“ಸ್ಕೌಟಿಂಗ್ ಚಳವಳಿಯ ಅನುಭವ ಸಮಾಜಕ್ಕೆ ದಾರಿದೀಪವಾಗಲಿ’
Team Udayavani, Oct 6, 2018, 6:55 AM IST
ಕಾಸರಗೋಡು: ಕಾಸರಗೋಡು ಸಾವಿರಾರು ಮಕ್ಕಳಿಗೆ ಸ್ಕೌಟಿಂಗ್ ಎಂಬ ಪಾವನವಾದ ಚಳವಳಿಯ ಅನುಭವವನ್ನು ನೀಡಿ ಸಮಾಜಕ್ಕೆ ದಾರಿದೀಪವಾಗಲಿ ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಹೇಳಿದರು.
ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ನಡೆಯುತ್ತಿರುವ ಏಳು ದಿನಗಳ ಸ್ಕೌಟ್ ಅಧ್ಯಾಪಕರ ಮೂಲ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವ ಅಧ್ಯಾಪಕರ ತ್ಯಾಗವನ್ನು ಎಷ್ಟು ಕೊಂಡಾಡಿದರೂ ಸಾಲದು. ಯಾವು ದೇ ಪ್ರತಿಫಲ ಸಿಗದ ಚಳವಳಿ ಎಂದು ಸ್ಪಷ್ಟ ಗೊತ್ತಿದ್ದರೂ ಮುಂದಿನ ಪ್ರಜೆಗಳಾಗಲಿರುವ ಮಕ್ಕಳಿಗೆ ಜೀವನ ಪಾಠವನ್ನು ನೈಜ ಚಟುವಟಿಕೆಗಳ ಮೂಲಕ ನೀಡುವುದರ ಬಗ್ಗೆ ಹೊಸ ಅರಿವನ್ನು ಪಡೆಯಲು ಬಂದಿರುವುದು ಹೆಮ್ಮೆಯಾಗಿದೆ. ಡೇರೆಯಲ್ಲಿ ಮಲಗಿ ಮುಂಜಾವದಿಂದ ತಡರಾತ್ರಿಯ ವರೆಗೆ ನಿರಂತರ ಚಟುವಟಿಕೆಗಳಲ್ಲಿ ನಿರತರಾಗಿ ನೀಡಲಾಗುವ ತರಬೇತಿ ವಿಚಾರಗಳನ್ನು ಸ್ವತ: ಅನುಭವಸಿ ಕಲಿಯುವ ವೈಶಿಷ್ಟÂಪೂರ್ಣವಾದ ತರಬೇತಿಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರವನ್ನು ಶಾಲಾ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ. ಪೇರಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಉದ್ಘಾಟಿಸಿದರು.
ಪಟಾಲಂ ಎಂದು ಕರೆಯಲಾಗುವ ಆರರಿಂದ ಎಂಟು ಮಂದಿಯ ಗುಂಪುಗಳಲ್ಲಿ ಡೇರೆಯಲ್ಲಿ ವಾಸ ಮಾಡಿಕೊಂಡು ಸ್ಕೌಟು ಅಧ್ಯಾಪಕರ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಗಂಟುಗಳು, ಪ್ರಥಮ ಚಿಕಿತ್ಸೆ, ಬ್ಯಾಂಡೇಜು ಕಟ್ಟುವುದು, ತೆರವಾದ ಸ್ಥಳದಲ್ಲಿ ಬೆಂಕಿ ಮಾಡುವುದು ಮತ್ತು ಅಗ್ನಿ ಬಾಧೆಯ ಶಮನ, ದಿಕ್ಚಕ್ರದ ಉಪಯೋಗ, ಅಂದಾಜು ಮಾಡುವುದು, ಸಿಗ್ನಲಿಂಗ್, ಟ್ರೂಪ್ ಮೀಟಿಂಗ್ , ಪಥಸಂಚಲನ, ಬಿಪಿಯವರ ಆರು ವ್ಯಾಯಾಮಗಳು ಮೊದಲಾದ ವಿಷಯಗಳನ್ನು ಸ್ವತ: ಮಾಡಿ ಕಲಿಯುತ್ತಿದ್ದಾರೆ.
ಶಿಬಿರದ ಅಂಗವಾಗಿ ಸ್ವತ: ತೆರವಾದ ಸ್ಥಳದಲ್ಲಿ ಅಡುಗೆ ಮಾಡಿ ಆಹಾರ ಸೇವನೆ, ಶಿಬಿರಾಗ್ನಿ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ.
ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್, ಹಮೀದಾಲಿ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿ ಕಾರಿ ಅಗಸ್ಟಿನ್ ಬರ್ನಾಡ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ಕೆ. ಮೊದಲಾದವರು ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಶುಭಹಾರೈಸಿರುವರು. ಸರ್ವ ಧರ್ಮ ಪ್ರಾರ್ಥನೆ ಹಾಗೂ ಧ್ವಜಾವರೋಹಣದೊಂದಿಗೆ ಶಿಬಿರ ಸಮಾರೋಪಗೊಂಡಿತು.
ಶಿಬಿರದಲ್ಲಿ 32 ಅಧ್ಯಾಪಕ-ಅಧ್ಯಾಪಕಿಯರು
ಕಾಸರಗೋಡು ಮತ್ತು ಕಾಂಞಂಗಾಡು ಶಿಕ್ಷಣ ಜಿಲ್ಲೆಗಳ ವಿವಿಧ ಶಾಲೆಗಳಿಂದ ಆಗಮಿಸಿದ 32 ಮಂದಿ ಅಧ್ಯಾಪಕರು ಮತ್ತು ಅಧ್ಯಾಪಕಿಯರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿ ವೈವಿಧ್ಯಮಯ ವಿಚಾರಗಳನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಸ್ಕೌಟು ವಿಭಾಗದ ಆಯುಕ್ತ ಗುರುಮೂರ್ತಿ ನಾಯ್ಕಪು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಏಳು ದಿನಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯುವುದಕ್ಕಾಗಿ ಕೂಡ್ಲು ಗೋಪಾಲಕೃಷ್ಣ ಪ್ರೌಢಶಾಲಾ ಸ್ಕೌಟು ಅಧ್ಯಾಪಕ ಕಿರಣ್ ಪ್ರಸಾದ್ ಪಿ.ಜಿ., ಮಧೂರು ಸರಕಾರಿ ಶಾಲಾ ಮುಖ್ಯ ಶಿಕ್ಷಕ ವಿನೋದ್ ಕುಮಾರ್, ಕಾಟುಕುಕ್ಕೆ ಶಾಲಾ ಅಧ್ಯಾಪಕ ವಿಜಯಕುಮಾರ್, ಕುಂಟಿಕಾನ ಶಾಲಾ ಅಧ್ಯಾಪಕ ಪ್ರಶಾಂತ್ ಕುಮಾರ್ ಕಾಲಿಚ್ಚಾನಡ್ಕ ಶಾಲಾ ಅಧ್ಯಾಪಕ ವಿ.ಕೆ ಭಾಸ್ಕರನ್ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.