ಕೇರಳ ಗೃಹಿಣಿಯರ ಕೈರುಚಿ ಸವಿಯಲಿರುವ ವಿದೇಶೀಯರು

ರಾಜ್ಯ ಪ್ರವಾಸೋದ್ಯಮ ಮಿಷನ್‌ನ ನೂತನ ಯೋಜನೆ "ಎಕ್ಸ್‌ಪೀರಿಯನ್ಸ್‌ ಎತ್ನಿಕ್‌ ಕ್ಯುಸೀನ್‌'

Team Udayavani, Jul 20, 2019, 5:37 AM IST

19KSDE1

ಕಾಸರಗೋಡು: ಕೇರಳದ ಗೃಹಿಣಿಯರ ಕೈರುಚಿಯನ್ನು ವಿದೇಶಿಯರಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಮಿಷನ್‌ ಯೋಜನೆ ಸಿದ್ಧಪಡಿಸಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ರಾಜ್ಯ ವಿಧಾನಸಭೆಯಲ್ಲಿ ಪ್ರವಾಸೋದ್ಯಮ ವಲಯಕ್ಕೆ ಹೊಸ ದಿಶೆ ಸೃಷ್ಟಿಸಬಲ್ಲ ಈ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.

‘ಎಕ್ಸ್‌ಪೀರಿಯನ್ಸ್‌ ಎತ್ನಿಕ್‌ ಕ್ಯುಸೀನ್‌’ ಎಂಬ ಹೆಸರಿನಲ್ಲಿ ಕೇರಳದಲ್ಲಿ ಆರಂಭಿಸಲಾಗುವ ನೂತನ ಯೋಜನೆಗೆ ರಾಜ್ಯ ಪ್ರವಾಸೋದ್ಯಮ ವರ್ಕಿಂಗ್‌ ಗ್ರೂಪ್‌ ಆಡಳಿತಾನುಮತಿ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 2 ಸಾವಿರ ಮನೆಗಳನ್ನು ಪ್ರಾಥಮಿಕ ಹಂತದಲ್ಲಿ ಯೋಜನೆಯ ಅಂಗವಾಗಿಸಲಾಗುವುದು. ಕೇರಳೀಯ ಗ್ರಾಮಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳ ಪ್ರಧಾನ ಕೇಂದ್ರವಾಗಿಸುವ ಉದ್ದೇಶದಿಂದ ಯೋಜನೆ ಸಿದ್ಧಪಡಿಸಲಾಗಿದೆ.

ಯೋಜನೆಯ ರೀತಿ
ಮನೆಗಳಿಗೆ ವಿದೇಶಿ ಅತಿಥಿಗಳನ್ನು ಪರಂಪರಾಗತ ಶೈಲಿಯಲ್ಲಿ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಕೇರಳ ಶೈಲಿಯ ಆಹಾರ ಸಿದ್ಧಪಡಿಸುವ ಸಮೂಹವೊಂದನ್ನು ರಾಜ್ಯದಾದ್ಯಂತ ಸ್ಥಾಪಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಸಹಿತವಾಗಿ ಈ ಸಮೂಹವನ್ನು ವಿದೇಶೀಯರಿಗೆ ಪರಿಚಯಮಾಡಿಕೊಡಲಾಗುವುದು. ಈ ಯೋಜನೆ ಮೂಲಕ ಕನಿಷ್ಠ 30 ಸಾವಿರದಿಂದ 50 ಸಾವಿರ ಮಂದಿಗೆ ಮೂರು ವರ್ಷಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ. ಇವರಲ್ಲಿ ಬಹುಪಾಲು ಮಹಿಳೆಯರೇ ಇರುವರು ಎಂಬುದು ಗಮನಾರ್ಹ ವಿಚಾರ. ಮಾಹಿತಿ ತಂತ್ರಜ್ಞಾನದ ಬಳಕೆ ಮೂಲಕ ಕನಿಷ್ಠ ಅವಧಿಯಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಹಿನ್ನೆಲೆ
ಕೇರಳೀಯ ಶೈಲಿಯ ಆಹಾರ ಸಂಸ್ಕೃತಿ, ಅಡುಗೆ, ಆಹಾರ ಸೇವನೆ ರೀತಿ ಅನನ್ಯವಾದುದು. ಆದರೆ ಆಧುನಿಕ ಫಾಸ್ಟ್‌ ಫುಡ್‌ ಶೈಲಿ ರಾಜ್ಯದಾದ್ಯಂತ ಹರಡುತ್ತಿದ್ದು, ಪರಂಪರಾಗತ ಶೈಲಿಗೆ ತಡೆಯಾಗಿದೆ. ರಾಜ್ಯದ ಬಹುತೇಕ ಕಿರು ಹೋಟೆಲ್ಗಳಲ್ಲಿ ಕೂಡ ಇಂದು ಪರಂಪರಾಗತ ಶೈಲಿಯ ಆಹಾರ ಅಲಭ್ಯವಾಗಿದೆ. ವಿದೇಶೀಯರು ನಮ್ಮ ದೇಶಕ್ಕೆ ಆಗಮಿಸುವ ವೇಳೆ ಸಹಜವಾಗಿ ಸ್ಥಳೀಯ ಶೈಲಿಯನ್ನು ನಿರೀಕ್ಷಿಸುತ್ತಾರೆ. ಇವರಲ್ಲಿ ಬಹುತೇಕ ಮಂದಿ ಈ ಪರಂಪರೆಯ ಬಗ್ಗೆ ಅಧ್ಯಯನ ನಡೆಸಲು ಉತ್ಸುಕರಾಗಿರುತ್ತಾರೆ. ದುರಾದೃಷ್ಟrವಶಾತ್‌ ರಾಜ್ಯದಲ್ಲಿ ಈ ವರೆಗೆ ಇದಕ್ಕೆ ಪೂರಕ ವಾತಾವರಣ ಇರಲಿಲ್ಲ. ಈ ಯೋಜನೆ ಮೂಲಕ ರಾಜ್ಯದ ಬ್ರಾಂಡಿಂಗ್‌ ಘಟಕಗಳಲ್ಲಿ ಪರಂಪರಾಗತ ಶೈಲಿಯ ಆಹಾರ ವ್ಯವಸ್ಥೆ ಪ್ರಧಾನವಾಗಿರುವುದು.

