ಕಡತ, ದಾಖಲೆ ಸಂರಕ್ಷಣೆ ಹೊಣೆ ಸಿಬಂದಿಯದು
Team Udayavani, Jul 5, 2019, 9:52 AM IST
ಕಾಸರಗೋಡು: ದಿನ ನಿತ್ಯದ ಕಚೇರಿ ವ್ಯವಹಾರಗಳ ನಡುವೆ ಕಡತಗಳನ್ನು, ದಾಖಲೆಗಳನ್ನು ಸಂರಕ್ಷಿಸಿಡುವ ಹೊಣೆಗಾರಿಕೆ ಆಯಾ ಸರಕಾರಿ ಕಚೇರಿಗಳ ಸಿಬಂದಿಯದು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಕಮಿಷನರ್ ಸೋಮನಾಥನ್ ಪಿಳ್ಳೆ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆಯೋಗದ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ಕಡತಗಳನ್ನು ಸುರಕ್ಷಿತವಾಗಿ ಇರಿಸುವ ಹೊಣೆಗಾರಿಕೆಯೂ ಕಚೇರಿ ಯಾ ಇಲಾಖೆಯ ಮುಖ್ಯಸ್ಥರ ಜವಾಬ್ದಾರಿ. ಕಚೇರಿ ದಾಖಲೆ ಪತ್ರಗಳು ಕಳೆದುಹೋಗಿರುವ ಕಾರಣ ಅರ್ಜಿದಾರರಿಗೆ ಸಂಭವಿಸಬಹುದಾದ ನಷ್ಟ, ಸಂಕಷ್ಟಗಳಿಗೆ ಮಾಹಿತಿ ಹಕ್ಕು ಕಾನೂನು ಕಾಯಿದೆ 19(8) ಬಿ. ಪ್ರಕಾರ ಸಂಬಂಧ ಪಟ್ಟ ಅಧಿಕಾರಿ ಗಳು ನಷ್ಟಪರಿಹಾರ ನೀಡಲು ಹೊಣೆ ಗಾರರಾಗಿದ್ದಾರೆ. ರ್ಯಾಕ್, ಕಪಾಟು ಸಹಿತ ಸೌಲಭ್ಯ ಒದಗಿಸಿ ಕಡತಗಳನ್ನು ಸಂರಕ್ಷಿಸಬೆಕು. ಜತೆಗೆ ಕಚೇರಿಯ ಕಟ್ಟಡದಲ್ಲಿ ಸೋರಿಕೆ ಇತ್ಯಾದಿ ಸಂಭವಿಸಿ ಕಡತಗಳು ಹಾಳಾಗದಂತೆ ಮುಂಜಾಗರೂಕತೆ ನಡೆಸಬೇಕು ಎಂದು ತಿಳಿಸಿದರು.
ಇದೇ ವೇಳೆ ಕಾಸರಗೋಡು ನಗರಸಭೆ ಕಚೇರಿಯ ಕಟ್ಟಡ ನಿರ್ಮಾಣ ಸಂಬಂಧ ಕೆಲವು ಕಡತ ಗಳು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟ ದೂರಿನ ಪರಿಶೀಲನೆ ನಡೆಸಿ 30 ದಿನಗಳಲ್ಲಿ ದೂರುದಾರರಿಗೆ ಸಂಬಂಧಪಟ್ಟ ದಾಖಲೆ ಪತ್ರ ಹಸ್ತಾಂತರಿಸುವಂತೆ ಆದೇಶಿಸಿದರು.
ಬಿರುಸಿನ ಗಾಳಿಗೆ ಕಚೇರಿಯಿಂದ ಕೆಲವು ದಾಖಲೆಗಳು ನಾಪತ್ತೆಯಾ ಗಿದ್ದುವು ಎಂದು ನಗರಸಭೆ ಅಧಿಕಾರಿ ಗಳು ಸಭೆಯಲ್ಲಿ ವಾದಿಸಿದ್ದರು. ದಾಖಲೆತ್ರಗಳು ದೂರುದಾರರಿಗೆ ಲಭಿಸದೇ ಇದ್ದಲ್ಲಿ, ಆ ಮೂಲಕ ಸಂಭವಿಸುವ ನಷ್ಟಗಳಿಗೆ ನಗರಸಭೆ ದಂಡ ತೆರಬೇಕಾದೀತು ಎಂದು ಕಮಿಷನರ್ ಮುನ್ನೆಚ್ಚರಿಕೆ ನೀಡಿದರು. ಹುಸೂರ್ ಶಿರಸ್ತೇದಾರ್ ಕೆ. ನಾರಾಯಣನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.