ವೇಗ ಪಡೆದುಕೊಂಡ ಚತುಷ್ಪಥ ರಸ್ತೆ ಕಾಮಗಾರಿ
Team Udayavani, Sep 21, 2018, 1:30 AM IST
ಪೆರ್ಲ: ಬಹು ಮಹತ್ವಾಕಾಂಕ್ಷೆಯ ಉಕ್ಕಿನಡ್ಕ ಮೆಡಿಕಲ್ ಕಾಲೇಜಿಗೆ ತೆರಳುವ ರಸ್ತೆ ಕಾಮಗಾರಿಯು ವೇಗದಿಂದ ಸಾಗುತ್ತಿದೆ. ಉಕ್ಕಿನಡ್ಕದಿಂದ ಏಳಾRನದವರೆಗೆ ಸುಮಾರು 4 ಕಿಲೋಮೀಟರ್ ದೂರದವರೆಗೆ ರಸ್ತೆಯ ಪುನರ್ನಿರ್ಮಾಣ ಕಾಮಗಾರಿಯು ನಡೆಯುತ್ತಿದೆ. ಸುಮಾರು 9 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ ಇದು. ಈಗಿರುವ ಡಾಮರು ರಸ್ತೆಯನ್ನು ಪೂರ್ತಿ ತೆಗೆದು ಉಕ್ಕಿನಡ್ಕದಿಂದ ಮೆಡಿಕಲ್ ಕಾಲೇಜಿನವರೆಗೆ, ಚತುಷ್ಪಥ ಹಾಗೂ ಅನಂತರ 7 ಮೀಟರ್ ಅಗಲದ ರಸ್ತೆಯನ್ನು ‘ಮೆಕ್ಕ್ ಡಾಂ’ ತಾಂತ್ರಿಕತೆಯಲ್ಲಿ ನಿರ್ಮಿಸಲಾಗುವುದೆಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತಿಳಿಸಿದ್ದಾರೆ. ಈಗಾಗಲೇ ತಗ್ಗು ಪ್ರದೇಶದ ರಸ್ತೆಯನ್ನು ಮಣ್ಣು ತುಂಬಿಸಿ ಸಮತಟ್ಟುಗೊಳಿಸುವುದು, ಚಿಕ್ಕ ಸಂಕಗಳನ್ನು ಅಗಲಗೊಳಿಸುವಿಕೆ, ಬದಿಗಳ ತಡೆಗೋಡೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಾಣ ಮೊದಲಾದ ಕಾಮಗಾರಿಗಳು ನಡೆಯುತ್ತಿವೆ.
ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಸಮುಚ್ಚಯದ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ.ಇದು ಸುಮಾರು 25 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಯಲ್ಲಿ ನಿರ್ಮಾಣಗೊಳ್ಳುತಿದೆ. ಆದರೆ ಇದಕ್ಕಿರುವ ಪೀಠೊಪಕರಣಗಳು, ಲ್ಯಾಬ್ ಪರಿಕರಗಳ ಖರೀದಿಯ ಕರಾರು ಇನ್ನಷ್ಟೇ ನಡೆಯಬೇಕಿದೆ. ಅದೇ ರೀತಿ ಬಹುನಿರೀಕ್ಷಿತ ಆಸ್ಪತ್ರೆಯ ನಿರ್ಮಾಣವು ಇನ್ನಷ್ಟೇ ಆಗಬೇಕಾಗಿದೆ. ಸುಮಾರು 89 ಕೋಟಿ ರೂಪಾಯಿಗಳ ವೆಚ್ಚದಲ್ಲಿ 500 ರಷ್ಟು ಬೆಡ್ ಗಳ ಆಸ್ಪತ್ರೆ ಸಮುಚ್ಚಯದ ನಿರ್ಮಾಣದ ಟೆಂಡರನ್ನು ಈರೋಡ್ (ತಮಿಳುನಾಡಿನ) ಆರ್.ಆರ್. ತುಳಸಿ ಎಂಬ ಸಂಸ್ಥೆಯು ವಹಿಸಿಕೊಂಡಿದೆ. ಇದರ ಕಾಮಗಾರಿಯು ಮುಂದಿನ ತಿಂಗಳಲ್ಲಿ ಆರಂಭಗೊಳ್ಳುವುದೆಂದು ಸಂಬಂಧಪಟ್ಟ ಎಂಜಿನಿ ಯರಿಂಗ್ ವಿಭಾಗ ತಿಳಿಸಿದೆ.ಇದೀಗ ಕಾರ್ಮಿಕರ ವಸತಿ ಹಾಗೂ ಕಚೇರಿಗಾಗಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮೆಡಿಕಲ್ ಕಾಲೇಜಿಗೆ ಅವಶ್ಯವಿರುವ ಕ್ರೀಡಾಂಗಣ, ಹಾಸ್ಟೆಲ್ ಹಾಗೂ ಇನ್ನಿತರ ಪ್ರಮುಖ ಬ್ಲಾಕ್ ಗಳ ನಿರ್ಮಾಣ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದಕ್ಕೆ ಮೊತ್ತ ಕೂಡ ಮಂಜೂರುಗೊಳ್ಳಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.