ಗ್ರಾಮಕ್ಕೆ ಬಂದ ಕಾಡಾನೆಗಳು!
Team Udayavani, May 16, 2019, 6:00 AM IST
ಮಡಿಕೇರಿ: ಕಾಡಿನಿಂದ ನಾಡಿಗೆ ಬಂದ ಕಾಡಾನೆ ಹಿಂಡನ್ನು ಅರಣ್ಯ ಇಲಾಖೆ ಸಿಬಂದಿ ಮರಳಿ ಕಾಡಿಗೆ ಅಟ್ಟಿದ್ದಾರೆ.
ಎರಡು ದಿನಗಳ ಹಿಂದೆ ದುಬಾರೆ ಮೀಸಲು ಅರಣ್ಯದಿಂದ ಕಾವೇರಿ ನದಿ ದಾಟಿ ಬಂದ 13ಕ್ಕೂ ಹೆಚ್ಚು ಕಾಡಾನೆಗಳು ಅಭ್ಯತ್ ಮಂಗಲ, ವಾಲೂ°ರು, ತ್ಯಾಗತ್ತೂರು, ಒಂಟಿ ಅಂಗಡಿ, ನೆಲ್ಲಿಹುದಿಕೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡವು.
ಆನೆಗಳ ದಾಳಿಯಿಂದ ಕಾರ್ಮಿಕರು ಭಯಭೀತರಾದರು. ಹಗಲಿನಲ್ಲೂ ರಾಜಾರೋಷವಾಗಿ ರಸ್ತೆಗಳಲ್ಲೇ ನಡೆದಾಡಿದ ಆನೆಗಳನ್ನು ಕಂಡು ವಾಹನಗಳ ಸವಾರರೂ ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬಂದಿ ಕಾರ್ಯಾಚರಣೆ ನಡೆಸಿ ಮತ್ತೆ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆನೆಗಳಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಆರ್‌ಎಫ್ಒ ಅರುಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಗೌಡ, ಅರಣ್ಯ ರಕ್ಷಕ ಚರಣ್, ಸಿಬಂದಿಗಳಾದ ಧರ್ಮಪಾಲ್, ಜಗದೀಶ್, ಆಲ್ಬರ್ಟ್, ವಾಸುದೇವ, ಆರ್‌ಆರ್‌ಟಿ ತಂಡದ ಆಶಿಕ್, ಸುಬ್ರಹ್ಮಣ್ಯ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.