ಪುಟ್ಟ ಬಾಲಕನ ಸನ್ಮಾನಿಸಿದ ಉಪಸಭಾಪತಿಗಳು
Team Udayavani, Jun 23, 2019, 4:34 PM IST
ಬದಿಯಡ್ಕ : ಯಾವ ಶಿಲೆಯಲ್ಲಿ ಯಾವ ಶಿಲ್ಪ ಅಡಗಿದೆ ಎಂದು ಕಂಡುಹಿಡಿಯುವುದು ಅಸಾಧ್ಯವೋ ಹಾಗೆಯೇ ಮಕ್ಕಳಲ್ಲಿ ಅಡಕವಾಗಿರುವ ಅಪ್ರತಿಮ ಪ್ರತಿಭೆಯನ್ನು ಕೆಲವು ಅನಿರೀಕ್ಷಿತ ಅವಕಾಶಗಳು ಬೆಳಕಿಗೆ ತರುವಲ್ಲಿ ಯಶಸ್ವಿಯಾಗುತ್ತದೆ. ಈ ಬಾಲಕ ಅದಕ್ಕೊಂದು ಉದಾಹರಣೆ. ಕಿರು ಚಿತ್ರಕ್ಕೆ ಕಲಶಪ್ರಾಯವಿಟ್ಟಂತೆ ನಟನೆ ಕಲಿಯುವ ಮೊದಲೇ ತಾನು ಅನುಭವಿಸುವ ಬಡತನದ ಬೇಗೆಯನ್ನು ಸಹಜವಾಗಿ ಜೀವಿಸಿತೋರಿಸುವ ಮೂಲಕ ವಿಜಯ ಎಲ್ಲರಲ್ಲೂ ಬೆರಗುಮೂಡಿಸಿದ್ದಾನೆ. ಈ ಪ್ರತಿಭೆಯನ್ನು ಕೈಹಿಡಿದು ಮುನ್ನಡೆಸುವ ಮೂಲಕಓರ್ವ ಅಸಾಮಾನ್ಯ ನಟನನ್ನು ಗಡಿನಾಡಿಗೆ ನಿಡಲು ಸಾಧ್ಯ ಎಂದು ಕರ್ನಾಟಕ ವಿಧಾನ ಪರಿಷತ್ತು ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಸಂತಸ ವ್ಯಕ್ತಪಡಿಸಿದರು.
ಅವರು 40 ಪುರಸ್ಕಾರಗಳನ್ನು ಪಡೆದ ಪುಲ್ಲಾಂಜಿ ಎಂಬ ಕಿರುಚಿತ್ರದಲ್ಲಿ ಅಮೋಘ ಅಭಿನಯ ನೀಡಿ ಜನಮನ ಸೆಳೆದ ಪೆರಡಾಲ ಕೊರಗ ಕೊಲನಿಯ ಪುಟ್ಟ ಬಾಲಕ ವಿಜಯನನ್ನು ಶಾಲು ಹೊದಿಸಿ, ಸ್ಮರಣಿಕೆ ಮತ್ತು ಸಮ್ಮಾನ ಪತ್ರ ನೀಡಿ ಸನ್ಮಾನಿಸಿ ಮಾತನಾಡುತ್ತಿದ್ದರು.
ಬದಿಯಡ್ಕ ಗುರುಸದನದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಕೇಳು ಮಾಸ್ಟರ್ ಸ್ಮರಣಾರ್ಥ ಕನ್ನಡ ಶಾಳೆಗಳಿಗೆ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು. ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ದ.ಕ.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಉಪಾಧ್ಯಕ್ಷ ಪ್ರೊ.ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಬಾಲಕೃಷ್ಣ ಅಚ್ಚಾಯಿ, ರವಿ ನಾಯ್ಕಾಪು, ಪುರುಷೋತ್ತಮ ಭಟ್ ಪೈವಳಿಕೆ, ನಿತಿನ್, ನವೀನ್, ಸಂಧ್ಯಾಗೀತಾ ಬಾಯಾರು, ರೇಶ್ಮಾಸುನಿಲ್. ಜಯಲಕ್ಷ್ಮಿ, ವಿದ್ಯಾಗಣೇಶ್ ಅಣಂಗೂರು ಮುಂತಾದವರು ಉಪಸ್ಥಿತರಿದ್ದರು.
ವಿಜಯ ಪುಲ್ಲಾಂಜಿಯಲ್ಲಿಹಸಿವಿನಿಂದ ನರಳುವ ಬಡಹುಡುಗನ ಪಾತ್ರವನ್ನು ಈತ ನಿರ್ವಹಿಸಿದ್ದು ಮನೋಜ್ಞವಾದ ಅಭಿನಯದ ಮೂಲಕ ನೋಡುಗರ ಕಂಗಳಲ್ಲಿ ಹನಿ ಮೂಡುವಂತೆ ಮಾಡಿದ್ದು ಕೊರಗ ಕೊಲನಿಯ ಬಾಲಕನ ಪ್ರತಿಭೆ ಎಲ್ಲರನ್ನು ಬೆರಗು ಮೂಡಿಸಿದೆ. ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಗಳಾದ ಚಿತ್ತರಂಜನ್ ಕಡಂದೇಲು, ಉಪಾಸನ ಪಂಜರಿಕೆ, ಸಮನ್ವಿತಾಗಣೇಶ್ ಮತ್ತು ವಸಂತ ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.