ಪ್ರತಿಯೊಬ್ಬರು ದೇಹಾರೋಗ್ಯದ ಕಾಳಜಿ ವಹಿಸುವುದು ಅಗತ್ಯ: ಶಾರದಾ
ಶೇಣಿ ವಿದ್ಯಾಸಂಸ್ಥೆಯಲ್ಲಿ ವೈದ್ಯಕೀಯ ತಪಾಸಣೆ,ಸಲಹಾ ಶಿಬಿರ
Team Udayavani, Feb 27, 2020, 5:49 AM IST
ಪೆರ್ಲ:ಪುತ್ತೂರು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಶ್ರೀ ಶಾರದಾಂಬ ವಿದ್ಯಾಸಂಸ್ಥೆ ,ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು-ಆಸ್ಪತ್ರೆ ಇವುಗಳ ಸಹಭಾಗಿತ್ವದಲ್ಲಿ ಶೇಣಿ ಶ್ರೀ ಶಾರದಾಂಬ ವಿದ್ಯಾಸಂಸ್ಥೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಸಲಹಾ ಶಿಬಿರವು ನಡೆಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದ ವೈ.ಶಿಬಿರವನ್ನು ಉದ್ಘಾಟಿಸಿ,ವೈದ್ಯಕೀಯ ಶಿಬಿರ ಏರ್ಪಡಿಸುವುದರಿಂದ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲು ಸಾಧ್ಯ.ಪ್ರತಿಯೊಬ್ಬರು ತಮ್ಮ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸ ಬೇಕು.ನಾಡಿನ ಜನತೆ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ದೇವಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎಎ,ಪಂ.ಸದಸ್ಯೆ ಪುಷ್ಪಾ ವಿ,ವೈದ್ಯಾಧಿಕಾರಿಗಳಾದ ಡಾ.ಭರತ್ ಕುಮಾರ್,ರೋಹಿಣಿ ಭಾರಧ್ವಾಜ್ ಶುಭಾಶಂಸನೆ ಮಾಡಿದರು.ಶಾಲಾ ಮ್ಯಾನೇಜರ್ ಸೋಮಶೇಖರ ಜೆಎಸ್,ಹೈ.ಸೆ.ಪ್ರಾಂಶುಪಾಲೆ ವಿಜಯ ಲಕ್ಷ್ಮಿ ,ಪಿಟಿಎ ಅಧ್ಯಕ್ಷ ಮೊದಿನ್ ಕುಟ್ಟಿ ಎಸ್‌ಯು,ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರನಾಥ ನಾಯಕ್ ಉಪಸ್ಥಿತರಿದ್ದರು.ಶೇಣಿ ಎಸ್‌ಎಸ್‌ಎಯುಪಿ ಶಾಲಾ ಪ್ರಧಾನ ಶಿಕ್ಷಕ ರಾಧಾಕೃಷ್ಣ ನಾಯಕ್ ಸ್ವಾಗತಿಸಿ,ಹೈಸ್ಕೂಲ್ ಮುಖ್ಯ ಶಿಕ್ಷಕ ಶ್ರೀಶ ಕುಮಾರ್ ವಂದಿಸಿದರು.ಉಪನ್ಯಾಸಕ ಶಾಸ್ತ ಕುಮಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡ ʼದಾಸʼ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.