Kasaragod: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
Team Udayavani, Sep 2, 2023, 4:06 PM IST
ಕಾಸರಗೋಡು: ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದು ಕಿಟಕಿ ಗಾಜು ಜಖಂಗೊಂಡಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ತಿರುವನಂತಪುರಂ ಮತ್ತು ಮುಂಬೈ ನಡುವೆ ಓಡುತ್ತಿರುವ ನೇತ್ರಾವತಿ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಯಾವುದೇ ಗಾಯಗಳ ವರದಿಯಾಗದ ಕಾರಣ ಪ್ರಯಾಣವನ್ನು ಮುಂದುವರೆಸಿದೆ. ಶುಕ್ರವಾರ ರಾತ್ರಿ 8:45ರ ಸುಮಾರಿಗೆ ಕಾಸರಗೋಡು ಜಿಲ್ಲೆಯ ಕುಂಬಳೆ ಪ್ರದೇಶದಲ್ಲಿ ರೈಲು ಓಡುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟದ ಅನೇಕ ಘಟನೆಗಳು ಕೇರಳದಿಂದ ವರದಿಯಾಗಿವೆ. ಆಗಸ್ಟ್ 21 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ನ ಕಿಟಕಿ ಗಾಜುಗಳು ಇಂತಹ ದಾಳಿಯಲ್ಲಿ ಹಾನಿಗೊಳಗಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!
Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್ ಬೆಂಡ್’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ
ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.