ವಿದ್ಯಾನಗರ :ಯೋಗ ವಿದ್ಯಾರ್ಥಿಗಳಿಗೆ ಅಭಿನಂದನೆ
Team Udayavani, Dec 12, 2018, 1:55 AM IST
ವಿದ್ಯಾನಗರ: ಯೋಗ ಮನಸು ದೇಹಗಳ ಏಕತೆಯನ್ನು, ಸಮತೋಲನವನ್ನು ಕಾಪಾಡುವ ಸುಲಭ ಸೂತ್ರ. ಸತತವಾದ ಸಾಧನೆ ಹಾಗೂ ದೃಢ ಮನಸಿನ ಅಭ್ಯಾಸ ನಮ್ಮನ್ನು ಆರೋಗ್ಯದಿಂದಿರುವಂತೆ, ಉತ್ಸಾಹದಿಂದಿರುವಂತೆ ಮಾಡುತ್ತದೆ ಎಂದು ಯೋಗ ಶಿಕ್ಷಕ ದೇವದಾಸ್ ಕೊರಕ್ಕೋಡು ಹೇಳಿದರು. ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಮಂದಿರ ದ್ವಾರಕಾನಗರ ಕಾಸರಗೋಡು ಇಲ್ಲಿ ನಡೆಯುತ್ತಿರುವ ಉಚಿತ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ಯೋಗ ಫೆಡರೇಶನ್ ನಡೆಸಿದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಗಳಿಸಿದ ಕೌಸ್ತುಭ್, ಸೂಚಕ್, ಪ್ರಣವ್, ಕೌಶಿಕ್, ಧನುಷ್, ಘನಶ್ಯಾಮ್, ಗನ್ಯ, ಮಂಜುನಾಥ ಶೆಣೈ ಹಾಗೂ ಕೇರಳ ರಾಜ್ಯ ಮಟ್ಟದ ಸ್ಪಧೆಯಲ್ಲಿ ಯೋಗಕೇಂದ್ರವನ್ನು ಪ್ರತಿನಿಧೀಕರಿಸಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ಅಭಿಜ್ಞಾ ಕರಂದಕ್ಕಾಡು, ವೈಶಾಖ್, ಅಶ್ವಿನಿ ಕಾಮತ್ ಮತ್ತು ಯೋಗ ಕೇಂದ್ರದ ಶಿಕ್ಷಕಿ ತೇಜಕುಮಾರಿ ಇವರನ್ನು ಅಭಿನಂದಿಸಲಾಯಿತು.
ಅಕಾಡೆವಿಯ ಜತೆ ಕಾರ್ಯದರ್ಶಿ ಸಂಧ್ಯಾಗೀತಾ ಬಾಯಾರು ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಯೋಗದ ಅಗತ್ಯವನ್ನು ಮನನ ಮಾಡಿದರು. ಈ ಸಂದರ್ಭದಲ್ಲಿ ಸಂಜಯ್ ಕಾಮತ್ ಕಾಸರಗೋಡು, ಸಹನಾ ಕಾಮತ್, ಮಮತಾ ಉಪೇಂದ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾತೆಯರಾದ ಸುಲೋಚನಾ, ರಾಜೇಶ್ವರಿ, ಪುಷ್ಪಾ, ಸ್ನೇಹ.ಬಿ.ಕೆ, ನಯನಾ ಶೆಣೈ, ಸತಾಕಿಶೋರ್, ಸಾವಿತ್ರಿ ನೀರ್ಚಾಲ್ ಸಹಕಾರ ನೀಡಿದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎ.ಎನ್.ನೆಟ್ಟಣಿಗೆ ಸ್ವಾಗತಿಸಿ ಶಿಕ್ಷಕಿ ತೇಜ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.