ಬೇಕಲ ಕೋಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಫಲ-ಪುಷ್ಪ ಮೇಳ
Team Udayavani, Dec 25, 2019, 4:28 PM IST
ಫಲ-ಪುಷ್ಪ ಮೇಳವನ್ನು ವೀಕ್ಷಿಸುತ್ತಿರುವ ಸಚಿವ ಇ.ಚಂದ್ರಶೇಖರನ್, ಜಿಲ್ಲಾಧಿಕಾರಿ ಡಾ|ಸಜಿತ್‌ಬಾಬು.
ಕಾಸರಗೋಡು: ‘ಪ್ರವಾಸಿಗರೇ ಬನ್ನಿ…ಈ ಬಾರಿಯ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಯನ್ನು ಬೇಕಲ ಕೋಟೆಯಲ್ಲಿ ಆಚರಿಸೋಣ…’ ಎಂಬ ಘೊಷಣೆಯೊಂದಿಗೆ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಅಗ್ರಿ ಹಾರ್ಟಿ ಸೊಸೈಟಿ ನೇತೃತ್ವದಲ್ಲಿ ಆಯೋಜಿಸಿದ ಕೃಷಿ-ಸಸ್ಯ-ಫಲ-ಪುಷ್ಪ ಮೇಳ ಕಣ್ಮನ ಸೆಳೆಯುತ್ತಿದೆ.
2010 ಜನವರಿ 1 ರವರೆಗೆ ಬೇಕಲ ಕೋಟೆಯಲ್ಲಿ ನಡೆಯುವ ಮೇಳವನ್ನು ಪ್ರವಾಸಿಗರನ್ನು ಪ್ರಧಾನ ಗುರಿಯಾಗಿರಿಸಿ ಆಯೋಜಿಸಲಾಗಿದೆ. ರಂಗು ರಂಗಿನ ಹೂಗಳು, ವಿವಿಧ ಜಾತಿಯ ಗಿಡ – ಬಳ್ಳಿಗಳು ಆಕರ್ಷಣೆಯ ಕೇಂದ್ರವಾಗಿದೆ.
ಆರ್ಕಿಡ್, ಆಂತೂರಿಯಂ, ತರಕಾರಿ, ಹೂದಾನಿಗಳಲ್ಲಿ ಬೆಳಸುವ ಗುಲಾಬಿ ಸಹಿತ ಹೂವುಗಳಲ್ಲದೆ ಕ್ಯಾಕ್ಟಸ್, ಬೋನ್ಸಾಯ್ ಇತ್ಯಾದಿಗಳೂ, ತೆಂಗಿನಗೊನೆ, ಅಡಕೆ ಗೊನೆ, ಗಡ್ಡೆಗಳು, ವಿವಿಧ ಹಣ್ಣುಗಳ ಗಿಡಗಳು, ತರಕಾರಿ, ಮೆಣಸು, ಔಷಧ ಸಸ್ಯಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು ಗಮನ ಸೆಳೆಯುತ್ತಿದೆ.
ಮುಂದಿನ ವರ್ಷ ಹೆಚ್ಚಿನ ಪ್ರೋತ್ಸಾಹ: ಮುಂದಿನ ವರ್ಷಗಳಿಂದ ಕೃಷಿಕರು ಉತ್ಪಾದಿಸುವ ಉತ್ಪನ್ನಗಳನ್ನು ಶೇಖರಿಸಿ ಬೇಕಲ ಕೃಷಿ, ಫಲ, ಪುಷ್ಟ ಮೇಳವನ್ನು ಜನರನ್ನು ಇನ್ನಷ್ಟು ಆಕರ್ಷಿಸುವ ರೀತಿಯಲ್ಲಿ ವ್ಯವಸ್ಥೆಗೊಳಿಸಲು ನೂತನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಜಿಲ್ಲೆಯ ಕೃಷಿಕರು ಉತ್ಪಾದಿಸುವ ಉತ್ಪನ್ನಗಳನ್ನು ಬೇಕಲ ಫೆಸ್ಟ್‌ನಲ್ಲಿ ಪ್ರದರ್ಶಿಸಲು ವಿದೇಶಿಯರನ್ನೂ, ಸ್ವದೇಶಿಯರನ್ನೂ ಕೃಷಿಯತ್ತ ಆಕರ್ಷಿಸುವುದಕ್ಕಾಗಿ ನೂತನ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೃಷಿಕರಿಗೂ ಹೆಚ್ಚಿನ ಸಹಾಯಕವಾಗುವುದು. ಮುಂದಿನ ವರ್ಷಗಳಲ್ಲಿ ವಿಪುಲವಾದ ರೀತಿಯಲ್ಲಿ ಕೃಷಿ ಫಲಪುಷ್ಪ ಮೇಳವನ್ನು ಆಕರ್ಷಿಸುವ ರೀತಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ ಅಧ್ಯಕ್ಷತೆ ವಹಿಸಿದರು. ಪಳ್ಳಿಕೆರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಲತೀಫ್, ಕಾಂಞಂಗಾಡು ಬ್ಲಾಕ್ ಪಂಚಾಯತ್ ಸದಸ್ಯೆ ಅಸುರಾಬಿ, ಪಳ್ಳಿಕರೆ ಗ್ರಾಮ ಪಂಚಾಯತ್ ಸದಸ್ಯೆ ಎಂ.ಜಿ.ಆಯಿಷ, ಕಾಸರಗೋಡು ಪ್ರಿನ್ಸಿಪಲ್ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ, ಕಾಸರಗೋಡು ಕೃಷಿ ಡೆಪ್ಯೂಟಿ ಡೈರೆಕ್ಟರ್ ಆರ್.ವೀಣಾ ರಾಣಿ, ಪ್ರೋಗ್ರಾಂ ಸಮಿತಿ ಸಂಚಾಲಕ ಎಂ.ಎ.ಲತೀಫ್ ಹಾಗು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾಧಿಕಾರಿ ಡಾ|ಸಜಿತ್ ಬಾಬು ಸ್ವಾಗತಿಸಿದರು. ಪೊಗ್ರಾಂ ಸಮಿತಿ ಅಧ್ಯಕ್ಷ ಕೆ.ರವೀಂದ್ರನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.