“ಜಾನಪದೀಯ ನಂಬಿಕೆ, ಆಚರಣೆ ಮರೆವು ಅಧಃಪತನಕ್ಕೆ ದಾರಿ’
ವಾಂತಿಚ್ಚಾಲಿನಲ್ಲಿ ಆಟಿಡೊಂಜಿ ಅಟ್ಟಣೆ
Team Udayavani, Jul 23, 2019, 5:58 AM IST
ಬದಿಯಡ್ಕ : ತುಳು ಭಾಷೆ, ಸಂಸ್ಕೃತಿಗೆ ಸಂವರ್ಧನೆಗೆ ಪೂರಕವಾದ ಕಾರ್ಯಕ್ರಮವನ್ನು ಆಚರಿಸುವುದು, ತುಳು ಲಿಪಿ ಸಂಶೋಧಕರಾದ ಡಾ| ವೆಂಕಟರಾಜ ಪುಣಿಂಚಿತ್ತಾಯರ ಕನಸುಗಳನ್ನು ವ್ಯಾಪಕಗೊಳಿಸಿ ನನಸುಗೊಳಿಸುತ್ತಿರುವ ಜಿ.ಕೆ.ಚಾರಿಟೇಬಲ್ ಟ್ರಸ್ಟ್‌ನ ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ಹೇಳಿದರು.
ವಾಂತಿಚ್ಚಾಲಿನ ಜಿ.ಕೆ.ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ವಾಂತಿಚ್ಚಾಲಿನಲ್ಲಿ ಆಯೋಜಿಸಲಾದ 51ನೇ ವರ್ಷದ ಆಟಿಡೊಂಜಿ ಅಟ್ಟಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಾರಿಟೆಬಲ್ ಟ್ರಸ್ಟ್‌ನ ಮೂಲಕ ತುಳುವಿನ ಸಮಗ್ರ ಸಾಹಿತಿಕ, ಸಾಂಸ್ಕೃತಿಕ, ಜಾನಪದ ಆಚರಣೆ ನಂಬಿಕೆಗಳಿಗೆ ಪುನಶ್ಚೇತನ ನೀಡುತ್ತಿರುವುದು ಹೊಸ ತಲೆಮಾರಿಗೆ ಪ್ರೇರಣೆಯಾಗಲಿದೆ. ಸಾಂಸ್ಕೃತಿಕ, ಜಾನಪದೀಯ ನಂಬಿಕೆ, ಆಚರಣೆಗಳ ಮರೆವು ಅಧಪತನದ ದಾರಿಯಾಗಿ ಅಶಾಂತಿಗೆ ಕಾರಣವಾಗುವುದು ಎಂದು ತಿಳಿಸಿದರು.
ಕೇರಳ ತುಳು ಅಕಾಡೆಮಿ ಮೂಲಕ ಮುಂದಿನ ದಿನಗಳಲ್ಲಿ ತುಳು ಲಿಪಿ ಕಾರ್ಯಾಗಾರ ನಡೆಸಲಾಗುವುದು ಎಂದ ಅವರು ತುಳು ಭವನದ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಡಾ|ಶ್ರೀನಿಧಿ ಸರಳಾಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಅಕಾಡೆಮಿ ಸದಸ್ಯೆ ವಿದ್ಯಶ್ರೀ, ಕಾಸರಗೋಡು ತುಳು ಲೇಖಕರ ಸಂಘದ ಅಧ್ಯಕ್ಷ ಸತೀಶ ಸಾಲಿಯಾನ್ ನೆಲ್ಲಿಕುಂಜೆ, ಯೋಗ ಶಿಕ್ಷಕಿ ಇಂದಿರಾ ಯಾದವ್ ನೆಟ್ಟಣಿಗೆ, ಕುಲಾಲ ಸಮಾಜ ಸುಧಾರಕ ಸಂಘ ಕಾಸರಗೋಡಿನ ಅಧ್ಯಕ್ಷ ಸುಂದರ ಕಟ್ನಡ್ಕ, ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪತ್ರಕರ್ತರಾದ ಜಯ ಮಣಿಂಪಾರೆ ತುಳು ಸಾಹಿತಿ ಬಾಲಕೃಷ್ಣ , ಕಿಶನ್ ಮುದುಂಗಾರ್ ಕಟ್ಟೆ , ಹರ್ಷ ರೈ ಪುತ್ರಕಳ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತುಳು ಅಕಾಡೆಮಿ ಅಧ್ಯಕ್ಷರಾದ ಉಮೆಶ್ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಜಿ.ಕೆ.ಟ್ರಸ್ಟ್‌ನ ಗೋಪಾಲಕೃಷ್ಣ ಕುಲಾಲ್ ಸ್ವಾಗತಿಸಿ, ದಿವ್ಯ ಪ್ರದೀಪ್ ಕಳತ್ತೂರು ವಂದಿಸಿದರು. ಜಿಶನ್ ವಾಂತಿಚ್ಚಾಲ್ ಪ್ರಾರ್ಥನೆ ಹಾಡಿದರು.
ಜೀವಂತವಾಗಿಸಲು ಸಾಧ್ಯ
ತುಳುಭಾಷೆ ಮತ್ತು ಸಂಸ್ಕೃತಿ ವೈಶಿಷ್ಟéಪೂರ್ಣವಾದುದು. ಅದರಲ್ಲಿರುವ ಮೂಲ ತತ್ವಗಳನ್ನು, ಜೀವನ ಸೂತ್ರಗಳನ್ನು ಆಚರಣೆಯ ಮೂಲಕ ಮಾತ್ರ ಜೀವಂತವಾಗಿಸಲು ಸಾಧ್ಯ. ಸಂಪ್ರದಾಯಕ್ಕೆ ಚ್ಯುತಿ ಬರದಂತೆ ತೌಳವರ ಶ್ರೀಮಂತ ಬದುಕನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಪ್ರಯತ್ನ ನಮ್ಮದು. ನಮ್ಮ ಪಾಡªನಾ, ಆಟ ಆಯನ, ತಿಂಡಿ ತಿನಿಸುಗಳ ಪರಿಚಯದೊಂದಿಗೆ ಆಟಿ ಯಾಕೆ ಅಷ್ಟೊಂದು ವಿಶೇಷ ಎಂಬುವುದನ್ನು ಆಚರಣೆಯ ಮೂಲಕ ತಿಳಿಸಿಕೊಡುವ ಆಟಿಡೊಂಜಿ ಅಟ್ಟಣೆ ಕಾರ್ಯಕ್ರಮವನ್ನು ವರ್ಷಂಪ್ರತಿ ಆಚರಿಸಿಕೊಂಡು ಬಂದಿದೇವೆ ಎಂದು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.