ನೋಂದಣಿ ಹೇಗೆ ನಡೆಸಬಹುದು
ಈ ಯೋಜನೆಯಲ್ಲಿ ನೋಂದಣಿ ನಡೆಸುವ ಎಲ್ಲ ಮನೆಗಳನ್ನು ಪ್ರವಾಸೋದ್ಯಮ ಮಿಷನ್‌ ಜಿಲ್ಲಾ ಸಂಚಾಲಕ ಸೇರಿರುವ ಸಮಿತಿ ಸಂದರ್ಶನ ನಡೆಸಿ ಅವಲೋಕನ ಮಾಡಿ ನಿಗದಿಪಡಿಸಲಿದೆ. ಅದಕ್ಕಾಗಿ ಯೋಜನೆಯಲ್ಲಿ ನೋಂದಣಿ ನಡೆಸುವ ಮಂದಿಗೆ ಆಯಾ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಇಬ್ಬರು ಸದಸ್ಯರಿರುವ ಒಂದು ಕುಟುಂಬ ಒಬ್ಬ ಸಹಾಯಕ/ಸಹಾಯಕಿಯ ಸಹಾಯದೊಂದಿಗೆ 30 ಮಂದಿಗಿರುವ ಕೇರಳೀಯ ಆಹಾರ ಸಿದ್ಧಮಾಡಿಕೊಡುವ ಮೂಲಕ ಶಾಶ್ವತ ಆದಾಯ ಒದಗಲಿದೆ. ಇದನ್ನು ನಡೆಸುವ ರೀತಿಯನ್ನು ತರಬೇತಿಯಲ್ಲಿ ತಿಳಿಸಲಾಗುವುದು.

ಇದಕ್ಕೆ ಅಗತ್ಯವಿರುವ ಬಂಡವಾಳ ಹೂಡಿಕೆಯ ಸರಿಸುಮಾರು ರೂಪುರೇಷೆಯನ್ನೂ ಒದಗಿಸಲಾಗುವುದು. ಅನಂತರ ಅಗತ್ಯದ ಸಿದ್ಧತೆಗಳಿಗಾಗಿ ಒಂದು ತಿಂಗಳ ಅವಧಿ ನೀಡಲಾಗುವುದು. ಈ ಯೋಜನೆಯಲ್ಲಿ ನೋಂದಣಿ ನಡೆಸುವ ಯೂನಿಟ್‌ಗಳು ಕಡ್ಡಾಯವಾಗಿ ಪ್ರಾಥಮಿಕ ಕೃತ್ಯಗಳ ನಿರ್ವಹಣೆಯ ಸೌಲಭ್ಯ ಒದಗಿಸಬೇಕು. ಪರಿಶೀಲನೆಯ ಅನಂತರ ಅಂಗೀಕಾರ ಪಡೆಯುವ ಪ್ರತಿ ವ್ಯವಸ್ಥಾಪಕನ ಲೊಕೇಶನ್‌, ಫೋಟೋ, ಮೊಬೈಲ್ ನಂಬರ್‌ ಇತ್ಯಾದಿ ಮಾಹಿತಿ ಕೇರಳ ಟ್ಯೂರಿಸಂ ವೆಬ್‌ಸೈಟ್‌ನಲ್ಲಿ, ಮೊಬೈಲ್ ಆ್ಯಪ್‌ನಲ್ಲಿ ಸೇರ್ಪಡೆಗೊಳಿಸಲಾಗುವುದು.

