ಸಾಂಸ್ಕೃತಿಕ ಚಟುವಟಿಕೆಯಿಂದ ಸ್ನೇಹ ಸಮಾಜ
ಚಲನಚಿತ್ರ ಸಂಗೀತ ನಿರ್ದೇಶಕ ಎರತ್ತೋಳಿ ಮೂಸಾ ಅವರ ಸಂಸ್ಮರಣೆ
Team Udayavani, May 12, 2019, 6:00 AM IST
ಕುಂಬಳೆ: ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸ್ನೇಹದ ಸಮಾಜ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಕವಿ, ಚಲನಚಿತ್ರ ಸಂಗೀತ ನಿರ್ದೇಶಕ ಎರತ್ತೋಳಿ ಮೂಸಾ ಅವರ ಬದುಕು ಹೊಸ ತಲೆಮಾರಿಗೆ ಆದರ್ಶವಾದುದು ಎಂದು ಮುಸ್ಲಿಂ ಲೀಗ್ ಜಿಲ್ಲಾ ಕೋಶಾಧಿಕಾರಿ ಕಲ್ಲಟ್ರ ಮಾಹಿನ್ ಹಾಜಿ ಅವರು ಹೇಳಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಕವಿ, ಚಲನಚಿತ್ರ ಸಂಗೀತ ನಿರ್ದೇಶಕ ಎರತ್ತೋಳಿ ಮೂಸಾ ಅವರಿಗೆ ದುಬೈ ಮಲಬಾರ್ ಕಲಾ ಸಾಹಿತ್ಯ ವೇದಿಕೆಯು ಕುಂಬಳೆ ಪ್ರಸ್ ಫೋರಂನಲ್ಲಿ ಆಯೋಜಿಸಿದ್ದ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎರುತ್ತೋಳಿ ಮೂಸಾ ಅವರ ಸರಳ ಸಜ್ಜನಿಕೆ ಮಾದರಿಯಾದುದು. ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಎಲ್ಲರೊಂದಿಗೂ ಸ್ನೇಹದ ಕಡಲಾಗಿದ್ದ ಅವರು ಕುಂಬಳೆ, ಮೊಗ್ರಾಲ್ ಪರಿಸರದಲ್ಲಿ ವಾಸಿಸುತ್ತ ನೂರಾರು ಸ್ನೇಹಿತರನ್ನು, ಸಮಾನ ಮನಸ್ಕರನ್ನು ಒಟ್ಟು ಸೇರಿಸಿ ಮಾಪಿಳ್ಳಪ್ಪಾಟ್‌ನ ಪ್ರಚಾರಕ್ಕೆ ನೀಡಿದ ಕೊಡುಗೆ ಒಂದು ದಾಖಲೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಖ್ಯಾತ ಮಾಪಿಳ್ಳೆಪ್ಪಾಟ್ ಗಾಯಕ, ಕವಿ, ಶುಕೂರ್ ಉಡುಂಬುಂತಲ ಅವರು ಸಂಸ್ಮರಣಾ ಭಾಷಣ ಮಾಡಿದರು.
ಮಾಪಿಳ್ಳೆಪ್ಪಾಟ್ ಗಾಯಕರಾದ ಇಸ್ಮಾಯಿಲ್ ತಳಂಗರೆ, ನವಾಝ್ ಕಾಸರಗೋಡು, ವಿವಿಧ ವಲಯಗಳ ಪ್ರಮುಖರಾದ ಲಕ್ಷ¾ಣ ಪ್ರಭು ಕುಂಬಳೆ, ಅನ್ವರ್ ಸದಾತ್ ಕೋಳಿಯಡ್ಕ, ಸತ್ತಾರ್ ಆರಿಕ್ಕಾಡಿ, ಬಿ.ಎಲ್.ಮೊಹಮ್ಮದಾಲಿ, ಪ್ರಸ್ ಕ್ಲಬ್ ಅಧ್ಯಕ್ಷ ಸುರೇಂದ್ರನ್ ಚೀಮೇನಿ, ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಲತೀಫ್ ಕುಂಬಳೆ, ಲತೀಫ್ ಮಾಸ್ತರ್, ಸತ್ತಾರ್ ಮಾಸ್ತರ್, ಸಿದ್ದೀಕ್ ದಂಡೆಗೋಳಿ ಉಪಸ್ಥಿತರಿದ್ದು ಮಾತನಾಡಿದರು.
ಈ ಸಮಾರಂಭದಲ್ಲಿ ದುಬೈ ಮಲಬಾರ್ ಕಲಾ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಾಳೆì ಅವರು ಸ್ವಾಗತಿಸಿದರು. ಶರೀಫ್ ಕೋಟಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.