ಬಾಲಗೋಕುಲದಿಂದ ಹಿಂದೂ ಸಂಸ್ಕೃತಿ ಕಲಿಕೆ ಸಾಧ್ಯ: ದೇವದಾಸ್
Team Udayavani, Jun 4, 2019, 6:00 AM IST
ವಿದ್ಯಾನಗರ: ದೇಶದ ಧರ್ಮ ಮತ್ತು ಇತಿಹಾಸವನ್ನು ಮಕ್ಕಳಿಗೆ ಬೋಧಿಸುವ ಬಾಲಗೋಕುಲಗಳು ಹಿಂದೂ ಧರ್ಮದ ಸಂಸ್ಕೃತಿಯನ್ನು ಕಲಿಸುವ ಪಾಠಶಾಲೆ ಎಂದು ಬಾಲಗೋಕುಲ ತಾಲೂಕು ಸಮಿತಿ ಕಾರ್ಯದರ್ಶಿ ದೇವದಾಸ್ ನುಳ್ಳಿಪ್ಪಾಡಿ ಹೇಳಿದರು.
ಅವರು ಅಣಂಗೂರಿನ ಶಾರದಾ ಬಾಲಗೋಕುಲದ ದ್ವಿತೀಯ ವರ್ಷದ ಪುಸ್ತಕ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. .ಬಾಲಗೋಕುಲಗಳು ಜ್ಞಾನವನ್ನು ಬೆಳಗಿಸುವ ಕೇಂದ್ರಗಳಾಗಿದ್ದು ನಾಯಕತ್ವ ಗುಣವನ್ನು ಬೆಳೆಸುವ ಕೆಲಸ ಮಾಡುತ್ತದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಧೆ„ರ್ಯ ಮತ್ತು ಮನೋಬಲವನ್ನು ತುಂಬಿ ಸುದೃಢ ಪ್ರಜೆಗಳನ್ನು ಸೃಷ್ಠಿಸುತ್ತದೆ. ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಜಾಗೃತಗೊಳಿಸಿ ಸ್ಪರ್ಧಾತ್ಮಕ ಮನೋಭಾವದಿಂದ ದೂರವಿರಿಸಿ ತನ್ನತನದಿಂದ ತಾನು ಬೆಳೆಸು ಬರುವಂತೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾರದಾ ಬಾಲಗೋಕುಲ ಸಮಿತಿಯ ಅಧ್ಯಕ್ಷ ದಿನೇಶ್ ಕೊಲ್ಲಂಬಾಡಿ ಮಕ್ಕಳಿಗೆ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಕಲಿಸುವಲ್ಲಿ ಬಾಲಗೋಕುಲ ಮಹತ್ವದ ಪಾತ್ರವಹಿಸುತ್ತದೆ ಎಂದರು. ಎನ್.ಎಸ್.ಎಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಅಣಂಗೂರು ಶುಭಾಶಂಸನೆಗೈದರು. ಬಾಲಗೋಕುಲ ಶಿಕ್ಷಕಿ ಉಷಾಸುರೇಶ್, ಸುರೇಶ್ ಅಣಂಗೂರು, ಎಂ.ಡಿ.ವಿಜಯನ್, ವಿಷ್ಣು ಇನೀವೇ, ವಿಘ್ನೇಶ್, ಪ್ರವೀಣ್, ಅನಂತೇಶ್ವರ ಶೆಟ್ಟಿ, ಬಾಲಗೋಕುಲ ನಗರ ಪ್ರಮುಖ್ ಭಾಗ್ಯರಾಜ್ ನುಳ್ಳಿಪ್ಪಾಡಿ ಉಪಸ್ಥಿತರಿದ್ದರು ಬಾಲಗೋಕುಲದ 73 ವಿದ್ಯಾಥಿ- ವಿದ್ಯಾರ್ಥಿನಿಯರಿಗೆ ಪುಸ್ತಕಗಳನ್ನು ವಿತರಿಸಲಾಯಿತು. ರಕ್ಷಿತಾ ಸುನಿಲ್ ಮತ್ತು ಸಮನ್ವಿತಾ ಗಣೇಶ್ ಪ್ರಾರ್ಥನೆ ಹಾಡಿದರು. ಗ್ರೀಷ್ಮಾ ಸ್ವಾಗತಿಸಿದರು. ಅಪೇಕ್ಷಾ
ವಂದಿಸಿದರು. ಆದಿರಾ ಕಾರ್ಯಕ್ರಮ ನಿರೂಪಿಸಿದರು
ಪ್ರಯತ್ನವಿದ್ದಲ್ಲಿ ಅನುಗ್ರಹ
ಪ್ರಯತ್ನತೇ ಪರಮೇಶ್ವರ ಎನ್ನುವಂತೆ ಪ್ರಯತ್ನವಿದ್ದಲ್ಲಿ ಅನುಗ್ರಹವಿದೆ.ಶಿಕ್ಷಕಿಯರ ಶ್ರಮ ಮತ್ತು ಸಾಮಾಜಿಕ ಕಳಕಳಿ ಬಾಲಗೋಕುಲದ ಬಲ. ಶಾರದಾ ಬಾಲಗೋಕುಲ ಹದಿಮೂರು ವರುಷ ಪೂರ್ತಿಗೊಳಿಸುವಾಗ ನೂರಾರು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ನೀಡಿ ಅನುಗ್ರಹಿಸಿದೆ. ಜಿಲ್ಲೆಯ ಬಾಲಗೋಕುಲಗಳಲ್ಲಿ ಮಹತ್ವದ ಸ್ಥಾನ ಈ ಬಾಲಗೋಕುಲಕ್ಕಿದೆ. ಅತ್ಯಂತ ಜವಾಬ್ದಾರಿಯುತವಾಗಿದ್ದು ಶಿಸ್ತಬದ್ಧವಾದ, ನೇರವಾದ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿರುವುದೇ ಶಾರದಾ ಬಾಲಗೋಕುಲದ ವಿಶೇಷತೆ.
ದಿನೇಶ್ ಕೊಲ್ಲಂಬಾಡಿ,
ಅಧ್ಯಕ್ಷ ಶಾರದಾ ಬಾಲಗೋಕುಲ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.