3:19 PM IST
ಕಾಸರಗೋಡು: 2010-11ನೇ ಆರ್ಥಿಕ ವರ್ಷದಲ್ಲಿ ಸಿದ್ಧಪಡಿಸಲಾದ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಸರು ಒಳಗೊಂಡಿರುವ ಎಲ್ಲರಿಗೂ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇರಳ ಸರಕಾರವು ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಿಳಿಸಿದೆ.
ನಷ್ಟಪರಿಹಾರ ಲಭಿಸಿಲ್ಲವೆಂದು ಹೇಳಿ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಹೆಸರು ಸೇರಿರುವವರ ನಾಲ್ವರು ತಾಯಂದಿರಾದ ಪಿ. ರಮ್ಯಾ, ಜಮೀಲಾ, ಸಿಸಿಲಿ, ಮಾಧವಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪೋಲ್ ಆ್ಯಂಟನಿ ಅವರು ಸರಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಈ ನಿಲುವು ವ್ಯಕ್ತಪಡಿಸಲಾಗಿದೆ.
ಎಂಡೋಸಲ್ಫಾನ್ ಬಾಧಿತರಿಗೆ ನಷ್ಟ ಪರಿಹಾರವಾಗಿ ಕೇರಳ ಸರಕಾರವು 350 ಕೋಟಿ ರೂಪಾಯಿಗಳನ್ನು ಈಗಾಗಲೇ ವಿನಿಯೋಗಿಸಿದೆ. 2010ರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಾಡಿದ ಶಿಫಾರಸಿನಂತೆ ಎಂಡೋಸಲ್ಫಾನ್ ಮಾರಕ ಕೀಟನಾಶಕವು ಸೃಷ್ಟಿಸಿದ ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಆಶ್ರಿತರಿಗೆ ತಲಾ 5 ಲಕ್ಷ ರೂ. ನೀಡುವಂತೆಯೂ, ಸಂತ್ರಸ್ತರಿಗೆ ತಲಾ 3 ಲಕ್ಷ ರೂ. ಗಳಂತೆ ನಷ್ಟ ಪರಿಹಾರ ವಿತರಿಸುವಂತೆ ತಿಳಿಸಲಾಗಿತ್ತು. ಅದನ್ನು 2012ರಲ್ಲಿ ಕೇರಳ ಸರಕಾರವು ಅಂಗೀಕರಿಸಿದೆ.
ಈ ಪಟ್ಟಿಯು 2010 ಮತ್ತು 2011ರ ಆರೋಗ್ಯ ಪುನರ್ವಸತಿ ಪಟ್ಟಿಗಿಂತ ಮೊದಲು ತಯಾರಿಸಿದ ಪಟ್ಟಿಗಳಾಗಿವೆ.
2010 ಮತ್ತು 2012ರಲ್ಲಿ ಸಿದ್ಧಪಡಿಸ ಲಾದ ಆ ಯಾದಿಗಳಲ್ಲಿ ಹಲವು ಮಂದಿ ಅನರ್ಹರು ಒಳಗೊಂಡಿದ್ದಾರೆಂದು ವಿಜಿ ಲೆನ್ಸ್ ವಿಭಾಗವು ಪತ್ತೆಹಚ್ಚಿತ್ತು. ಮಾನವ ಹಕ್ಕು ಆಯೋಗದ ಆದೇಶದ ಪ್ರಕಾರ 2013ರ ದಾಖಲೆಗಳ ಆಧಾರದಲ್ಲಿ ವೈದ್ಯರುಗಳು ತಯಾರಿಸಿದ ಯಾದಿಯಂತೆ ಅದರಲ್ಲಿ ಒಳಗೊಂಡಿರುವ ಹೆಚ್ಚು ಕಡಿಮೆ ಎಲ್ಲ ಸಂತ್ರಸ್ತರಿಗೂ ತಲಾ ಮೂರು ಲಕ್ಷ ರೂ. ಗಳಂತೆ ನಷ್ಟಪರಿಹಾರ ನೀಡಲಾಗಿದೆ.