ಈ ಯೋಜನೆಯ ಮೊದಲ ಹಂತ ಜುಲೈ ತಿಂಗಳನಲ್ಲಿ ಆರಂಭಗೊಳ್ಳಲಿದೆ. ಆಸಕ್ತ ಗೃಹಿಣಿಯರು, ಕುಟುಂಬಗಳು ಜು.25ರ ಮುಂಚಿತವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಟ್ಯೂರಿಸಂ ಮಿಷನ್‌ ಕಚೇರಿಯಲ್ಲಿ ಯಾ ಜಿಲ್ಲಾ ಪ್ರವಾಸೋದ್ಯಮ ಕಚೇರಿಗಳಲ್ಲಿ ನೋಂದಣಿ ನಡೆಸಬಹುದು. ಅಂಗೀಕೃತ ಹೋಂ ಸ್ಟೇಗಳೂ ಈ ಯೋಜನೆಯ ಭಾಗವಾಗಬಹುದು. ಮಾಹಿತಿಗೆ ಟ್ಯೂರಿಸಂ ಮಿಷನ್‌ ಕಾಸರಗೋಡು ಜಿಲ್ಲಾ ಸಂಚಾಲಕ ದೂರವಾಣಿ-9847398283 ಸಂಪರ್ಕಿಸಬಹುದು.

ಯೋಜನೆಯ ಮೂಲಕದ ಸಾಧನೆಗಳು
1. ಪ್ರತ್ಯಕ್ಷವಾಗಿ, ಪರೋಕ್ಷವಾಗಿ 8 ಸಾವಿರ ಮಂದಿಗೆ ಉದ್ಯೋಗ ಒದಗಿಸುವ 2 ಸಾವಿರ ಆಹಾರ ಸಮೂಹ ಪ್ರಾಥಮಿಕ ಹಂತದಲ್ಲಿ ರಚನೆಗೊಳ್ಳಲಿದೆ. 2ನೇ ಹಂತದಲ್ಲಿ ಈ ಸಮೂಹ ಕನಿಷ್ಠ 30 ಸಾವಿರದಿಂದ 50 ಸಾವಿರ ಮಂದಿಗೆ ಪ್ರತ್ಯಕ್ಷವಾಗಿಯೇ ಉದ್ಯೋಗ ಒದಗಿಸಲಿದೆ.

2. ಕೇರಳೀಯ ಸಾಂಪ್ರದಾಯಿಕ ಶೈಲಿಯ ಆಹಾರ ವಿದೇಶೀಯರಿಗೆ ಪರಿಚಯಿಸಲು ಅವಕಾಶ ಲಭಿಸಲಿದೆ.

3. ಮಹಿಳಾ ಪ್ರಬಲೀಕರಣಕ್ಕೆ ಪೂರಕ ಯೋಜನೆ.

4. ಗ್ರಾಮೀಣ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪ್ರಬಲೀಕರಣ ಲಭಿಸಲಿದೆ.

5. ಪ್ರವಾಸೋದ್ಯಮದ ಪ್ರಯೋಜನಗಳನ್ನು ಸ್ಥಳೀಯರಿಗೆ ಒದಗಿಸುವುದು.

6. ಪ್ರವಾಸೋದ್ಯಮ ಮಿಷನ್‌ ಅಂಗವಾಗಿ ನೋಂದಣಿ ನಡೆಸಿರುವ ವಿವಿಧ ಯೂನಿಟ್‌ಗಳು, ಚಿಪ್ಸ್‌ ಯೂನಿಟ್‌ಗಳು, ಹಪ್ಪಳ ಯೂನಿಟ್‌ಗಳು, ತರಕಾರಿ, ಹಾಲು, ಮೊಟ್ಟೆ ಉತ್ಪಾದನೆ ಯೂನಿಟ್‌ಗಳಿಗೆ ಆದಾಯ ಲಭಿಸಲಿವೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.