ಕೋಮು ಶಕ್ತಿಗಳಿಂದ ಮುಕ್ತಿಗೊಳಿಸಿ: ಚಂದ್ರಶೇಖರನ್
Team Udayavani, Jul 14, 2019, 5:30 AM IST
ಕುಂಬಳೆ: ಮುಂದಿನ ದಿನದಲ್ಲಿ ನಡೆಯಲಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೋಮು ಶಕ್ತಿಗಳ ಕರಾಳ ಬಾಹುಗಳಿಂದ ಮಂಜೇಶ್ವರ ಮಂಡಲವನ್ನು ವಿಮೋಚನೆಗೊಳಿಸುವ ದೃಢ ಪ್ರತಿಜ್ಞೆಯನ್ನು ಎಲ್.ಡಿ.ಎಫ್ ಕಾರ್ಯಕರ್ತರು ಕೈಗೊಳ್ಳಬೇಕೆಂದು ಸಿ.ಪಿ.ಐ ರಾಷ್ಟ್ರೀಯ ಮಂಡಳಿ ಸದಸ್ಯ ಹಾಗೂ ರಾಜ್ಯಕಂದಾಯ ಸಚಿವ ಇ. ಚಂದ್ರಶೇಖರನ್ ಕರೆ ನೀಡಿದರು.
ಹೊಸಂಗಡಿ ಎ.ಕೆ.ಜಿ ಮಂದಿರದಲ್ಲಿ ಜರಗಿದ ಎಲ್.ಡಿ.ಎಫ್ ಮಂಡಲ ನೇತಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ಪ್ರಮುಖರಾದ ಎಂ.ರಾಮಪ್ಪ, ಡಾ. ಸುಬ್ಬರಾವ್, ಸಿ.ಎಚ್ ಕುಂಞಂಬು ಮೊದಲಾದ ಎಡರಂಗದ ನಾಯಕರನ್ನು ಗೆಲ್ಲಿಸಿ ಕೊಟ್ಟ ಚರಿತ್ರೆ ಮಂಜೇಶ್ವರ ಮಂಡಲಕ್ಕಿದೆ ಎಂದು ಅವರು ನೆನಪಿಸಿದರು. ಸಿಪಿಎಂ ಕೇಂದ್ರ ಕಮಿಟಿ ಸದಸ್ಯ ಮಾಜಿ ಲೋಕಸಭಾ ಸದಸ್ಯ ಪಿ.ಕರುಣಾಕರನ್,ಎಲ್.ಡಿ.ಎಫ್ ಜಿಲ್ಲಾ ಸಂಚಾಲಕಮಾಜಿ ಶಾಸಕ ಕೆ.ಪಿ ಸತೀಶಂದ್ರನ್,ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಟಿಲ್,ಐ.ಎನ್.ಎಲ್ ದೇಶಿಯ ಉಪಾಧ್ಯಕ್ಷ ಕೆ.ಎಸ್. ಫಕ್ರುಧ್ಧೀನ್,ಜೆ.ಡಿ.ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಕೆ.ಎ.ಖಾದರ್, ಎಲ್.ಜೆ.ಡಿ ಜಿಲ್ಲಾ ಉಪಾಧ್ಯಕ್ಷ ಸಿದ್ಧಿಖ್ ಆಲಿ ಮೊಗ್ರಾಲ್ ಮಾತನಾಡಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು.ಎಲ್.ಡಿ.ಎಫ್ ಮಂಡಲ ಚುನಾವಣಾ ಸಮಿತಿಯ ಪರವಾಗಿ ಬಿ.ಎ.ರಾಜನ್, ವಿ.ಪಿ.ಪಿ ಮುಸ್ತಾಫ ವರದಿ ನೀಡಿದರು. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಸಾಹಿತಿ ಗಿರೀಶ್ ಕಾರ್ನಾಡ್,ಡಾ.ಡಿ.ಕೆ ಚೌಟ,ಸಿ.ಐ.ಟಿ.ಯು ದೇಶೀಯ ಉಪಾಧ್ಯಕ್ಷ ಬಿ.ಮಾಧವ,ಖ್ಯಾತ ನ್ಯಾಯವಾದಿ ಸೀತಾರಾಮ ಶೆಟ್ಟಿಯವರ ನಿಧನಕ್ಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ವಾಡಿ ಬಂದ್ ನಡೆಸಿ ಪ್ರತಿಭಟನೆ
Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.