ವಾರೀಸುದಾರರಿಲ್ಲದಿದ್ದಲ್ಲಿ ಪರಿಹಾರವಿಲ್ಲವಂತೆ!
ಆದರೆ ಈ ಯಾದಿಯಲ್ಲಿ ಹೆಸರು ಸೇರಿರುವ ಮೃತ ವ್ಯಕ್ತಿಗಳ ಪೈಕಿ ಹಲವರಿಗೆ ಅವರ ಕಾನೂನುಪರ ವಾರೀಸುದಾರರು ಇಲ್ಲದ ಕಾರಣ ಆ ಹಣ ವಿತರಿಸಲಾಗಿಲ್ಲ. ಕಾನೂನು ಪರವಾಗಿ ವಾರೀಸುದಾರರು ಬಂದಲ್ಲಿ ಅವರಿಗೆ ನಷ್ಟಪರಿಹಾರ ಮೊತ್ತ ನೀಡಲಾಗುವುದು ಎಂದು ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದವಿತ್‌ನಲ್ಲಿ ಸ್ಪಷ್ಟಪಡಿಸಿದೆ.
ನಷ್ಟಪರಿಹಾರ ದೊರಕಿಲ್ಲವೆಂದು ದೂರಿ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದ ಅರ್ಜಿದಾರರು 2010 ಮತ್ತು 2011ರ ಎಂಡೋ ಬಾಧಿತ ಯಾದಿಯಲ್ಲಿ ಸೇರಿದವರಾಗಿದ್ದಾರೆ. ಇವರ ಮಕ್ಕಳಿಗೆ ಆರ್ಥಿಕ ಸಹಾಯ ಲಭಿಸುತ್ತಿಲ್ಲವೆಂದು ತೋರಿಸಿ ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಲಿಲ್ಲ. ಆದರೂ ನಾಲ್ವರು ಸಂತ್ರಸ್ತರಿಗೆ ಚಿಕಿತ್ಸೆ ಇತ್ಯಾದಿಗಳಿಗೆ ಕೇರಳ ಸರಕಾರವು ಹಣ ವಿನಿಯೋಗಿಸಿದೆ. ಆದ್ದರಿಂದ ಈ ವಿಷಯದಲ್ಲಿ ನ್ಯಾಯಾ ಲಯದ ಕ್ರಮವನ್ನು ಹೊರತು ಪಡಿಸ ಬೇಕೆಂದು ಮುಖ್ಯ ಕಾರ್ಯ ದರ್ಶಿ ಅಫಿದವಿತ್‌ನಲ್ಲಿ ವಿನಂತಿಸಿಕೊಂಡಿದ್ದಾರೆ.
ಕಾನೂನು ಹೋರಾಟ ಮುಂದುವರಿಕೆ
ಕಾಸರಗೋಡು ಜಿಲ್ಲೆಯ ಅರ್ಹ ಎಲ್ಲ ಎಂಡೋಸಲ್ಫಾನ್ ಬಾಧಿತರಿಗೂ ಸೂಕ್ತ ನಷ್ಟಪರಿಹಾರ ಮೊತ್ತ ವಿತರಿಸಬೇಕು. ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಹೋರಾಟ ಮುಂದುವರಿಸಲಾಗುವುದು. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇರಳ ಸರಕಾರ ಕೂಡ ಮೀನಮೇಷ ಎಣಿಸುವುದನ್ನು ಬಿಟ್ಟು ನೋವಿನಿಂದ ಬದುಕು ಸಾಗಿಸುವವರ ನೆರವಿಗೆ ಧಾವಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು.
ಪದಾಧಿಕಾರಿಗಳು ಎಂಡೋಸಲ್ಫಾನ್ ವಿರುದ್ಧ ಹೋರಾಟ ಕ್ರಿಯಾ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.