ಮರೆಯಾಗುತ್ತಿರುವ ವಸ್ತುಗಳನ್ನು ಕಂಡು ಖುಷಿಪಟ್ಟ ವಿದ್ಯಾರ್ಥಿಗಳು


Team Udayavani, Jun 30, 2017, 3:45 AM IST

vidyarti.jpg

ಬದಿಯಡ್ಕ: ಆಧುನಿಕತೆ ಬೆಳೆದಂತೆಲ್ಲ ಹೊಸತನಕ್ಕೆ ಒಗ್ಗಿಹೋಗುವ ಧಾವಂತದಲ್ಲಿ ಕೆಲವೊಮ್ಮೆ ಸಾಗಿಬಂದ ಹಾದಿಗಳ ನೆನಪು ನಮ್ಮನ್ನು ಹೆಚ್ಚು ಪುಳಕಿತಗೊಳಿಸುತ್ತದೆ. ಪ್ಲಾಸ್ಟಿಕ್‌, ಸ್ಟೀಲ್‌ ವಸ್ತುಗಳ ಬಳಕೆ ಇಂದು ನಮ್ಮೆಲ್ಲರ ಮನೆಮನಗಳಲ್ಲಿ ಬಲವಾಗಿ ಪ್ರಭಾವಕ್ಕೊಳಗಾದರೂ ಗ್ರಾಮೀಣ ಪ್ರದೇಶಗಳ ಹಲವು ಮನೆಗಳಲ್ಲಿ ಇದೀಗಲೂ ಅಲ್ಲೊಂದು ಇಲ್ಲೊಂದು ಮರದ ಸಾಮಗ್ರಿಗಳು, ಬೆತ್ತದ ವಸ್ತುಗಳು ಅಪೂರ್ವದಲ್ಲಿ ಬಳಕೆಯಲ್ಲಿವೆ. ಮತ್ತು ಹಲವು ಉಪ್ಪರಿಗೆಯಲ್ಲಿ ಬೆಚ್ಚಗೆಯ ಹಳೆಯ ಕನಸುಗಳೊಂದಿಗೆ ಪವಡಿಸಿವೆ.

ಕೇರಳ ವಿದ್ಯಾಭ್ಯಾಸದ 6ನೇ ತರಗತಿಯ ಕನ್ನಡ ಪಠ್ಯದಲ್ಲಿ ಹಳೆಯ ಪ್ರಾಚ್ಯವಸ್ತುಗಳ ಪರಿಚಯಾತ್ಮಕ ಪಾಠವಿದ್ದು, ಈ ಮೂಲಕ ಪ್ರಾಚ್ಯವಸ್ತುಗಳ ಬಗೆಗೆ ಅರಿವು ಮೂಡಿಸುವ ಯತ್ನಗಳು ಮಕ್ಕಳಿಗೆ ಉತ್ತಮ ಮೇವು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ಪಠ್ಯವನ್ನು ಹೆಚ್ಚು ಕ್ರಿಯಾತ್ಮಕಗೊಳಿಸುವ ಪ್ರಯತ್ನ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಮಂಗಳವಾರ ನಡೆಯಿತು.

ಹಳೆಯ ವಸ್ತುಗಳ ಕುರಿತು ಮಾಹಿತಿ 
ಮಕ್ಕಳಿಗೆ ಪರಂಪರೆ ಸಾಗಿಬಂದ ಹೆಜ್ಜೆ ಗುರುತುಗಳನ್ನು ಪರಿಚಯಿಸಲು ಚೆನ್ನೆಮಣೆ, ಮರದ ಮರಿಗೆ, ಹಳೆಯ ಲ್ಯಾಂಪ್‌, ಲಾಟಾನು, ಮಡಿಕೆ, ಶ್ಯಾವಿಗೆ ಮಣೆ, ನಾಣ್ಯ ಮೊದಲಾದ ಹಲವು ಹತ್ತು ವಸ್ತುಗಳನ್ನು ತೋರಿಸಿ ಪಠ್ಯ ಬೋಧಿಸಲಾಯಿತು. ಮಕ್ಕಳು ಶಿಕ್ಷಕರಿಂದ ಅವುಗಳ ಬಳಕೆ, ವಿಶೇಷತೆಗಳನ್ನು ಕೇಳಿ ಸ್ವತಃ ಕೈಯಿಂದ ಮುಟ್ಟಿ ಖುಷಿಪಟ್ಟರು. 

ಮಕ್ಕಳ ಕುತೂಹಲಕರವಾದ ಪ್ರಶ್ನೆಗಳಿಗೆ ಉತ್ತರವೊದಗಿಸಿ ಹೊಸ ಅರಿವಿನ ಶಿಕ್ಷಣಕ್ಕೆ ಪ್ರಯತ್ನಿಸಿದವರು ಯುವ ಶಿಕ್ಷಕ, ಕಲಾಪ್ರೇಮಿ ಅವಿನಾಶ್‌ ಕಾರಂತ್‌ ಪಾಡಿ. ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಸಹಕರಿಸಿದರು.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.